ಗೃಹ ಜ್ಯೋತಿ ಯೋಜನೆಗೆ ಅರ್ಜಿ ಸಲ್ಲಿಕೆ ಇಂದಿನಿಂದ ಆರಂಭ : ಮೊಬೈಲ್‌ನಲ್ಲೂ ನೋಂದಣಿ ಸೌಲಭ್ಯ, ಇಲ್ಲಿದೆ ಲಿಂಕ್, 2 ದಾಖಲೆ ಅಗತ್ಯ
ಬೆಂಗಳೂರು: ರಾಜ್ಯ ಸರ್ಕಾರದ ಮಾಸಿಕ 200 ಯೂನಿಟ್‌ವರೆಗೆ ಉಚಿತ ವಿದ್ಯುತ್ ಸೌಲಭ್ಯ ಕಲ್ಪಿಸುವ ‘ಗೃಹ ಜ್ಯೋತಿ’ ಯೋಜನೆಗೆ ಫಲಾನುಭವಿಗಳ ನೋಂದಣಿ ಇಂದಿನಿಂದ (ಜೂನ್ 18) ಆರಂಭವಾಗಲಿದೆ. ಯೋಜನೆಯ ಸೌಲಭ್ಯ ಪಡೆಯಲು ಫಲಾನುಭವಿಗಳು ಸೇವಾ ಸಿಂಧು ಪೋರ್ಟಲ್‌ನಲ್ಲಿ ವಿಶೇಷವಾಗಿ ರೂಪಿಸಲಾಗಿರುವ ವೆಬ್‌ಪುಟಕ್ಕೆ ಲಾಗಿನ್ ಆಗಬೇಕು. ಆ ಪೋರ್ಟಲ್‌ನಲ್ಲಿ ಕೇಳಿರುವ ಮಾಹಿತಿಯನ್ನು ನೀಡುವ ಮೂಲಕ ಯೋಜನೆಗೆ ಹೆಸರು ನೋಂದಾಯಿಸಬಹುದು. … Continued