ಭಾರಿ ಮಳೆ ಹಿನ್ನೆಲೆ : ನಾಳೆಯೂ ದಕ್ಷಿಣ ಕನ್ನಡದ ಶಾಲಾ-ಕಾಲೇಜುಗಳಿಗೆ ರಜೆ

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಾಳೆಯೂ ಮಳೆ ಮುಂದುವರಿಯುವ ಸಾಧ್ಯತೆ ಇರುವುದರಿಂದ ಜಿಲ್ಲೆಯ ಎಲ್ಲಾ ಶಿಕ್ಷಣ ಸಂಸ್ಥೆಗಳಿಗೆ ಜುಲೈ 1ರ ಶುಕ್ರವಾರ ರಜೆ ನೀಡಿ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಡಾ. ಕೆ.ವಿ ರಾಜೇಂದ್ರ ಆದೇಶ ಮಾಡಿದ್ದಾರೆ. ಭಾರತೀಯ ಹವಾಮಾನ ಇಲಾಖೆಯು ಶುಕ್ರವಾರದ ಬೆಳಗ್ಗೆ 8:30ರವರೆಗೆ ಜಿಲ್ಲೆಯಲ್ಲಿ ಆರೆಂಜ್ ಅಲರ್ಟ್ ಘೋಷಿಸಿದೆ. ಆದರೆ ನಾಳೆಯೂ ಧಾರಾಕಾರ ಮಳೆ … Continued

ಧಾರಾಕಾರ ಮಳೆಗೆ ಇಬ್ಭಾಗವಾದ ರಸ್ತೆ: ತಲೆಕೆಳಗಾಗಿ ಸಿಲುಕಿಕೊಂಡ ಕಾರು..!

ಕೆಆರ್ ಪೇಟೆ: ರಾತ್ರಿ ಸುರಿದ ಭಾರೀ ಮಳೆಯಿಂದ ಪ್ರವಾಹಕ್ಕೆ ಕೆ. ಆರ್. ಪೇಟೆ ತಾಲೂಕು ಶೀಳನೆರೆ ಹೋಬಳಿ ಹುಣಸನಹಳ್ಳಿ ಹೆಚ್ ಬಳ್ಳೇಕೆರೆ ಗ್ರಾಮಕ್ಕೆ ಹಾದು ಹೋಗುವ ರಸ್ತೆ ಕೊಚ್ಚಿಕೊಂಡು ಹೋಗಿದೆ. ಇದೇ ಸಮಯದಲ್ಲಿ ಕಾರೊಂದು ಈ ರಸ್ತೆಯ ಕೊಚ್ಚಿಹೋದ ಭಾಗದಲ್ಲಿ ತಲೆಕೆಳಗಾಗಿ ಬಿದ್ದು ಸಿಲುಕಿಕೊಂಡಿದೆ. ಕಾರಿನಲ್ಲಿದ್ದವರು ಅದೃಷ್ಟವಶಾತ್ ಪಾರಾಗಿದ್ದಾರೆ ಎಂದು ಆದೋಲನ.ಇನ್‌ ವರದಿ ಮಾಡಿದೆ. ಮಳೆಯ … Continued

ಕರ್ನಾಟಕದಲ್ಲಿ ಸೆಪ್ಟೆಂಬರ್ 15ರ ವರೆಗೂ ಮಳೆ ಜೋರು: 7 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್..

ಬೆಂಗಳೂರು: ರಾಜ್ಯದಲ್ಲಿ ಸೆಪ್ಟೆಂಬರ್ 15ರ ವರೆಗೂ ಹಲವೆಡೆ ಭಾರಿ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದ್ದು 7 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ. ಮುಖ್ಯವಾಗಿ ಕರಾವಳಿ ಜಿಲ್ಲೆಗಳಾದ ಉತ್ತರ ಕನ್ನಡ, ಉಡುಪಿ ಹಾಗೂ ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ಅಧಿಕ ಮಳೆಯಾಗಲಿದೆ. ದಕ್ಷಿಣ ಒಳನಾಡಿನ ಜಿಲ್ಲೆಗಳಾದ ಚಿಕ್ಕಮಗಳೂರು, ಹಾಸನ, ಕೊಡಗು, ಶಿವಮೊಗ್ಗದಲ್ಲೂ ಹೆಚ್ಚು ಮಳೆಯಾಗಲಿದ್ದು,ಈ ಏಳು … Continued

ಮಳೆ ಅಬ್ಬರ: ಬಸವಸಾಗರದಿಂದ 3 ಲಕ್ಷ ಕ್ಯೂಸೆಕ್‌ ನೀರು ಬಿಡುವ ಸಾಧ್ಯತೆ..!

ಯಾದಗಿರಿ: ಕೃಷ್ಣಾ ನದಿಗೆ ಪ್ರಸಕ್ತ 2.30 ಲಕ್ಷ ಕ್ಯೂಸೆಕ ನೀರು ಬಿಡಲಾಗಿದ್ದು, ಇನ್ನೂ ಕೆಲವು ಗಂಟೆಗಳಲ್ಲಿ 3 ಲಕ್ಷ ಕ್ಯೂಸೆಕ್‌  ನೀರು ಬಿಡುವ ಸಾಧ್ಯತೆ ಇದೆ ಎಂದು ಜಿಲ್ಲಾಧಿಕಾರಿ ಡಾ. ರಾಗಪ್ರಿಯಾ ಅವರು ತಿಳಿಸಿದ್ದಾರೆ. ಪ್ರಸ್ತುತ ಕೃಷ್ಣಾ ನದಿಯಿಂದ 2,30,680 ಕ್ಯೂಸೆಕ್‌ ಹಾಗೂ ಭೀಮಾ ನದಿಯಿಂದ 13,500 ಕ್ಯೂಸೆಕ್‌ ನೀರು ಬಿಡುಗಡೆ ಮಾಡಲಾಗಿದೆ. ಶುಕ್ರವಾರ ನಾರಾಯಣಪುರ … Continued

ನೀರಿನಲ್ಲಿ ಕೊಚ್ಚಿಹೋದ ದಂಪತಿ

ಹುಬ್ಬಳ್ಳಿ: ಕರಾವಳಿ ಕೆಲವು ಭಾಗಗಳು ಹಾಗೂ ಉತ್ತರ ಕರ್ನಾಟಕದ ವಿಜಯಪುರ, ಬಳ್ಳಾರಿ, ವಿಜಯನಗರ ಸೇರಿದಂತೆ ಕೆಲವು ಜಿಲ್ಲೆಗಳಲ್ಲಿ ಮಳೆ ಜೋರಾಗಿ ಸುರಿಯುತ್ತಿದೆ. ವಿಜಯನಗರ ಜಿಲ್ಲೆಯಲ್ಲಿ ದಂಪತಿ ನೀರಿನಲ್ಲಿ ಕೊಚ್ಚಿ ಹೋಗಿದ್ದಾರೆ. ಹಗರಿಬೊಮ್ಮಹಳ್ಳಿ ತಾಲೂಕಿನ ತಂಬ್ರಹಳ್ಳಿ-ಮುತ್ಕೂರು ಗ್ರಾಮದ ನಿವಾಸಿಗಳಾದ ಮಲ್ಲಿಕಾರ್ಜುನ (55 ) ಹಾಗೂ ಸುಮಂಗಲಾ(48 ) ನೀರಿನಲ್ಲಿ ಕೊಚ್ಚಿಹೋದ ದಂಪತಿ. ಹೂವಿನಹಡಗಲಿ ತಾಲೂಕಿನ ಕಾಲ್ವಿ ಗ್ರಾಮದಲ್ಲಿ … Continued

ಹಿನ್ನೀರು ಪ್ರದೇಶದಲ್ಲಿ ಭಾರೀ ಮಳೆ : ಕದ್ರಾ ಅಣೆಕಟ್ಟಿನಿಂದ ಒಟ್ಟು  26,916 ಕ್ಯೂಸೆಕ್ ನೀರು ಹೊರಕ್ಕೆ

ಕಾರವಾರ: ತಾಲೂಕಿನ ಕದ್ರಾ ಜಲಾಶಯದ ಹಿನ್ನೀರು ಪ್ರದೇಶದಲ್ಲಿ ಹೆಚ್ಚಿನ ಮಳೆಯಾಗುತ್ತಿರುವುದರಿಂದ ಅಣೆಕಟ್ಟಿನ ಗರಿಷ್ಠ ಮಟ್ಟವು ಶೀಘ್ರವೇ ತಲುಪುವು ಸಾಧ್ಯತೆ ಇರುವುದರಿಂದ ಮುನ್ನೆಚ್ಚರಿಕಾ ಕ್ರಮವಾಗಿ ಮೂರು ಕ್ರಸ್ಟ್ ಗೇಟ್‍ಗಳನ್ನು ತೆರೆದು ನೀರು ಬಿಡುಗಡೆ ಮಾಡಲಾಗಿದೆ. ಕದ್ರಾ ಜಲಾಶಯದ ಗರಿಷ್ಠ ಮಟ್ಟವು 34.50 ಮೀ. ಗಳಾಗಿದ್ದು ಸದ್ಯ 31.42 ಮೀ. ತಲುಪಿದೆ. ಇನ್ನು ಒಳ ಹರಿವಿನ ಪ್ರಮಾಣ ಶನಿವಾರ … Continued

ಯಾದಗಿರಿಯಲ್ಲಿ 4 ತಾಸು ಸುರಿದ ಗುಡುಗು-ಮಿಂಚು ಸಹಿತ ಅಬ್ಬರದ ಮಳೆ

ಯಾದಗಿರಿ: ಕರ್ನಾಟಕದ ಬಿಸಿಲು ನಾಡು ಎಂದು ಖ್ಯಾತಿ ಹೊಂದಿರುವ ಯಾದಗಿರಿಯಲ್ಲಿ ಮಧ್ಯಾಹ್ನ 4 ಗಂಟೆಗೂ ಹೆಚ್ಚು ಕಾಲ ಅಕಾಲಿಕ ಗುಡುಗು-ಮಿಂಚು ಭಾರಿ ಮಳೆ ಸುರಿಯಿತು. ಸುರಿದ ಬಾರಿ ಮಳೆಯಿಂದ ನಗರದಲ್ಲಿ ರಸ್ತೆ ಹಾಗೂ ಚರಂಡಿಗಳಲ್ಲಿ ಅಪಾರ ಪ್ರಮಾಣದಲ್ಲಿ ನೀರು ತುಂಬಿ ಹರಿದು ಜನಜೀವನ ಅಸ್ತವ್ಯಸ್ತಗೊಂಡಿತು. ಬಾರಿ ಗಾಳಿ-ಮಳೆಗೆ ನಗರಸಭೆ ಎರಡನೇ ಅಂತಸ್ತಿನ ಸಭಾಂಗಣದ ಮೇಲ್ಛಾವಣಿ ಕುಸಿದು … Continued