ಹೈಕೋರ್ಟ್‌ನಲ್ಲಿ ಹಿಜಾಬ್‌ ಪ್ರಕರಣ: ಸಾರ್ವಜನಿಕ ಸ್ಥಳದಲ್ಲಿ ನಾವು ಹಿಜಾಬ್ ತೆಗೆಯುವುದಿಲ್ಲ ಎಂಬ ವಿದ್ಯಾರ್ಥಿನಿಯರ ಹೇಳಿಕೆ ಸುಳ್ಳು, ಆಧಾರ್ ಕಾರ್ಡಿನಲ್ಲಿ ಹಿಜಾಬ್ ಧರಿಸಿಲ್ಲ: ವಕೀಲ ನಾಗಾನಂದ

ಬೆಂಗಳೂರು: ಶಿಕ್ಷಕರ ಪರ ವಕಾಲತ್ತು ವಹಿಸಿರುವ ಹಿರಿಯ ವಕೀಲ ಎಸ್ ನಾಗಾನಂದ ಅವರು, ಬುಧವಾರ ವಾದ ಮುಂದುವರಿಸಿದರು. ಇಬ್ಬರು ಅರ್ಜಿದಾರರು ಸಾರ್ವಜನಿಕ ಸ್ಥಳದಲ್ಲಿ ತಾವು ಯಾವಾಗಲೂ ಹಿಜಾಬ್ ಧರಿಸಿಯೇ ಇರುತ್ತೇವೆ ಎಂಬ ವಿದ್ಯಾರ್ಥಿನಿಯರ ಹೇಳಿಕೆ ಸತ್ಯವಲ್ಲ ಎಂದು ವಾದಿಸಿದ ಅವರು, ಇಬ್ಬರು ಅರ್ಜಿದಾರರು ಹಿಜಾಬ್ ಧರಿಸದ ಆಧಾರ್ ಕಾರ್ಡ್ ಚಿತ್ರವನ್ನು ಅವರು ನ್ಯಾಯಾಲಯದ ಗಮನಕ್ಕೆ ತಂದರು. … Continued