ಇಸ್ಕಾನ್ ದೊಡ್ಡ ಮೋಸಗಾರ, ಗೋವುಗಳನ್ನು ಕಟುಕರಿಗೆ ಮಾರುತ್ತದೆ: ಮೇನಕಾ ಗಾಂಧಿ ಆರೋಪ, ಅಲ್ಲಗಳೆದ ಇಸ್ಕಾನ್‌ ವಕ್ತಾರ

ನವದೆಹಲಿ: ಬಿಜೆಪಿ ಸಂಸದೆ ಮೇನಕಾ ಗಾಂಧಿ ಅವರು ಇಂಟರ್‌ನ್ಯಾಶನಲ್ ಸೊಸೈಟಿ ಫಾರ್ ಕೃಷ್ಣ ಕಾನ್ಶಿಯಸ್‌ನೆಸ್ (ಇಸ್ಕಾನ್) ಮೇಲೆ ಮಾಡಿರುವ ಆರೋಪ ಈಗ ಭಾರೀ ಚರ್ಚೆಗೆ ಕಾರಣವಾಗಿದೆ. ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ವೀಡಿಯೋದಲ್ಲಿ ಇಸ್ಕಾನ್‌ ಸಂಘಟನೆಯನ್ನು ದೇಶದ “ದೊಡ್ಡ ಮೋಸಗಾರ” ಎಂದು ಕರೆದಿದ್ದಾರೆ ಹಾಗೂ ಇಸ್ಕಾನ್ ತಮ್ಮ ಗೋಶಾಲೆಗಳಿಂದ (ಗೋಶಾಲೆಗಳಿಂದ) ಕಟುಕರಿಗೆ ಹಸುಗಳನ್ನು ಮಾರಾಟ ಮಾಡುತ್ತದೆ ಎಂದು … Continued