70ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಘೋಷಣೆ : ಕಾಂತಾರದ ರಿಷಬ್ ಶೆಟ್ಟಿಗೆ ಅತ್ಯುತ್ತಮ ನಟ ಪ್ರಶಸ್ತಿ ; ಪ್ರಶಸ್ತಿ ಪಡೆದವರ ವಿವರ ಇಲ್ಲಿವೆ

ನವದೆಹಲಿ: ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳನ್ನು ಶುಕ್ರವಾರ ಪ್ರಕಟಿಸಲಾಗಿದ್ದು, ಕನ್ನಡದ “ಕಾಂತಾರ” ಚಿತ್ರಕ್ಕಾಗಿ ರಿಷಬ್ ಶೆಟ್ಟಿ ಅವರಿಗೆ ಅತ್ಯುತ್ತಮ ನಟ ಪ್ರಶಸ್ತಿ ಲಭಿಸಿದೆ. ಅತ್ಯುತ್ತಮ ನಟಿ ಪ್ರಶಸ್ತಿಯನ್ನು ತಮಿಳು ಚಿತ್ರ ‘ತಿರುಚಿತ್ರಂಬಲಂ’ಗಾಗಿ ಪಡೆದ ನಿತ್ಯಾ ಮೆನೆನ್ ಮತ್ತು ಗುಜರಾತಿ ಚಿತ್ರ “ಕಚ್ ಎಕ್ಸ್‌ಪ್ರೆಸ್” ಗಾಗಿ ಮಾನಸಿ ಪರೇಖ್ ಹಂಚಿಕೊಂಡಿದ್ದಾರೆ. ಮಲಯಾಳಂ ಚಲನಚಿತ್ರ “ಆಟ್ಟಂ: ದಿ ಪ್ಲೇ” ಅತ್ಯುತ್ತಮ … Continued

ಇನ್ಸ್ಟಾಗ್ರಾಂನಲ್ಲಿ ಪಂಜುರ್ಲಿ ದೈವದ ರೀಲ್ಸ್: ಧರ್ಮಸ್ಥಳಕ್ಕೆ ಬಂದು ತಪ್ಪು ಕಾಣಿಕೆ ಅರ್ಪಿಸಿದ ಆಂಧ್ರದ ಯುವತಿ

ಮಂಗಳೂರು: ““ಕಾಂತಾರ’ ಚಲನ ಚಿತ್ರದಲ್ಲಿರುವ ದೈವದ ಪಾತ್ರದಂತೆ ಮುಖವರ್ಣಿಕೆ ಮಾಡಿಕೊಂಡು ಇನ್ಸ್ಟಾಗ್ರಾಂನಲ್ಲಿ ಹಂಚಿಕೊಂಡ ನಂತರ ಸಾಮಾಜಿಕ ಜಾಲತಾಣದಲ್ಲಿ ಭಾರೀ ವಿರೋಧ ವ್ಯಕ್ತವಾದ ನಂತರ ಹಾಗೂ ಅನಾರೋಗ್ಯವಾದ ಹಿನ್ನೆಲೆಯಲ್ಲಿ ಹೈದರಾಬಾದ್‌ ಮೂಲದ ಶ್ವೇತಾ ರೆಡ್ಡಿ ಅವರು ಧರ್ಮಸ್ಥಳಕ್ಕೆ ಬಂದು ತಪ್ಪು ಕಾಣಿಕೆ ಸಲ್ಲಿಸಿದ್ದಾರೆ. ಹೈದರಾಬಾದ್ ಮೂಲದ ಮೇಕಪ್ ಕಲಾವಿದೆ ಶ್ವೇತಾ ರೆಡ್ಡಿ ಅವರು ನವೆಂಬರ್‌ 3ರಂದು ಧರ್ಮಸ್ಥಳಕ್ಕೆ … Continued

ಕಾಂತಾರ ಸಿನೆಮಾ ‘ವರಾಹರೂಪಂ’ ಹಾಡಿಗೆ ನ್ಯಾಯಾಲಯದ ನಿರ್ಬಂಧ

ಕೋಯಿಕ್ಕೋಡ್: ರಿಷಬ್ ಶೆಟ್ಟಿ ನಿರ್ದೇಶಿಸಿ, ನಟಿಸಿರುವ ಕಾಂತಾರ (Kantara) ಸಿನಿಮಾದ ಹಾಡೊಂದು ಕಾನೂನು ಸಂಕಷ್ಟಕ್ಕೆ ಸಿಲುಕಿಕೊಂಡಿದೆ. ಸಿನಿಮಾದಲ್ಲಿ ಬಳಸದಂತೆ ಕೋರ್ಟ್‌ ತಡೆಯಾಜ್ಞೆ ನೀಡಿದೆ. ಈ ಕುರಿತು ತೈಕುಡಂ ಬ್ರಿಡ್ಜ್ ಬ್ಯಾಂಡ್ ಸಾಮಾಜಿಕ ಜಾಲತಾಣ ಇನ್‌ಸ್ಟಾಗ್ರಾಂನಲ್ಲಿ ಪ್ರಕಟಿಸಿದೆ. ಕನ್ನಡ ಚಲನಚಿತ್ರ ‘ಕಾಂತಾರ’ ಚಿತ್ರದ ನಿರ್ಮಾಪಕರಿಗೆ ‘ತೈಕ್ಕುಡಂ ಬ್ರಿಡ್ಜ್’ ಎಂಬ ಮ್ಯೂಸಿಕ್ ಬ್ಯಾಂಡ್‌ನ ಅನುಮತಿಯಿಲ್ಲದೆ ಸಿನಿಮಾದ ಕ್ಲೈಮ್ಯಾಕ್ಸ್ ನಲ್ಲಿ … Continued

ನಟ ಚೇತನ್ ವಿರುದ್ಧ ನಾವು ಪಂಜುರ್ಲಿ ದೈವಕ್ಕೆ ದೂರು ಕೊಡ್ತೇವೆ

ಉಡುಪಿ: “ಕಾಂತಾರ” ಸಿನಿಮಾ ಸದ್ಯ ಅಂತಾರಾಷ್ಟೀಯ ಮಟ್ಟದಲ್ಲಿ ಸದ್ದು ಮಾಡುತ್ತಿದೆ. ಚಿತ್ರದಲ್ಲಿ ತೋರಿಸಿರುವ ಭೂತಾರಾಧನೆಯ ಕುರಿತಾಗಿ ಹಲವರು ಪರ, ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ಅದರಲ್ಲಿಯೂ ನಟ ಚೇತನ್ ದೈವದ ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡಿ, ಹಲವರ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ಈಗ ಭೂತಾರಾಧನೆಯ ಕುರಿತು ವಿವಾದಾತ್ಮಕ ಹೇಳಿಕೆ ನೀಡಿರುವ ನಟ ಚೇತನ್ ವಿರುದ್ಧ ಇದೀಗ ಪಂಜುರ್ಲಿ ದೈವಕ್ಕೆ ದೂರು … Continued