ದೈವಕ್ಕೆ ಅಪಮಾನ ; ಮೈಸೂರು ಚಾಮುಂಡೇಶ್ವರಿ ದೇವಿಯ ಮುಂದೆ ಕ್ಷಮೆಯಾಚಿಸಿದ ನಟ ರಣವೀರ ಸಿಂಗ್

ಮೈಸೂರು:  ಬಾಲಿವುಡ್‌ ನಟ ರಣವೀರ ಸಿಂಗ್ ಅವರು ಮಂಗಳವಾರ (ಮೇ 26) ಬೆಳಿಗ್ಗೆ ಮೈಸೂರಿನ ಚಾಮುಂಡೇಶ್ವರಿ ದೇವಸ್ಥಾನಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದ್ದಾರೆ. ‘ಕಾಂತಾರ’ ಚಿತ್ರದ ದೈವದ ದೃಶ್ಯವನ್ನು ಅಣಕಿಸಿದ ವಿವಾದಕ್ಕೆ ಸಂಬಂಧಿಸಿದಂತೆ ಕರ್ನಾಟಕ ಹೈಕೋರ್ಟ್ ನೀಡಿದ್ದ ನಿರ್ದೇಶನದ ಮೇರೆಗೆ ಅವರುಬಚಾಮುಂಡೇಶ್ವರಿ ದೇವಿಯ ಎದುರು ಕ್ಷಮೆಯಾಚಿಸಿದ್ದಾರೆ. 2025ರ ನವೆಂಬರ್ 30 ರಂದು ಗೋವಾದಲ್ಲಿ ನಡೆದ ಅಂತಾರಾಷ್ಟ್ರೀಯ … Continued

ಕಾಂತಾರ ಮಿಮಿಕ್ರಿ ಪ್ರಕರಣ ; ನಟ ರಣವೀರ್‌ ಸಿಂಗ್‌ ಗೆ ಕರ್ನಾಟಕ ಹೈಕೋರ್ಟ್‌ ತರಾಟೆ

ಬೆಂಗಳೂರು : ಬಾಲಿವುಡ್ ನಟ ರಣವೀರ್ ಸಿಂಗ್ ಅವರಿಗೆ ಕರ್ನಾಟಕ ಹೈಕೋರ್ಟ್ ಬಂಧನದಿಂದ ತಾತ್ಕಾಲಿಕ ಸಮಾಧಾನ ನೀಡಿದೆಯಾದರೂ, ಅವರ ವರ್ತನೆಯ ಬಗ್ಗೆ ನ್ಯಾಯಾಧೀಶರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಮಂಗಳವಾರ ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರು, “ಸೆಲೆಬ್ರಿಟಿಯಾದ ತಕ್ಷಣ ಧಾರ್ಮಿಕ ನಂಬಿಕೆಗಳನ್ನು ಅಪಹಾಸ್ಯ ಮಾಡುವ ಹಕ್ಕು ಯಾರಿಗೂ ಇಲ್ಲ” ಎಂದು ಹೇಳಿದ್ದಾರೆ. ಕೋರ್ಟ್ … Continued

70ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಘೋಷಣೆ : ಕಾಂತಾರದ ರಿಷಬ್ ಶೆಟ್ಟಿಗೆ ಅತ್ಯುತ್ತಮ ನಟ ಪ್ರಶಸ್ತಿ ; ಪ್ರಶಸ್ತಿ ಪಡೆದವರ ವಿವರ ಇಲ್ಲಿವೆ

ನವದೆಹಲಿ: ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳನ್ನು ಶುಕ್ರವಾರ ಪ್ರಕಟಿಸಲಾಗಿದ್ದು, ಕನ್ನಡದ “ಕಾಂತಾರ” ಚಿತ್ರಕ್ಕಾಗಿ ರಿಷಬ್ ಶೆಟ್ಟಿ ಅವರಿಗೆ ಅತ್ಯುತ್ತಮ ನಟ ಪ್ರಶಸ್ತಿ ಲಭಿಸಿದೆ. ಅತ್ಯುತ್ತಮ ನಟಿ ಪ್ರಶಸ್ತಿಯನ್ನು ತಮಿಳು ಚಿತ್ರ ‘ತಿರುಚಿತ್ರಂಬಲಂ’ಗಾಗಿ ಪಡೆದ ನಿತ್ಯಾ ಮೆನೆನ್ ಮತ್ತು ಗುಜರಾತಿ ಚಿತ್ರ “ಕಚ್ ಎಕ್ಸ್‌ಪ್ರೆಸ್” ಗಾಗಿ ಮಾನಸಿ ಪರೇಖ್ ಹಂಚಿಕೊಂಡಿದ್ದಾರೆ. ಮಲಯಾಳಂ ಚಲನಚಿತ್ರ “ಆಟ್ಟಂ: ದಿ ಪ್ಲೇ” ಅತ್ಯುತ್ತಮ … Continued

ಇನ್ಸ್ಟಾಗ್ರಾಂನಲ್ಲಿ ಪಂಜುರ್ಲಿ ದೈವದ ರೀಲ್ಸ್: ಧರ್ಮಸ್ಥಳಕ್ಕೆ ಬಂದು ತಪ್ಪು ಕಾಣಿಕೆ ಅರ್ಪಿಸಿದ ಆಂಧ್ರದ ಯುವತಿ

ಮಂಗಳೂರು: ““ಕಾಂತಾರ’ ಚಲನ ಚಿತ್ರದಲ್ಲಿರುವ ದೈವದ ಪಾತ್ರದಂತೆ ಮುಖವರ್ಣಿಕೆ ಮಾಡಿಕೊಂಡು ಇನ್ಸ್ಟಾಗ್ರಾಂನಲ್ಲಿ ಹಂಚಿಕೊಂಡ ನಂತರ ಸಾಮಾಜಿಕ ಜಾಲತಾಣದಲ್ಲಿ ಭಾರೀ ವಿರೋಧ ವ್ಯಕ್ತವಾದ ನಂತರ ಹಾಗೂ ಅನಾರೋಗ್ಯವಾದ ಹಿನ್ನೆಲೆಯಲ್ಲಿ ಹೈದರಾಬಾದ್‌ ಮೂಲದ ಶ್ವೇತಾ ರೆಡ್ಡಿ ಅವರು ಧರ್ಮಸ್ಥಳಕ್ಕೆ ಬಂದು ತಪ್ಪು ಕಾಣಿಕೆ ಸಲ್ಲಿಸಿದ್ದಾರೆ. ಹೈದರಾಬಾದ್ ಮೂಲದ ಮೇಕಪ್ ಕಲಾವಿದೆ ಶ್ವೇತಾ ರೆಡ್ಡಿ ಅವರು ನವೆಂಬರ್‌ 3ರಂದು ಧರ್ಮಸ್ಥಳಕ್ಕೆ … Continued

ಕಾಂತಾರ ಸಿನೆಮಾ ‘ವರಾಹರೂಪಂ’ ಹಾಡಿಗೆ ನ್ಯಾಯಾಲಯದ ನಿರ್ಬಂಧ

ಕೋಯಿಕ್ಕೋಡ್: ರಿಷಬ್ ಶೆಟ್ಟಿ ನಿರ್ದೇಶಿಸಿ, ನಟಿಸಿರುವ ಕಾಂತಾರ (Kantara) ಸಿನಿಮಾದ ಹಾಡೊಂದು ಕಾನೂನು ಸಂಕಷ್ಟಕ್ಕೆ ಸಿಲುಕಿಕೊಂಡಿದೆ. ಸಿನಿಮಾದಲ್ಲಿ ಬಳಸದಂತೆ ಕೋರ್ಟ್‌ ತಡೆಯಾಜ್ಞೆ ನೀಡಿದೆ. ಈ ಕುರಿತು ತೈಕುಡಂ ಬ್ರಿಡ್ಜ್ ಬ್ಯಾಂಡ್ ಸಾಮಾಜಿಕ ಜಾಲತಾಣ ಇನ್‌ಸ್ಟಾಗ್ರಾಂನಲ್ಲಿ ಪ್ರಕಟಿಸಿದೆ. ಕನ್ನಡ ಚಲನಚಿತ್ರ ‘ಕಾಂತಾರ’ ಚಿತ್ರದ ನಿರ್ಮಾಪಕರಿಗೆ ‘ತೈಕ್ಕುಡಂ ಬ್ರಿಡ್ಜ್’ ಎಂಬ ಮ್ಯೂಸಿಕ್ ಬ್ಯಾಂಡ್‌ನ ಅನುಮತಿಯಿಲ್ಲದೆ ಸಿನಿಮಾದ ಕ್ಲೈಮ್ಯಾಕ್ಸ್ ನಲ್ಲಿ … Continued

ನಟ ಚೇತನ್ ವಿರುದ್ಧ ನಾವು ಪಂಜುರ್ಲಿ ದೈವಕ್ಕೆ ದೂರು ಕೊಡ್ತೇವೆ

ಉಡುಪಿ: “ಕಾಂತಾರ” ಸಿನಿಮಾ ಸದ್ಯ ಅಂತಾರಾಷ್ಟೀಯ ಮಟ್ಟದಲ್ಲಿ ಸದ್ದು ಮಾಡುತ್ತಿದೆ. ಚಿತ್ರದಲ್ಲಿ ತೋರಿಸಿರುವ ಭೂತಾರಾಧನೆಯ ಕುರಿತಾಗಿ ಹಲವರು ಪರ, ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ಅದರಲ್ಲಿಯೂ ನಟ ಚೇತನ್ ದೈವದ ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡಿ, ಹಲವರ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ಈಗ ಭೂತಾರಾಧನೆಯ ಕುರಿತು ವಿವಾದಾತ್ಮಕ ಹೇಳಿಕೆ ನೀಡಿರುವ ನಟ ಚೇತನ್ ವಿರುದ್ಧ ಇದೀಗ ಪಂಜುರ್ಲಿ ದೈವಕ್ಕೆ ದೂರು … Continued