ಲೋಕಸಭೆಯಲ್ಲಿ ಜಮ್ಮು-ಕಾಶ್ಮೀರ ಮಸೂದೆ ಅಂಗೀಕಾರ : ಪಿಒಕೆ ನಮ್ಮದು, ಅದಕ್ಕೂ 24 ಸೀಟುಗಳನ್ನು ಕಾಯ್ದಿಟ್ಟಿದ್ದೇವೆ ಎಂದ ಅಮಿತ್ ಶಾ

ನವದೆಹಲಿ: ಇಂದು, ಬುಧವಾರ (ಡಿಸೆಂಬರ್‌ 6) ಲೋಕಸಭೆಯಲ್ಲಿ ಅಂಗೀಕಾರಗೊಂಡ ಜಮ್ಮು ಮತ್ತು ಕಾಶ್ಮೀರ ಮರುಸಂಘಟನೆ ಮಸೂದೆಯು 70 ವರ್ಷಗಳಿಂದ ಧ್ವನಿಯೇ ಇಲ್ಲದ ಜನರ ಪ್ರಾತಿನಿಧ್ಯಕ್ಕೆ ಅವಕಾಶ ಕಲ್ಪಿಸಲಿದೆ ಎಂದು ಕೇಂದ್ರ ಗೃಹ ಸಚಿವ ಅಮಿತ ಶಾ ಹೇಳಿದ್ದಾರೆ. ಅಮಿತ್ ಶಾ ಅವರು ಲೋಕಸಭೆಯಲ್ಲಿ ಜಮ್ಮು ಮತ್ತು ಕಾಶ್ಮೀರಕ್ಕೆ ಸಂಬಂಧಿಸಿದ -ಜಮ್ಮು ಮತ್ತು ಕಾಶ್ಮೀರ ಮರುಸಂಘಟನೆ ಮಸೂದೆ, … Continued

ಪ್ರಶ್ನೆಗಾಗಿ ಹಣ ಪ್ರಕರಣ : ಟಿಎಂಸಿ ಸಂಸದೆ ಮಹುವಾ ಮೊಯಿತ್ರಾ ಕುರಿತ ನೈತಿಕ ಸಮಿತಿ ವರದಿ ಡಿಸೆಂಬರ್ 4 ರಂದು ಲೋಕಸಭೆಯಲ್ಲಿ ಮಂಡನೆ

ನವದೆಹಲಿ: ತೃಣಮೂಲ ಕಾಂಗ್ರೆಸ್ ಸಂಸದೆ ಮಹುವಾ ಮೊಯಿತ್ರಾ ವಿರುದ್ಧ ಸಂಸತ್ತಿನಲ್ಲಿ ‘ಪ್ರಶ್ನೆಗಾಗಿ ಹಣ’ ಆರೋಪದ ಕುರಿತು ಸಂಸತ್ತಿನ ನೈತಿಕ ಸಮಿತಿಯ ವರದಿಯನ್ನು ಡಿಸೆಂಬರ್ 4 ರಂದು ಲೋಕಸಭೆಯಲ್ಲಿ ಮಂಡಿಸಲಾಗುವುದು. ಈ ತಿಂಗಳ ಆರಂಭದಲ್ಲಿ ನೈತಿಕ ಸಮಿತಿಯು ಅಂಗೀಕರಿಸಿದ ವರದಿಯು ಲೋಕಸಭೆ ಟಿಎಂಸಿ ಸಂಸದರನ್ನು ಉಚ್ಚಾಟಿಸಲು ಪ್ರಸ್ತಾಪಿಸಿದೆ. ಬಿಜೆಪಿ ಸಂಸದ ವಿನೋದ ಸೋಂಕರ್ ನೇತೃತ್ವದ ನೈತಿಕ ಸಮಿತಿಯು … Continued

ಲೋಕಸಭೆಯ ನೈತಿಕ ಸಮಿತಿ ಮುಂದೆ ಹಾಜರಾಗಲು ಹೆಚ್ಚಿನ ಸಮಯ ಕೋರಿದ ಮಹುವಾ ಮೊಯಿತ್ರಾ

ನವದೆಹಲಿ: ತೃಣಮೂಲ ಕಾಂಗ್ರೆಸ್‌ ಸಂಸದೆ ಮಹುವಾ ಮೊಯಿತ್ರಾ ಅವರು ಲೋಕಸಭೆಯ ನೈತಿಕ ಸಮಿತಿಯು ಪ್ರಶ್ನೆಗಳಿಗೆ ಹಣದ ಆರೋಪಕ್ಕೆ ನೀಡಿದ ಸಮನ್ಸ್‌ಗೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ್ದಾರೆ. ಅವರ ಉತ್ತರದಲ್ಲಿ, ಅವರು ಅಕ್ಟೋಬರ್ 31 ರಂದು ನಿಗದಿಪಡಿಸಿದ ದಿನಾಂಕದಂದು ಸಮಿತಿಯ ಮುಂದೆ ಹಾಜರಾಗಲು ತನ್ನ ಅಸಮರ್ಥತೆಯನ್ನು ತಿಳಿಸಿದರು. ಆದಾಗ್ಯೂ, ಅವರು ನವೆಂಬರ್ 5 ರ ನಂತರದಲ್ಲಿ ಯಾವುದೇ ಸಮಯ ಹಾಗೂ … Continued

ರಾಹುಲ್‌ ಗಾಂಧಿ ವಿರುದ್ಧ ಹಕ್ಕುಚ್ಯುತಿ ನೋಟಿಸ್: ಫೆಬ್ರವರಿ 15ರೊಳಗೆ ಉತ್ತರಿಸಲು ಸೂಚನೆ

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ವಿರುದ್ಧದ ಹೇಳಿಕೆಗಾಗಿ ಇಬ್ಬರು ಭಾರತೀಯ ಜನತಾ ಪಕ್ಷದ (ಬಿಜೆಪಿ) ನಾಯಕರಾದ ನಿಶಿಕಾಂತ್ ದುಬೆ ಮತ್ತು ಸಚಿವ ಪ್ರಹ್ಲಾದ ಜೋಶಿ ರಾಹುಲ್‌ ಗಾಂಧಿ ವಿರುದ್ಧ ವಿಶೇಷ ಹಕ್ಕು ಚ್ಯುತಿ ನೋಟಿಸ್ ಸಲ್ಲಿಸಿದ ನಂತರ ಲೋಕಸಭೆಯ ಸಚಿವಾಲಯವು ಬುಧವಾರ(ಫೆಬ್ರವರಿ 15 )ದೊಳಗೆ ಪ್ರತಿಕ್ರಿಯೆ ನೀಡುವಂತೆ ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿಗೆ ಸೂಚಿಸಿದೆ. ಹಿಂಡೆನ್‌ಬರ್ಗ್ … Continued