ಭಾರತ ಕಬಡ್ಡಿ ತಂಡದ ಮಾಜಿ ಆಟಗಾರ, ಏಕಲವ್ಯ ಪ್ರಶಸ್ತಿ ಪುರಸ್ಕೃತ ಉದಯ ಚೌಟ ನಿಧನ

ಮಂಗಳೂರು: ಭಾರತೀಯ ಕಬಡ್ಡಿ ತಂಡದ ಮಾಜಿ ಆಟಗಾರ, ಏಕಲವ್ಯ ಪ್ರಶಸ್ತಿ ಪುರಸ್ಕೃತ ಉದಯ ಚೌಟ ಅವರು ಶನಿವಾರ ಮುಂಜಾನೆ ಹೃದಯಾಘಾತದಿಂದ ನಿಧನರಾದರು. ಬಂಟ್ವಾಳ ತಾಲೂಕಿನ ಮಾಣಿಯ ಬದಿಗುಡ್ಡೆಯಲ್ಲಿ ವಾಸವಿದ್ದ ಉದಯ ಚೌಟ ಅವರು ಬ್ಯಾಂಕ್ ಆಫ್ ಬರೋಡಾದ ಸುರತ್ಕಲ್ ಶಾಖೆಯಲ್ಲಿ ಉಪ ಪ್ರಬಂಧಕರಾಗಿ ಕೆಲಸ ಮಾಡುತ್ತಿದ್ದರು. ವಿದ್ಯಾಭ್ಯಾಸ ಮಾಡುತ್ತಿದ್ದಾಗಲೇ ನಾಲ್ಕು ವರ್ಷ ಅಂತರ್ ಕಾಲೇಜು ಕಬಡ್ಡಿ … Continued

ಪದ್ಮಶ್ರೀ ಸುಕ್ರಿ ಬೊಮ್ಮಗೌಡ ಆಸ್ಪತ್ರೆ ವೆಚ್ಚ ಸರ್ಕಾರವೇ ಭರಿಸಲಿದೆ: ಸಚಿವ ಕೋಟ

ಮಂಗಳೂರು : ಸಮಾಜ ಕಲ್ಯಾಣ ಇಲಾಖೆಯ ಸಚಿವ ಕೋಟ ಶ್ರೀನಿವಾಸ ಪೂಜಾರಿಯವರು ಇಂದು ಮಂಗಳವಾರ ನಗರದ ಕೆಎಂಸಿ ಆಸ್ಪತ್ರೆಗೆ ಆಗಮಿಸಿ ಪದ್ಮಶ್ರೀ ಪುರಸ್ಕೃತೆ ಸುಕ್ರಿ ಬೊಮ್ಮಗೌಡ ಅವರ ಆರೋಗ್ಯ ವಿಚಾರಿಸಿದರು. ಉಸಿರಾಟದ ತೊಂದರೆ ಹಾಗೂ ಹೃದಯ ಸಂಬಂಧಿ ಕಾಯಿಲೆಯಿಂದ ಸುಕ್ರಿ ಬೊಮ್ಮಗೌಡ ಅವರು ಶಸ್ತ್ರಚಿಕಿತ್ಸೆಗೆ ಒಳಗಾಗಿ ಐಸಿಯುನಲ್ಲಿದ್ದರು. ಆರೋಗ್ಯದಲ್ಲಿ ಸುಧಾರಿಕೆ ಕಂಡು ಬಂದಿರುವ ಹಿನ್ನೆಲೆಯಲ್ಲಿ ಅವರನ್ನು … Continued

ಮಂಗಳೂರು: ಬಿಎಂಡಬ್ಲ್ಯು ಕಾರ್‌ ಅಪಘಾತದಲ್ಲಿ ಗಾಯಗೊಂಡಿದ್ದ ಮಹಿಳೆಯ ಮಿದುಳು ನಿಷ್ಕ್ರಿಯ; ಅಂಗಾಂಗ ದಾನ ಮಾಡಿ ಸಾರ್ಥಕತೆ ಮೆರೆದ ಕುಟುಂಬ

ಮಂಗಳೂರು: ಭೀಕರ ರಸ್ತೆ ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಮಹಿಳೆಯ ಮಿದುಳು ಹದಿಮೂರು ದಿನಗಳ ಜೀವನ್ಮರಣ ಹೋರಾಟದಲ್ಲಿ ನಿಷ್ಕ್ರಿಯಗೊಂಡ ಹಿನ್ನೆಲೆಯಲ್ಲಿ ಆಕೆಯ ಕುಟುಂಬಸ್ಥರು ಅಂಗಾಂಗಗಳನ್ನು ದಾನ ಮಾಡಿ ಸಾವಿನಲ್ಲೂ ಸಾರ್ಥಕತೆ ಮೆರೆದಿದ್ದಾರೆ. ಏಪ್ರಿಲ್ 19ರಂದು ಮಂಗಳೂರಿನ ಬಳ್ಳಾಲ್ ಭಾಗ್‌ನಲ್ಲಿ ಮದ್ಯದ ಅಮಲಿನಲ್ಲಿ ವೇಗವಾಗಿ ಬಿಎಂಡಬ್ಲೂ ಕಾರು ಚಲಾಯಿಸಿಕೊಂಡು ಬಂದು ಡಿವೈಡರ್ ಮೇಲೆ ಕಾರು ಹಾರಿಸಿ, ಇನ್ನೊಂದು ರಸ್ತೆಯಲ್ಲಿ … Continued

ಮಂಗಳೂರು: ಮಸೀದಿ ನವೀಕರಣದ ವೇಳೆ ಪ್ರಾಚೀನ ದೇವಸ್ಥಾನದ ಕುರುಹು ಪತ್ತೆ..!?

ಮಂಗಳೂರು: ನಗರದ ಹೊರವಲಯದ ಗುರುಪುರ ಹೋಬಳಿಯ ತೆಂಕ ಉಳಿಪಾಡಿ ಗ್ರಾಮದ ಮಸೀದಿ ಕಟ್ಟಡದಲ್ಲಿ ಪ್ರಾಚೀನ ಕಾಲದ ದೇವಾಲಯದ ಮಾದರಿ ಪತ್ತೆಯಾಗಿದೆ. ಈ ಹಿನ್ನೆಲೆಯಲ್ಲಿ ಸ್ಥಳಕ್ಕೆ ತಹಶೀಲ್ದಾರ ಪುರಂದರ ಅವರು ಭೇಟಿ ನೀಡಿದ್ದಾರೆ. ಮಂಗಳೂರು ತಾಲೂಕಿನ ಗುರುಪುರ ಹೋಬಳಿಯ ತೆಂಕ ಉಳಿಪಾಡಿ ಗ್ರಾಮದ ಗಂಜಿಮಠ ಪಂಚಾಯಿತಿಯಲ್ಲಿರುವ ಸರ್ವೇ ನಂ 1/10 ನಲ್ಲಿ ಅಸ್ಸಾಯಿದ್ ಅಬ್ದುಲ್ಲಾಹಿಲ್ ಮದನಿ ಜುಮಾ … Continued

ಪ್ರಾಧ್ಯಾಪಕಿ ವಿರುದ್ಧ ಮಾನಹಾನಿಕರ ಪೋಸ್ಟರ್‌ ಅಂಟಿಸಿ ಕಿರುಕುಳ: ಕಾಲೇಜು ಸಂಚಾಲಕ, ಇಬ್ಬರು ಪ್ರಾಧ್ಯಾಪಕರ ಬಂಧನ

ಮಂಗಳೂರು: ಕಾಲೇಜಿನ ಪ್ರಾಧ್ಯಾಪಕಿಯೊಬ್ಬರ ಕುರಿತು ಮಾನಹಾನಿಕರ ಪತ್ರವನ್ನು ಬರೆದು ಸಾರ್ವಜನಿಕ ಸ್ಥಳದಲ್ಲಿ ಪೋಸ್ಟರ್ ಅಂಟಿಸಿ ಚಾರಿತ್ರ್ಯವಧ ಮಾಡಿದ ಆರೋಪದ ಮೇಲೆ ಕಾಲೇಜಿನ ಸಂಚಾಲಕ ಹಾಗೂ ಇಬ್ಬರು ಪ್ರಾಧ್ಯಾಪಕರನ್ನು ಮಂಗಳೂರು ನಗರ ಪೊಲೀಸರು ಬಂಧಿಸಿದ್ದಾರೆ. ಬೆಳ್ತಂಗಡಿ ತಾಲೂಕಿನ ಲಾಯಿಲ ನಿವಾಸಿ, ಪ್ರಕಾಶ್ ಶೆಣೈ (44), ಬಂಟ್ವಾಳದ ಸಿದ್ದಕಟ್ಟೆ, ಮೇಗಿನ ಉಳಿರೋಡಿ ನಿವಾಸಿ, ಪ್ರದೀಪ್ ಪೂಜಾರಿ (36), ಉಡುಪಿ … Continued

ಪ್ರೇಯಸಿಗಾಗಿ ಟವರ್ ಏರಿ ಕಂಗಾಲು ಮಾಡಿದ ಯುವಕ…!

ಮಂಗಳೂರು: ಪ್ರೀತಿಸಿದ ಹುಡುಗಿ ಜೊತೆ ಮನಸ್ತಾಪದ ಕಾರಣಕ್ಕೆ ಯುವಕನೊಬ್ಬ ಮೊಬೈಲ್‌ ಟವರ್‌ ಏರಿ ಕುಳಿತು ಕೆಲಕಾಲ ಎಲ್ಲರಿಗೂ ಫಜೀತಿ ಸೃಷ್ಟಿಸಿದ್ದಾನೆ. ಮಂಗಳೂರು ಹೊರವಲಯದ ಅಡ್ಯಾರ್‌ ಎಂಬಲ್ಲಿ ಈ ಘಟನೆ ಸೋಮವಾರ ನಡೆದ ಬಗ್ಗೆ ವರದಿಯಾಗಿದೆ, ಕೊಡ್ಮಾಣ್‌ ಕಂಜಾರ ಎಂಬಲ್ಲಿನ ನಿವಾಸಿ ಸುಧೀರ್‌ ಎಂಬಾತ ಅದೇ ಊರಿನ ಯುವತಿಯನ್ನು ಪ್ರೀತಿಸುತ್ತಿದ್ದ. ಅವರಿಬ್ಬರ ನಡುವೆ ಯಾವುದೋ ವಿಚಾರಕ್ಕೆ ಮನಸ್ತಾಪ … Continued

ಮಂಗಳೂರು: ಕೊರಗಜ್ಜ ಕಟ್ಟೆಯಲ್ಲಿ ಕಾಂಡೋಮ್ ಇರಿಸಿದ ಆರೋಪಿ ಬಂಧನ

ಮಂಗಳೂರು: ನಗರದ ಮಾರ್ನಮಿಕಟ್ಟೆಯ ಕೊರಗಜ್ಜನ ಗುಡಿಯ ಎದುರು ಉಪಯೋಗಿಸಿದ ಕಾಂಡೋಮ್ ನ್ನು ಇಟ್ಟು ಅಪವಿತ್ರಗೊಳಿಸಿದ ಘಟನೆಗೆ ಸಂಬಂಧಿಸಿದಂತೆ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ. ಮೂಲತಃ ಹುಬ್ಬಳ್ಳಿಯವನಾದ ಪ್ರಸ್ತುತ ಕೋಟೆಕಾರು ಮುಂಡಾಣ ಎಂಬಲ್ಲಿ ವಾಸವಾಗಿರುವ ದೇವದಾಸ್ ದೇಸಾಯಿ (62) ಎಂಬವರೇ ಬಂಧಿತ ಆರೋಪಿ. ಆರೋಪಿ ದೇವದಾಸ್ ತಂದೆ ಜಾನ್ ದೇಸಾಯಿ, ಸರಕಾರಿ ಉದ್ಯೋಗಿಯಾಗಿದ್ದು ಕ್ರೈಸ್ತ ಧರ್ಮಕ್ಕೆ ಮತಾಂತರಗೊಂಡಿದ್ದರು. ಈತ … Continued

ಲೈಂಗಿಕ ಕಿರುಕುಳ ಪ್ರಕರಣ: ತಲೆಮರೆಸಿಕೊಂಡಿದ್ದ ನ್ಯಾಯವಾದಿ ರಾಜೇಶ್ ಕೋರ್ಟಿಗೆ ಶರಣು

ಮಂಗಳೂರು:ಕಾನೂನು ವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಳ ನೀಡಿ, ಪ್ರಕರಣ ದಾಖಲಾದ ಬಳಿಕ ತಲೆಮರೆಸಿಕೊಂಡಿದ್ದ ಮಂಗಳೂರಿನ ಲೋಕಾಯುಕ್ತ ವಿಭಾಗದ ವಿಶೇಷ ಸರ್ಕಾರಿ ಅಭಿಯೋಜಕರಾಗಿದ್ದ ಕೆ.ಎಸ್.ಎನ್ ರಾಜೇಶ್ ಸೋಮವಾರ, ಡಿ. 20 ರಂದು ಕೋರ್ಟಿಗೆ ಶರಣಾಗಿದ್ದಾರೆ. ಇಲ್ಲಿನ 3 ನೇ ಜೆಎಂಎಫ್ ಸಿ ನ್ಯಾಯಾಲಯಕ್ಕೆ ಅವರು ಶರಣಾಗಿದ್ದಾರೆ. ಅತ್ಯಾಚಾರಕ್ಕೆ ಯತ್ನಿಸಿದ್ದಾರೆ ಎಂದು ಆರೋಪಿಸಿ ಮಂಗಳೂರು ಮಹಿಳಾ ಪೊಲೀಸ್ ಠಾಣೆಯಲ್ಲಿ ಪ್ರಕರಣ … Continued

ಹೊಳೆಯಲ್ಲಿ ಈಜಲು ಹೋಗಿ ಮೂವರು ವಿದ್ಯಾರ್ಥಿಗಳು ನೀರುಪಾಲು

ಹೆಬ್ರಿ : ಶಿವಪುರ ಗ್ರಾಮದ ಭಟ್ರಾಡಿ ಹೊಳೆಗೆ ಈಜಲು ಹೋದ ವಿದ್ಯಾರ್ಥಿಗಳಲ್ಲಿ ಮೂವರು ನೀರುಪಾಲದ ಘಟನೆ ಶುಕ್ರವಾರ ಮಧ್ಯಾಹ್ನ ನಡೆದ ಬಗ್ಗೆ ವರದಿಯಾಗಿದೆ. ಈಜಲು ಹೋದ ಹಿರಿಯಡ್ಕ ಸರ್ಕಾರಿ ಪದವಿಪೂರ್ವ ಕಾಲೇಜಿನ ಮೂವರು ವಿದ್ಯಾರ್ಥಿಗಳು ಮುಳುಗಿ ಮೃತಪಟ್ಟಿದ್ದಾರೆ. ಮೃತರನ್ನು ಮೃತರನ್ನು ಸುದರ್ಶನ್ (16), ಸೋನಿತ್ (17) ಹಾಗೂ ಕಿರಣ್ (16) ಎಂದು ಗುರುತಿಸಲಾಗಿದೆ. ಸ್ಥಳೀಯರ ಸಹಕಾರದಿಂದ … Continued

ಮಗುವಿಗೆ ಜನ್ಮ ನೀಡಿದ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿನಿ !

ಮಂಗಳೂರು: ಎಸ್ಎಸ್ಎಲ್ಸಿ ಕಲಿಯುತ್ತಿರುವ ವಿದ್ಯಾರ್ಥಿನಿಯೊಬ್ಬಳು ಹೆಣ್ಣು ಮಗುವಿಗೆ ಜನ್ಮ ನೀಡಿದ ಘಟನೆ ನಡೆದಿದ್ದು, ಅಪ್ರಾಪ್ತೆ ಬಾಲಕಿ ಗರ್ಭ ಧರಿಸಲು ಕಾರಣನಾದ ಯುವಕನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. 10ನೇ ತರಗತಿ ಕಲಿಯುತ್ತಿರುವ ವಿದ್ಯಾರ್ಥಿನಿಯ ಉದರದಲ್ಲಿ ಗೆಡ್ಡೆ ಬೆಳೆದಿದೆ ಎಂದು ತಿಳಿದು ಹೆತ್ತವರು ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ ವೈದ್ಯರು ಪರೀಕ್ಷೆ ನಡೆಸಿದಾಗ ವಿದ್ಯಾರ್ಥಿನಿ ಗರ್ಭಿಣಿ ಎಂದು ತಿಳಿದು ಬಂದಿದೆ. … Continued