2015ರ ನಂತರ ಅತಿ ಹೆಚ್ಚು ಮಳೆ ದಾಖಲಿಸಿದ ಚೆನ್ನೈ ನಗರ, ಅನೇಕ ಪ್ರದೇಶಗಳು ಮುಳುಗಡೆ

ಚೆನ್ನೈ: ನಗರದಲ್ಲಿ ರಾತ್ರಿಯಿಡೀ ಸುರಿದ ಮಳೆಯಿಂದಾಗಿ ಹಲವು ಪ್ರದೇಶಗಳು ಜಲಾವೃತವಾಗಿವೆ. ತಮಿಳುನಾಡಿನ ರಾಜಧಾನಿ ಚೆನ್ನೈ ನಗರವು 2015ರ ನಂತರದಲ್ಲಿ ಅತಿ ಹೆಚ್ಚು ಮಳೆಯನ್ನು ದಾಖಲಿಸಿದೆ. ಲೋಕೋಪಯೋಗಿ ಇಲಾಖೆ ಚೆನ್ನೈನ ಚೆಂಬರಂಬಾಕ್ಕಂ ಜಲಾಶಯದ ಶೆಟರ್‌ಗಳನ್ನು ತೆರೆದಿದ್ದು, 500 ಕ್ಯೂಸೆಕ್‌ನಂತೆ ನೀರು ಬಿಡಲಾಗುತ್ತಿದೆ. ಚೆಂಬರಂಬಾಕ್ಕಂನ ಜಲಾನಯನ ಪ್ರದೇಶದಲ್ಲಿ 52 ಮಿಮೀ ಮಳೆಯಾಗಿದ್ದು, ಜಲಾಶಯಕ್ಕೆ 600 ಕ್ಯೂಸೆಕ್‌ನಷ್ಟು ನೀರು ಬರುತ್ತಿದೆ … Continued