ಬೆಳಗಾವಿಯಲ್ಲಿ ರೈತ ಮಹಾ ಪಂಚಾಯತ ನಡೆಸಲು ಜಾಗ ನೀಡದ ಜಿಲ್ಲಾಡಳಿತ: ಚುಕ್ಕಿ ನಂಜುಂಡಸ್ವಾಮಿ ಆರೋಪ
ಬೆಳಗಾವಿ: ನಗರದಲ್ಲಿ ಮಾ.೩೧ರಂದು ಆಯೋಜಿಸಿರುವ ರೈಲ ಮಹಾಪಂಚಾಯತ್ ಸಮಾವೇಶಕ್ಕೆ ಯಾವುದೇ ಮೈದಾನವನ್ನೂ ಜಿಲ್ಲಾಡಳಿತ ನೀಡುತ್ತಿಲ್ಲ ಎಂದು ರೈತ ಸಂಘದ ನಾಯಕಿ ಚುಕ್ಕಿ ನಂಜುಂಡ ಸ್ವಾಮಿ ಆರೋಪಿಸಿದ್ದಾರೆ. ಬೆಳಗಾವಿಯಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮಾರ್ಚ್ 31ರಂದು ಇಲ್ಲಿ ಆಯೋಜಿಸಿರುವ ರೈತರ ಮಹಾ ಪಂಚಾಯತಕ್ಕೆ ಜಿಲ್ಲಾ ಕ್ರೀಡಾಂಗಣ ಸೇರಿದಂತೆ ಯಾವುದೇ ಮೈದಾನವನ್ನೂ ಜಿಲ್ಲಾಡಳಿತ ನೀಡುತ್ತಿಲ್ಲ ಎಂದು ಹೇಳಿದರು. … Continued