ಕ್ಯಾನ್ಸರ್‌ ವಿರುದ್ಧ ರಷ್ಯಾದ ವಿಜ್ಞಾನಿಗಳ ಸಾಧನೆ | ಕ್ಯಾನ್ಸರ್ ರೋಗಕ್ಕೆ ಲಸಿಕೆ ಕಂಡುಹಿಡಿದ ರಷ್ಯಾ ; ರೋಗಿಗಳಿಗೆ ಉಚಿತವಾಗಿ ನೀಡಲು ಚಿಂತನೆ

ರಷ್ಯಾ ತನ್ನದೇ ಆದ ಕ್ಯಾನ್ಸರ್ ಲಸಿಕೆಯನ್ನು ಅಭಿವೃದ್ಧಿಪಡಿಸಿದೆ ಎಂದು ದೇಶದ ಸುದ್ದಿ ಸಂಸ್ಥೆ ತಾಸ್‌ (TASS) ವರದಿ ಮಾಡಿದೆ. ಇದು ಕ್ಯಾನ್ಸರ್ ವಿರುದ್ಧದ ಎಂಆರ್‌ಎನ್‌ಎ (mRNA) ಲಸಿಕೆಯಾಗಿದ್ದು, ಇದನ್ನು 2025ರಿಂದ ರೋಗಿಗಳಿಗೆ ಉಚಿತವಾಗಿ ವಿತರಿಸಲಾಗುವುದು ಎಂದು ರಷ್ಯಾದ ಆರೋಗ್ಯ ಸಚಿವಾಲಯದ ರೇಡಿಯಾಲಜಿ ವೈದ್ಯಕೀಯ ಸಂಶೋಧನಾ ಕೇಂದ್ರದ ಜನರಲ್ ಡೈರೆಕ್ಟರ್ ಆಂಡ್ರೆ ಕಪ್ರಿನ್ ರೇಡಿಯೊ ರೊಸ್ಸಿಯಾಗೆ ತಿಳಿಸಿದ್ದಾರೆ. … Continued