ರಷ್ಯಾದಲ್ಲಿ ಆಹಾರ ಉತ್ಪನ್ನಗಳ ಅಭಾವ ಸಾಧ್ಯತೆ.. ಆಹಾರ ಖರೀದಿಗೆ ಮಿತಿ ವಿಧಿಸಿದ ಸರ್ಕಾರ

ಮಾಸ್ಕೊ: ಉಕ್ರೇನ್‌ ಮೇಲಿನ ಆಕ್ರಮಣದ ಬಳಿಕ ಆರ್ಥಿಕ ದಿಗ್ಬಂಧನಕ್ಕೆ ಒಳಗಾಗಿರುವ ರಷ್ಯಾ ಈಗ ನಿಧಾನವಾಗಿ ಸಂಕಷ್ಟಕ್ಕೆ ಸಿಲುಕುತ್ತಿದೆ.. ದೇಶದಲ್ಲಿ ಆಹಾರ ಪದಾರ್ಥಗಳ ಅಭಾವ ಕಾಣಿಸಿಕೊಳ್ಳುವ ಲಕ್ಷಣ ಕಾಣುತ್ತಿರುವ ಹಿನ್ನೆಲೆಯಲ್ಲಿ ರಷ್ಯಾ ಸರ್ಕಾರವು ಖರೀದಿಗೆ ಮಿತಿ ಹೇರಲು ಮುಂದಾಗಿದೆ. ಆಹಾರ, ಮಾಂಸ, ಬೇಕರಿ ಪದಾರ್ಥಗಳು, ಡೈರಿ ಉತ್ಪನ್ನಗಳು ಹಾಗೂ ಜೀವನಾವಶ್ಯಕ ವಸ್ತುಗಳ ಬೆಲೆಯನ್ನೂ ಸರ್ಕಾರವೇ ನಿಯಂತ್ರಿಸುವುದಾಗಿಯೂ ಹೇಳಿದೆ. … Continued