ನ್ಯಾಷನಲ್ ಹೆರಾಲ್ಡ್ ಪ್ರಕರಣ : ವೈಐ-ಎಜೆಎಲ್ ಸ್ವಾಧೀನ ಒಪ್ಪಂದ ಸಂಪೂರ್ಣ ನಿರ್ವಹಿಸಿದ್ದು ದಿವಂಗತ ಮೋತಿಲಾಲ್ ವೋರಾ ಎಂದು ಇಡಿಗೆ ತಿಳಿಸಿದ ರಾಹುಲ್ ಗಾಂಧಿ ; ಇಡಿ ಮೂಲಗಳು

ನವದೆಹಲಿ: ನ್ಯಾಷನಲ್ ಹೆರಾಲ್ಡ್ ಪ್ರಕರಣದಲ್ಲಿ ಜಾರಿ ನಿರ್ದೇಶನಾಲಯ (ಇಡಿ)ಯಿಂದ ವಿಚಾರಣೆ ಎದುರಿಸುತ್ತಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಅಸೋಸಿಯೇಟೆಡ್ ಜರ್ನಲ್ಸ್ ಲಿಮಿಟೆಡ್ (ಎಜೆಎಲ್) ಸ್ವಾಧೀನದ ಸಂಪೂರ್ಣ ವಹಿವಾಟಿನ ಹೊಣೆಯನ್ನು ಕಾಂಗ್ರೆಸ್ ಮಾಜಿ ಖಜಾಂಚಿ ದಿವಂಗತ ಮೋತಿಲಾಲ್ ವೋರಾ ಮೇಲೆ ಹೊರಿಸಿದ್ದಾರೆ ಎಂದು ಜಾರಿ ನಿರ್ದೇಶನಾಲಯ (ಇಡಿ) ಮೂಲಗಳು ತಿಳಿಸಿವೆ. ಯಂಗ್ ಇಂಡಿಯನ್ಸ್ ಅಸೋಸಿಯೇಟೆಡ್ ಜರ್ನಲ್ಸ್ … Continued