ಭಾನುವಾರವಾದ್ರೂ ಮಾರ್ಚ್‌ 31ರಂದು ಈ ಬ್ಯಾಂಕುಗಳಿಗೆ ರಜೆ ಇಲ್ಲ

ನವದೆಹಲಿ: ಸರ್ಕಾರಿ ವಹಿವಾಟುಗಳಲ್ಲಿ ಭಾಗಿಯಾಗಿರುವ ಎಲ್ಲಾ ಏಜೆನ್ಸಿ ಬ್ಯಾಂಕ್‌ಗಳು ಭಾನುವಾರ, ಮಾರ್ಚ್ 31ರಂದು ತೆರೆದಿರುತ್ತವೆ ಎಂದು ಭಾರತೀಯ ರಿಸರ್ವ್ ಬ್ಯಾಂಕ್ (RBI) ಪ್ರಕಟಿಸಿದೆ. ಈ ನಿರ್ಧಾರವು ಕ್ರೈಸ್ತ ಸಮುದಾಯಕ್ಕೆ ಮಹತ್ವದ ಆಚರಣೆಯಾದ ಈಸ್ಟರ್ ಭಾನುವಾರದಂದು ಹೊಂದಿಕೆಯಾಗುತ್ತದೆ. ಆದಾಗ್ಯೂ, ಎಲ್ಲ ಸರ್ಕಾರಿ ರಶೀದಿಗಳು ಮತ್ತು ಪಾವತಿಗಳನ್ನು 2023-24 ರ ಹಣಕಾಸು ವರ್ಷದೊಳಗೆ ಲೆಕ್ಕಹಾಕಲಾಗಿದೆಯೆ ಎಂದು ಖಚಿತಪಡಿಸಿಕೊಳ್ಳಲು ಕೇಂದ್ರದ … Continued

ಭಾನುವಾರ ಬೆಂಗಳೂರಲ್ಲಿ 10 ಕಿಮೀ ಭರ್ಜರಿ ರೋಡ್‌ ಶೋ ನಡೆಸಿದ ಪ್ರಧಾನಿ ಮೋದಿ | ವೀಕ್ಷಿಸಿ

ಬೆಂಗಳೂರು: ಬೆಂಗಳೂರಿನಲ್ಲಿ ಶನಿವಾರ ಮೂರು ಗಂಟೆಗಳ ಬೃಹತ್ ರೋಡ್‌ ಶೋ ನಡೆಸಿದ ಒಂದು ದಿನದ ನಂತರ, ಪ್ರಧಾನಿ ನರೇಂದ್ರ ಮೋದಿ ಅವರು ಇಂದು, ಭಾನುವಾರ ವಿಭಿನ್ನ ಮಾರ್ಗದಲ್ಲಿ ರೋಡ್‌ಶೋ ನಡೆಸಿದರು. ಪ್ರಧಾನಮಂತ್ರಿಯವರ ಪಕ್ಷವಾದ ಭಾರತೀಯ ಜನತಾ ಪಕ್ಷವು ಎಂಟು ಗಂಟೆಗಳ ಮೆಗಾ ರೋಡ್‌ಶೋವನ್ನು ಮೊದಲೇ ಯೋಜಿಸಲಾಗಿತ್ತು ಎಂದು ಹೇಳಿತ್ತು, ಆದರೆ ಅವರು ಅದನ್ನು ಎರಡು ಭಾಗಗಳಾಗಿ … Continued

ಈಜಿಪ್ಟ್‌ಗೆ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಮೂರು ದಿನಗಳ ಭೇಟಿ: ಸಂಭಾವ್ಯ ತೇಜಸ್ ಒಪ್ಪಂದಕ್ಕೆ ಒತ್ತು

ನವದೆಹಲಿ: ಭಾನುವಾರದಿಂದ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರ ಮೂರು ದಿನಗಳ ಈಜಿಪ್ಟ್ ಪ್ರವಾಸದ ಸಂದರ್ಭದಲ್ಲಿ ರಕ್ಷಣಾ ಮತ್ತು ಭದ್ರತಾ ಸಹಕಾರವನ್ನು ವಿಸ್ತರಿಸುವ ಒಪ್ಪಂದಕ್ಕೆ ಭಾರತ ಮತ್ತು ಈಜಿಪ್ಟ್ ಸಹಿ ಹಾಕಲಿವೆ. ರಾಜನಾಥ್‌ ಸಿಂಗ್ ಅವರ ಭೇಟಿಯು ರಕ್ಷಣಾ ಸಹಕಾರ ಮತ್ತು ಭಾರತ ಮತ್ತು ಈಜಿಪ್ಟ್ ನಡುವಿನ “ವಿಶೇಷ ಸ್ನೇಹ” ವನ್ನು ಮತ್ತಷ್ಟು ಬಲಪಡಿಸುವ ಗುರಿಯನ್ನು … Continued

ಓಮಿಕ್ರಾನ್ : ನೈಟ್ ಕರ್ಫ್ಯೂ ಕುರಿತು ನಾಳಿನ ಸಿಎಂ ನೇತೃತ್ವದಲ್ಲಿ ಸಭೆಯಲ್ಲಿ ನಿರ್ಧಾರ..?

ಹುಬ್ಬಳ್ಳಿ: ರಾಜ್ಯದಲ್ಲಿ ಕೊರೊನಾ ವೈರಸ್ ಹೊಸ ರೂಪಾಂತರಿ ಓಮಿಕ್ರಾನ್ ಸೋಂಕು ಪ್ರಕರಣಗಳ ಸಂಖ್ಯೆ ವ್ಯಾಪಕವಾಗಿ ಹರಡುತ್ತಿದೆ. ಈ ಹಿನ್ನೆಲೆಯಲ್ಲಿ ಭಾನುವಾರ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೇತೃತ್ವದಲ್ಲಿ ಸಭೆ ನಡೆಯಲಿದೆ. ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಓಮಿಕ್ರಾನ್ ಹೆಚ್ಚಳ ಹಿನ್ನೆಲೆಯಲ್ಲಿ ರಾತ್ರಿ ಕರ್ಫ್ಯೂ ಸೇರಿದಂತೆ ಮುಂಜಾಗ್ರತಾ ಕ್ರಮಗಳ ಬಗ್ಗೆ ರವಿವಾರ ಬೆಂಗಳೂರಿನಲ್ಲಿ ತಜ್ಞರು, ಅಧಿಕಾರಿಗಳೊಂದಿಗೆ ಚರ್ಚಿಸಿ ಕ್ರಮ … Continued

ಕೇರಳದಲ್ಲಿ ಜೀಕಾ ವೈರಸ್‍ ಪ್ರಕರಣಗಳ ಸಂಖ್ಯೆ 48ಕ್ಕೆ ಏರಿಕೆ

ತಿರುವನಂತಪುರಂ: ಕೇರಳದಲ್ಲಿ ಭಾನುವಾರ ಇನ್ನೂ ಇಬ್ಬರಿಗೆ ಜೀಕಾ ವೈರಸ್ ಧೃಢಪಡುವುದರೊಂದಿಗೆ ರಾಜ್ಯದಲ್ಲಿ ಈ ಸೋಂಕಿನ ಒಟ್ಟು ಪ್ರಕರಣಗಳ ಸಂಖ್ಯೆ 48ಕ್ಕೆ ಏರಿದೆ ಎಂದು ಆರೋಗ್ಯ ಸಚಿವೆ ವೀಣಾ ಜಾರ್ಜ್ ಭಾನುವಾರ ತಿಳಿಸಿದ್ದಾರೆ. ಭಾನುವಾರ ತಿರುವನಂತಪುರಂ ಜಿಲ್ಲೆಯಲ್ಲಿ 37 ವರ್ಷದ ವ್ಯಕ್ತಿಗೆ ಮತ್ತು ಕಳಕೊಟ್ಟಂ ನಲ್ಲಿ 27 ವರ್ಷದ ಮಹಿಳೆಗೆ ವೈರಸ್ ದೃಢಪಟ್ಟಿದೆ. ಒಟ್ಟು 48 ಪ್ರಕರಣಗಳ … Continued

ಕರ್ನಾಟಕದ 19ನೇ ರಾಜ್ಯಪಾಲರಾಗಿ ತಾವರ್ ಚಂದ್ ಗೆಹ್ಲೋಟ್ ಪ್ರಮಾಣವಚನ

ಬೆಂಗಳೂರು: ತಾವರ್ ಚಂದ್ ಗೆಹ್ಲೋಟ್ ಅವರು ಕರ್ನಾಟಕದ ನೂತನ ರಾಜ್ಯಪಾಲರಾಗಿ ಪ್ರಮಾಣ ವಚನ ಸ್ವೀಕರಿಸಿದರು ಅವರು ರಾಜ್ಯದ 19ನೇ ರಾಜ್ಯಪಾಲರಾಗಿ ಅಧಿಕಾರ ಸ್ವೀಕರಿಸಿದ್ದಾರೆ. ಕರ್ನಾಟಕ ಹೈಕೋರ್ಟ್‌ ಮುಖ್ಯ ನ್ಯಾಯಮೂರ್ತಿ ಅಭಯ್ ಶ್ರೀನಿವಾಸ ಓಕಾ ಅವರು ತಾವರ್ ಚಂದ್ ಗೆಹ್ಲೋಟ್‌ಗೆ ಪ್ರಮಾಣವಚನ ಬೋಧಿಸಿದ್ದಾರೆ. ರಾಜಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ನಿರ್ಗಮಿತ ರಾಜ್ಯಪಾಲ ವಜುಭಾಯಿ ವಾಲಾ, ಮುಖ್ಯಮಂತ್ರಿ ಬಿ,ಎಸ್, ಯಡಿಯೂರಪ್ಪ, … Continued