‘ನಮ್ಮಲ್ಲಿಗೆ ಪ್ರವಾಸಕ್ಕೆ ಬನ್ನಿ, ನಮ್ಮ ಆರ್ಥಿಕತೆ ಬೆಂಬಲಿಸಿ’ : ಹದಗೆಟ್ಟ ಸಂಬಂಧಗಳ ಮಧ್ಯೆ ಭಾರತದ ಪ್ರವಾಸಿಗರಿಗೆ ಮನವಿ ಮಾಡಿದ ಮಾಲ್ಡೀವ್ಸ್ ಸರ್ಕಾರ

ಮಾಲೆ : ಭಾರತ ಮತ್ತು ಮಾಲ್ಡೀವ್ಸ್‌ ದ್ವಿಪಕ್ಷೀಯ ಸಂಬಂಧ ಹದಗೆಟ್ಟಿದೆ. ಹೀಗಾಗಿ ಮಾಲ್ಡೀವ್ಸ್ ಗೆ ಭೇಟಿ ನೀಡುವ ಭಾರತೀಯ ಪ್ರವಾಸಿಗರ ಸಂಖ್ಯೆ ತೀವ್ರವಾಗಿ ಕುಸಿದಿದೆ. ಹೀಗಾಗಿ ಪ್ರವಾಸೋದ್ಯಮವನ್ನೇ ನಂಬಿಕೊಂಡಿರುವ ಮಾಲ್ಡೀವ್ಸ್‌ಗೆ ಆರ್ಥಿಕವಾಗಿ ಹಿನ್ನಡೆಯಾಗಿದ್ದು, ಈಗ ಮಾಲ್ಡೀವ್ಸ್ ಪ್ರವಾಸೋದ್ಯಮ ಸಚಿವ ಇಬ್ರಾಹಿಂ ಫೈಸಲ್ ಅವರು ನಮ್ಮಲ್ಲಿಗೆ ಪ್ರವಾಸಕ್ಕೆ ಬನ್ನಿ, ಆರ್ಥಿಕತೆಯನ್ನು ಬೆಂಬಲಿಸಿ ಎಂದು ಭಾರತೀಯರಿಗೆ ಮನವಿ ಮಾಡಿದ್ದಾರೆ. … Continued

ಶ್ರವಣಬೆಳಗೊಳದಲ್ಲಿ ಕೋನಾರ್ಕ್ ಮಾದರಿ ಪ್ರವಾಸಿ ಸರ್ಕಿಟ್ ನಿರ್ಮಾಣ: ಯೋಗೇಶ್ವರ

ಬೆಂಗಳೂರು: ಶ್ರವಣಬೆಳಗೊಳದಲ್ಲಿ ಜೈನ ಪ್ರವಾಸಿ ಸರ್ಕಿಟ್ ನಿರ್ಮಾಣ ಮಾಡಲು ಚಿಂತನೆ ನಡೆಸಲಾಗಿದೆ ಎಂದು ಪ್ರವಾಸೋದ್ಯಮ ಸಚಿವ ಸಿ.ಪಿ.ಯೋಗೇಶ್ವರ್ ತಿಳಿಸಿದ್ದಾರೆ. ಕೇಂದ್ರ ಸಚಿವ ಧರ್ಮೇಂದ್ರ ಪ್ರಧಾನ್ ಒಡಿಶಾದಲ್ಲಿ ಕೋನಾರ್ಕ್ ಸೂರ್ಯ ದೇವಾಲಯದ ಇತಿಹಾಸ ಹೇಳುವ ಒಂದು ವಿನೂತನ ಪರಿಕಲ್ಪನೆ ಪ್ರವಾಸಿಗರಿಗೆ ಸಾಕಾರಗೊಳಿಸಿದ್ದಾರೆ. ಪ್ರವಾಸಿಗರು ಸೂರ್ಯ ದೇವಾಲಯವನ್ನು ದರ್ಶನ ಮಾಡುವುದಕ್ಕೆ ಮುಂಚೆ ಅಲ್ಲಿ ನಿರ್ಮಾಣ ಮಾಡಿರುವ ಥಿಯೇಟರ್ ನಲ್ಲಿ … Continued