ಬೋರ್‌ವೆಲ್‌ ನಿಂದ ಎಷ್ಟು ಬೇಕೋ ಅಷ್ಟು ನೀರು ಪಂಪ್‌ ಮಾಡಿ ಕುಡಿದ ಆನೆ- ವಿಡಿಯೋ ವೈರಲ್

ನವದೆಹಲಿ: ಆನೆಯೊಂದು ಬೋರ್ ವೆಲ್‍ನಿಂದ ತನಗೆ ಎಷ್ಟು ಬೇಕೋ ಅಷ್ಟು ನೀರನ್ನು ಮಾತ್ರ ಸೇದಿಕೊಂಡು ಕುಡಿದಿರುವ ಅಪರೂಪದ ವೀಡಿಯೋ ಇದೀಗ ವೈರಲ್ ಆಗಿದೆ. ಜಲ ಸಂರಕ್ಷಣೆಯ ಕುರಿತು ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಜಲಶಕ್ತಿ ಸಚಿವಾಲಯವು ಆನೆ ಕೊಳವೆಬಾವಿಯಿಂದ ನೀರು ತೆಗೆಯುತ್ತಿರುವ ವಿಡಿಯೋವನ್ನು ಟ್ವಿಟರ್‌ನಲ್ಲಿ ಹಂಚಿಕೊಂಡಿದೆ. ಅಂತರ್ಜಾಲದಲ್ಲಿ ಹರಿದಾಡುತ್ತಿರುವ ವಿಡಿಯೋದಲ್ಲಿ, ಆನೆ ಕೊಳವೆಬಾವಿಯಿಂದ ನೀರನ್ನು ಪಂಪ್ ಮಾಡುತ್ತದೆ. … Continued