ಬೈಲಹೊಂಗಲ ಶಾಸಕರ ಕಾರು ಅಪಘಾತ

ಬೆಂಗಳೂರು : ವಿಧಾನಸೌಧದ ಮುಂಭಾಗದಲ್ಲೇ ಬೈಲಹೊಂಗಲ ಶಾಸಕ ಮಹಂತೇಶ ಕೌಜಲಗಿ ಕಾರು ಅಪಘಾತವಾಗಿರುವ ಘಟನೆ ನಡೆದಿದೆ. ಶಾಸಕರ ಭವನದಿಂದ ಹೊರಟಿದ್ದ ಶಾಸಕ ಮಹಂತೇಶ್ ಕೌಜಲಗಿ ಅವರ ಕಾರು, ವಿಧಾನಸೌಧದಿಂದ‌ ಹೊರಕ್ಕೆ ಬರುತ್ತಿದ್ದಂತೆ ವಾಹನ ಢಿಕ್ಕಿ ಹೊಡೆದಿದೆ. ವಿಧಾನಸೌಧದ ಹತ್ತಿರ ಅತೀವೇಗವಾಗಿ ಬಂದ ಪೊಲೋ ಕಾರು ಶಾಸಕರ ಭವನದಿಂದ ಬಂದ ಮಹಾಂತೇಶ್‌ ಅವರ ಕಾರಿಗೆ ಗುದ್ದಿದೆ ಎನ್ನಲಾಗಿದೆ. … Continued

ವಿಧಾನಸೌಧ, ವಿಕಾಸ ಸೌಧ, ಎಂಎಸ್‌ ಬಿಲ್ಡಿಂಗ್‌ಗೆ ಸಾರ್ವಜನಿಕ ಪ್ರವೇಶಕ್ಕೆ ನಿರ್ಬಂಧ

ಬೆಂಗಳೂರು : ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಕೊರೋನಾ ಸೋಂಕಿನ ಪ್ರಕರಣಗಳು ಹೆಚ್ಚಳವಾದ ಕಾರಣ ಈಗ ವಿಧಾನಸೌಧ, ವಿಕಾಸಸೌಧ ಮತ್ತು ಬಹುಮಹಡಿ ಕಟ್ಟಗಳಿಗೆ ಸಾರ್ವಜನಿಕರ ಪ್ರವೇಶಕ್ಕೆ ರಾಜ್ಯ ಸರ್ಕಾರ ನಿರ್ಬಂಧ ವಿಧಿಸಿದೆ. ಈ ಮೂಲಕ ಸಾರ್ವಜನಿಕರ ಪ್ರವೇಶಕ್ಕೆ ನಿಷೇಧ ಹೇರಿದೆ. ರಾಜ್ಯ ಸರ್ಕಾರದ ಅಧೀನ ಕಾರ್ಯದರ್ಶಿ ಈ ಕುರಿತು ಸುತ್ತೋಲೆ ಹೊರಡಿಸಿದ್ದು, ಕೊರೊನಾ ವೈರಸ್ 2ನೇ ಅಲೆ … Continued