ನೋಂದಣಿಯಾಗದ ಮದರಸಾಗಳು ದಿನಕ್ಕೆ ₹10 ಸಾವಿರ ದಂಡ ಪಾವತಿಸಬೇಕು : ಉತ್ತರಪ್ರದೇಶ ಶಿಕ್ಷಣ ಇಲಾಖೆ

ಮುಜಾಫರ್‌ನಗರ : ನೋಂದಣಿಯಾಗದೆ ಕಾರ್ಯನಿರ್ವಹಿಸುತ್ತಿರುವ ಮದರಸಾಗಳಿಗೆ ದಿನಕ್ಕೆ ₹10 ಸಾವಿರ ದಂಡ ವಿಧಿಸಲಾಗುವುದು ಎಂದು ಉತ್ತರಪ್ರದೇಶದ ಶಿಕ್ಷಣ ಇಲಾಖೆ ಹೇಳಿದೆ. ದಾಖಲೆಗಳಿಲ್ಲದೆ ಮುಜಾಫರ್‌ನಗರ ಜಿಲ್ಲೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಮದರಸಾಗಳಿಗೆ ಪ್ರಾಥಮಿಕ ಶಿಕ್ಷಣ ಇಲಾಖೆ ನೋಟಿಸ್‌ ಜಾರಿ ಮಾಡಿದ್ದು, ನೋಟಿಸ್‌ ತಲುಪಿದ ಮೂರು ದಿನಗಳೊಳಗೆ ಸರಿಯಾದ ದಾಖಲೆಗಳನ್ನು ಸಲ್ಲಿಸಬೇಕು ಇಲ್ಲವೇ ಕ್ರಮ ಎದುರಿಸಬೇಕು ‘ ಎಂದು ಸೂಚನೆ ನೀಡಲಾಗಿದೆ. … Continued

ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥಗೆ ಕೊರೊನಾ ಸೋಂಕು

ಲಕ್ನೋ: ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರಿಗೆ ಕೊರೊನಾ ಸೋಂಕು ದೃಢಪಟ್ಟಿದೆ. ಅವರು ಕ್ವಾರಂಟೈನ್‌ ಆಗಿದ್ದೇನೆ ಎಂದು ಬುಧವಾರ ಮಧ್ಯಾಹ್ನ ಟ್ವೀಟ್ ಮಾಡಿದ್ದಾರೆ. ಅವರ ಕಚೇರಿಯ ಕೆಲವು ಅಧಿಕಾರಿಗಳಿಗೆ ಕೊರೊನಾ ಸೋಂಕು ದೃಢಪಟ್ಟ ಹಿನ್ನೆಲೆಯಲ್ಲಿ ಅವರು ಕ್ವಾರಂಟೈನ್‌ಗೆ ಒಳಗಾಗಿ ಒಂದು ದಿನದ ನಂತರ ಈ ಪ್ರಕಟಣೆ ಬಂದಿದೆ. ರಾಜ್ಯ ಸರ್ಕಾರದ ಎಲ್ಲಾ ಚಟುವಟಿಕೆಗಳನ್ನು ಸಾಮಾನ್ಯವಾಗಿ … Continued

ಬಲವಂತದ ಮತಾಂತರ ಕಾನೂನು ಜಾರಿಗೊಳಿಸಿದ ಎಲ್‌ಡಿಎಫ್‌, ಯುಡಿಎಫ್‌ ಸರಕಾರಗಳು: ಯೋಗಿ ಆದಿತ್ಯನಾಥ ಖಂಡನೆ

ಬಲವಂತದ ಧಾರ್ಮಿಕ ಮತಾಂತರದ ವಿರುದ್ಧ ಕಾನೂನು ಜಾರಿಗೊಳಿಸದ ಸಿಪಿಐ(ಎಂ) ನೇತೃತ್ವದ ಎಲ್‌ಡಿಎಫ್‌ ಹಾಗೂ ಕಾಂಗ್ರೆಸ್‌ ನೇತೃತ್ವದ ಯುಡಿಎಫ್‌ ಸರಕಾರಗಳನ್ನು ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಖಂಡಿಸಿದ್ದಾರೆ. ಅವರು ಕೇರಳದ ಆಲಪ್ಪುಳ ಜಿಲ್ಲೆಯ ಹರಿಪಾಡ್‌ನಲ್ಲಿ ಬಿಜೆಪಿ ಚುನಾವಣಾ ರ್ಯಾಲಿಯಲ್ಲಿ ಮಾತನಾಡಿ, ಎಲ್‌ಡಿಎಫ್‌ ಹಾಗೂ ಯುಡಿಎಫ್‌ ಸರಕಾರಗಳು ಬಲವಂತದ ಮತಾಂತರ ತಡೆಗೆ ಕಾನೂನು ಜಾರಿ ಮಾಡುವಲ್ಲಿ ವಿಫಲವಾಗಿವೆ … Continued

ದೀದಿ ಭೀತಿಯಿಂದ ಯೋಗಿ ಜೀವನಚರಿತ್ರೆ ಪ್ರಕಾಶನಕ್ಕೆ ಮುಂದಾಗದ ಪಶ್ಚಿಮ ಬಂಗಾಳ ಪ್ರಕಾಶಕರು

ಉತ್ತರ ಪ್ರದೇಶದ ಸಿಎಂ ಯೋಗಿ ಆದಿತ್ಯನಾಥ್‌ ಅವರ ಜೀವನಚರಿತ್ರೆ “ದಿ ಮಾಂಕ್‌ ಹೂ ಬಿಕಮ್‌ ಚೀಫ್‌ ಮಿನಿಸ್ಟರ್‌ʼ ಕೃತಿಯ ಬಂಗಾಳಿ ಆವೃತ್ತಿ ಪ್ರಕಟಿಸಲು ಪಶ್ಚಿಮ ಬಂಗಾಳದ ಪ್ರಕಾಶಕರು ಮುಂದಾಗದಿರಲು ಮಮತಾ ಬ್ಯಾನರ್ಜಿ ಅವರ ಭೀತಿಯೇ ಕಾರಣ ಎಂದು ಕೃತಿಯ ಲೇಖಕ ಶಾಂತನು ಗುಪ್ತಾ ಹೇಳಿದ್ದಾರೆ. ಮಮತಾ ಬ್ಯಾನರ್ಜಿ ಆಡಳಿತದ ಭಯದಿಂದಾಗಿ ಪಶ್ಚಿಮ ಬಂಗಾಳದ ಪ್ರಕಾಶನ ಸಂಸ್ಥೆಗಳು … Continued

ಜೈ ಶ್ರೀರಾಮ್ ಉತ್ತರ ಪ್ರದೇಶ, ಬಂಗಾಳದಲ್ಲಷ್ಟೇ ಅಲ್ಲ ಭಾರತದಾದ್ಯಂತ ಕೆಲಸ ಮಾಡುತ್ತದೆ: ಯೋಗಿ ಆದಿತ್ಯನಾಥ್

“ಜೈ ಶ್ರೀ ರಾಮ್ ಉತ್ತರ ಪ್ರದೇಶ ಮೇ ಭೀ ಚಾಲೆಗಾ, ಬಂಗಾಳ ಮೇ ಭೀ ಚಲೆಗಾ, ಪೂರೇ ದೇಶ್ ಮೇ ಭೀ ಚಲೆಗಾ (ಜೈ ಶ್ರೀ ರಾಮ್ ಉತ್ತರ ಪ್ರದೇಶ, ಬಂಗಾಳ ಮತ್ತು ಭಾರತದಾದ್ಯಂತ ಕೆಲಸ ಮಾಡುತ್ತದೆ)” ಎಂದು ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಹೇಳಿದ್ದಾರೆ. ಸುದ್ದಿ ಚಾನೆಲ್ ನ್ಯೂಸ್ ನೇಷನ್ ಆಯೋಜಿಸಿದ್ದ ಉತ್ತರ … Continued