ಅಪಘಾತದಲ್ಲಿ ಮಗ ಸಾವು ; ಸುದ್ದಿ ಕೇಳಿ ಆಘಾತದಿಂದ ತಾಯಿಯೂ ಕುಸಿದುಬಿದ್ದು ಸಾವು

ಬೀದ‌ರ : ತಾಲೂಕಿನ ಘೋಡಂಪಳ್ಳಿ ಗ್ರಾಮದ ಬಳಿ ಬುಧವಾರ (ಜು.2) ರಾತ್ರಿ 10ರ ಸುಮಾರಿಗೆ ಗೂಡ್ಸ್ ವಾಹನವೊಂದು ರಸ್ತೆ ಪಕ್ಕದ ಬಾವಿಗೆ ಉರುಳಿ, ಅದರಲ್ಲಿದ್ದ ಇಬ್ಬರು ಸಾವಿಗೀಡಾಗಿದ್ದಾರೆ ಹಾಗೂ ಗಾಯಗೊಂಡಿರುವ ಐವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಮತ್ತೊಂದೆಡೆ ಮಗನ ಸಾವಿನ ಸುದ್ದಿ ತಿಳಿದು ವೃದ್ಧ ತಾಯಿ ಹೃದಯಾಘಾತದಿಂದ ಸಾವಿಗೀಡಾದ ಮನಕಲಕುವ ಘಟನೆ ನಡೆದಿದೆ ಎಂದು ವರದಿಯಾಗಿದೆ. ಗೂಡ್ಸ್‌ ವಾಹನ ಬಾವಿಗೆ ಬಿದ್ದು ಮಗ ಲಕ್ಷ್ಮೀಕಾಂತ ಜೋಶಿ ಅಲಿಯಾಸ್ ಕಾಂತರಾಜು (45) ಮೃತಪಟ್ಟಿದ್ದಾರೆ. ಮಗನ ಸಾವಿನ ಸುದ್ದಿ ಕೇಳಿದ ನಂತರ ಆಘಾತಗೊಂಡ ತಾಯಿ ಶಾರದಾಬಾಯಿ (೮೫) ಹೃದಯಾಘಾತದಿಂದ ಕುಸಿದು ಬಿದ್ದು ಸಾವಿಗೀಡಾಗಿದ್ದಾರೆ ಎಂದು ಹೇಳಲಾಗಿದೆ.
ಬೀದರಿನಿಂದ ಚಿಟ್ಟಾ ಮಾರ್ಗವಾಗಿ ಘೋಡಂಪಳ್ಳಿಗೆ ಹೋಗುವ ಮಾರ್ಗದಲ್ಲಿ ಚಾಲಕನ ನಿಯಂತ್ರಣ ತಪ್ಪಿದ ಪ್ರಯಾಣಿಕರಿದ್ದ ಗೂಡ್ಸ್ ವಾಹನ ಬಾವಿಗಗೆ ಬಿದ್ದು ಇಬ್ಬರು ಸಾವಿಗೀಡಾಗಿದ್ದು, ಐವರು ಗಾಯಗೊಂಡ ಘಟನೆ ಸಂಭವಿಸಿತ್ತು. ಘಟನೆಯಲ್ಲಿ ಲಕ್ಷ್ಮೀಕಾಂತ ಜೋಶಿ ಎಂಬವರು ಮೃತಪಟ್ಟಿದ್ದರು. ಅವರು ಮೃತಪಟ್ಟ ಸುದ್ದಿಕೇಳಿದ ತಾಯಿ ಶಾರದಾಬಾಯಿ ಕುದಿಉಬಿದ್ದು ಸಾವಿಗೀಡಾಗಿದ್ದಾರೆ.
ಒಂದೇ ದಿನ ತಾಯಿ- ಮಗನ ಸಾವು ಘಟನೆಯಿಂದ ಘೋಡಂಪಳ್ಳಿ ಗ್ರಾಮದಲ್ಲಿ ಶೋಕದ ಛಾಯೆ ಆವರಿಸಿದ್ದು, ಕುಟುಂಬಸ್ಥರ ಆಕ್ರಂದನ ಮನಕಲಕುವಂತಿದೆ.

ಪ್ರಮುಖ ಸುದ್ದಿ :-   ವೀಡಿಯೊ...| ಕಾರವಾರ: ಕೊಡಸಳ್ಳಿ ಡ್ಯಾಂ ರಸ್ತೆಯಲ್ಲಿ ಗುಡ್ಡ ಕುಸಿತ

3 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement