೨೦೨೪ರ ಲೋಕಸಭಾ ಚುನಾವಣೆಯಲ್ಲಿ ವಾರಾಣಸಿಯಲ್ಲಿ ಮೋದಿ ವಿರುದ್ಧ ದೀದಿ ಸ್ಪರ್ಧೆ: ಟಿಎಂಸಿ

ಕೋಲ್ಕತ್ತ: ನಂದಿಗ್ರಾಮ ಕ್ಷೇತ್ರದಲ್ಲಿ ಟಿಎಂಸಿ ಅಧ್ಯಕ್ಷೆ ಮಮತಾ ಬ್ಯಾನರ್ಜಿ ಗೆಲ್ಲುವುದು ಖಚಿತವಾಗಿದ್ದು, ಮುಂದಿನ ಲೋಕಸಭಾ ಚುನಾವಣೆಯಲ್ಲಿ ದೀದಿ ಪ್ರಧಾನಿ ಮೋದಿ ವಿರುದ್ಧ ವಾರಾಣಸಿಯಲ್ಲಿ ಕಣಕ್ಕಿಳಿಯಲಿದ್ದಾರೆ ಎಂದು ಟಿಎಂಸಿ ತಿಳಿಸಿದೆ.
ನಂದಿಗ್ರಾಮದಲ್ಲಿ ಸೋಲುವ ಮಾತೇ ಇಲ್ಲ. ಬೇರೆ ಕ್ಷೇತ್ರದಲ್ಲಿ ಅವರು ಸ್ಪರ್ಧಿಸುವ ಅವಶ್ಯಕತೆಯಿಲ್ಲ. ಮಮತಾ ಬ್ಯಾನರ್ಜಿ ಮುಂದಿನ ಲೋಕಸಭಾ ಚುನಾವಣೆಯಲ್ಲಿ ವಾರಾಣಸಿಯಿಂದ ಸೆಣೆಸಲಿದ್ದು, ಮೋದಿಯವರು ಸುರಕ್ಷಿತ ಕ್ಷೇತ್ರ ನೋಡಿಕೊಳ್ಳುವುದು ಒಳಿತು ಎಂದು ಹೇಳಿದೆ.
ದೀದಿ ಬೇರೊಂದು ಕ್ಷೇತ್ರದಿಂದ ನಾಮಪತ್ರ ಸಲ್ಲಿಸುತ್ತಾರೆ ಎಂದು ಬಿಜೆಪಿಯವರು ಸುಳ್ಳು ಸುದ್ದಿ ಹರಡುತ್ತಿದ್ದಾರೆ. ಇದರಲ್ಲಿ ಸತ್ಯಾಂಶವಿಲ್ಲ. ಬಂಗಾಳದ ಕೆಲವು ಸ್ಥಾನಗಳಿಗೆ ನಾಮಪತ್ರ ಸಲ್ಲಿಸಲು ಕೆಲವು ದಿನಗಳು ಬಾಕಿ ಇರುವುದು ಇಲ್ಲಿ ಗಮನಾರ್ಹವಾಗಿದೆ. ಸುವೆಂದು ಅಧಿಕಾರಿಯ ಭದ್ರಕೋಟೆ ನಂದಿಗ್ರಾಮದಲ್ಲಿ ಮಮತಾ ಶೇ.೯೦ರಷ್ಟು ಮತಗಳನ್ನು ಪಡೆದುಕೊಳ್ಳಲಿದ್ದಾರೆ ಎಂದು ಪಕ್ಷದ ಪ್ರಕಟನೆ ತಿಳಿಸಿದೆ.
ನಂದಿಗ್ರಾಮ್ನಲ್ಲಿ ಸಹಾಯ ಕೋರಿ ಮಮತಾ ಅವರ ಫೋನ್ ಸಂಭಾಷಣೆ ವೈರಲ್ ಆಗಿದೆ
ಟಿಎಂಸಿ ಮುಖ್ಯಸ್ಥ ಮಮತಾ ಬ್ಯಾನರ್ಜಿ ಮತ್ತು ಬಿಜೆಪಿ ಮುಖಂಡ ಪ್ರಲಯ ಪಾಲ್‌ಗೆ ಸಹಾಯ ಮಾಡುವಂತೆ ಕೋರಿದ ಆಡಿಯೋ ವೈರಲ್‌ ಆಗಿದೆ. ಬಿಜೆಪಿಯ ಸುವೇಂದು ಅಧಿಕಾರಿ  ಬಿಟ್ಟು ಟಿಎಂಸಿ ಬೆಂಬಲಿಸುವಂತೆ ಮಮತಾ ಕೋರಿದ್ದರು. ಆದರೆ ಪ್ರಲಯ ಪಾಲ್‌ ಮಮತಾ ಕೋರಿಕೆಯನ್ನು ತಳ್ಳಿಹಾಕಿ ಬಿಜೆಪಿಗೆ ಬೆಂಬಲಿಸುವುದಾಗಿ ತಿಳಿಸಿದ್ದಾರೆ.

ಪ್ರಮುಖ ಸುದ್ದಿ :-   ವೀಡಿಯೊ..| ರಾಷ್ಟ್ರದ ಸಂಪತ್ತಿನಲ್ಲಿ ಮುಸ್ಲಿಮರಿಗೆ ಮೊದಲ ಆದ್ಯತೆ ; ಮನಮೋಹನ ಸಿಂಗ್ ಹಳೆಯ ವೀಡಿಯೊ ಮೂಲಕ ಕಾಂಗ್ರೆಸ್ಸಿಗೆ ತಿರುಗೇಟು ನೀಡಿದ ಬಿಜೆಪಿ

4 / 5. 2

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement