ಹೊನ್ನಾವರ : ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರ ತಾಲೂಕಿನ ಪಟ್ಟಣ ಪಂಚಾಯತ ಆಗಿ ಘೋಷಣೆಯಾದ ನಂತರ ಮಂಕಿಯಲ್ಲಿ ನಡೆದ ಮೊದಲ ಮಹತ್ವದ ಚುನಾವಣೆಯಲ್ಲಿ ಭಾರತೀಯ ಜನತಾ ಪಕ್ಷವು (ಬಿಜೆಪಿ) ಅಭೂತಪೂರ್ವ ಗೆಲುವು ಸಾಧಿಸಿದ್ದು, ಆಡಳಿತದ ಚುಕ್ಕಾಣಿ ಹಿಡಿದಿದೆ.
ಜಿಲ್ಲಾ ಉಸ್ತುವಾರಿ ಸಚಿವರ ತವರು ಕ್ಷೇತ್ರದಲ್ಲೇ ಕಾಂಗ್ರೆಸ್ಸಿಗೆ ಹಿನ್ನಡೆಯಾಗಿದೆ. ಸಚಿವ ಮಂಕಾಳ ವೈದ್ಯರಿಗೆ ಸ್ವಕ್ಷೇತ್ರದಲ್ಲಿ ಹಿನ್ನಡೆಯಾದರೆ,ಮಾಜಿ ಸಚಿವ ಶಿವಾನಂದ ನಾಯ್ಕ ಬಣ ಮೇಲುಗೈ ಸಾಧಿಸಿದೆ.
ಒಟ್ಟು 20 ವಾರ್ಡ್ಗಳ ಪೈಕಿ ಬಿಜೆಪಿಯು 12 ಸ್ಥಾನಗಳನ್ನು ಗೆದ್ದುಕೊಳ್ಳುವ ಮೂಲಕ ಸ್ಪಷ್ಟ ಬಹುಮತ ಗಳಿಸಿದೆ. ಆಡಳಿತಾರೂಢ ಕಾಂಗ್ರೆಸ್ ಕೇವಲ 8 ಸ್ಥಾನಗಳಿಗೆ ತೃಪ್ತಿಪಟ್ಟುಕೊಳ್ಳಬೇಕಾಯಿತು. ಗೆಲುವಿನ ಸುದ್ದಿ ತಿಳಿಯುತ್ತಿದ್ದಂತೆಯೇ ಹೊನ್ನಾವರದ ಶರಾವತಿ ವೃತ್ತದಲ್ಲಿ ಜಮಾಯಿಸಿದ ಬಿಜೆಪಿ ಕಾರ್ಯಕರ್ತರು ಪಟಾಕಿ ಸಿಡಿಸಿ, ಪರಸ್ಪರ ಸಿಹಿ ಹಂಚಿ ಸಂಭ್ರಮಿಸಿದ್ದಾರೆ.
ವಾರ್ಡಗಳು ಮತ್ತು ಗೆದ್ದ ಅಭ್ಯರ್ಥಿಗಳು :
1ನೇವಾರ್ಡ್: ಜ್ಯೋತಿ ಸತೀಶ ಖಾರ್ವಿ ( ಬಿಜೆಪಿ) 407ಮತಗಳು
2ನೇವಾರ್ಡ್:ಮೀನಾಕ್ಷಿ ಕೃಷ್ಣ ಹಸ್ಲರ (ಬಿಜೆಪಿ), 297ಮತಗಳು
3ನೇವಾರ್ಡ್: ಆನಂದ ಗಣಪತಿ ನಾಯ್ಕ ( ಬಿಜೆಪಿ) 276 ಮತಗಳು
4ನೇವಾರ್ಡ್: ರೇಷ್ಮಾ ಫರ್ನಾಂಡೀಸ್ ( ಕಾಂಗ್ರೆಸ್), ಅವಿರೋಧ ಆಯ್ಕೆ
5ನೇವಾರ್ಡ್: ಮಹಮ್ಮದ್ ಸಿದ್ದಿಕ್ ಹಸನ್ ಬಾಪು ( ಕಾಂಗ್ರೆಸ್) ಅವಿರೋಧ ಆಯ್ಕೆ
6ನೇವಾರ್ಡ್: ರಹಮತುಲ್ಲಾ ಬೊಟ್ಲೆರ್ (ಕಾಂಗ್ರೆಸ್), 435 ಮತಗಳು
7ನೇವಾರ್ಡ್: ಸವಿತಾ ಮಲ್ಲಯ್ಯ ನಾಯ್ಕ (ಬಿಜೆಪಿ), 220 ಮತಗಳು
8ನೇವಾರ್ಡ್: ಪೀಟರ ಎಸ್.ರೊಡ್ರಗೀಸ್ (ಬಿಜೆಪಿ) 287 ಮತಗಳು
9ನೇವಾರ್ಡ್: ಗೀತಾ ರಮಾಕಾಂತ ಹರಿಕಂತ್ರ (ಬಿಜೆಪಿ) 472ಮತಗಳು
10ನೇವಾರ್ಡ್: ಗಜಾನನ ಬಾಲಯ್ಯ ನಾಯ್ಕ (ಕಾಂಗ್ರೆಸ್), 376ಮತಗಳು
11ನೇವಾರ್ಡ್: ಸತೀಶ ದೇವಪ್ಪ ನಾಯ್ಕ (ಬಿಜೆಪಿ) 282 ಮತಗಳು
12ನೇವಾರ್ಡ್: ಸಂಜೀವ ಗಂಗಾಧರ ನಾಯ್ಕ (ಕಾಂಗ್ರೆಸ್), 273 ಮತಗಳು
13ನೇ ವಾರ್ಡ್ : ರೇಖಾ ಗಿರೀಶ ನಾಯ್ಕ (ಬಿಜೆಪಿ) 548 ಮತಗಳು
14ನೇವಾರ್ಡ್: ನೇತ್ರಾವತಿ ಈಶ್ವರ ಗೌಡ (ಬಿಜೆಪಿ) 223 ಮತಗಳು
15ನೇವಾರ್ಡ್: ರವಿ ಉಮೇಶ ನಾಯ್ಕ (ಬಿಜೆಪಿ), 592 ಮತಗಳು
16ನೇ ವಾರ್ಡ್: ಉಲ್ಲಾಸ ಅಂಗದ ನಾಯ್ಕ (ಕಾಂಗ್ರೆಸ್), 155 ಮತಗಳು
17ನೇವಾರ್ಡ್: ಉಷಾ ಕೃಷ್ಣ ನಾಯ್ಕ (ಕಾಂಗ್ರೆಸ್), 397 ಮತಗಳು
18ನೇ ವಾರ್ಡ್: ವಿಜಯಾ ಮೋಹನ ನಾಯ್ಕ (ಬಿಜೆಪಿ) 388 ಮತಗಳು
19ನೇವಾರ್ಡ್: ವಿನಾಯಕ ಮೊಗೇರ (ಕಾಂಗ್ರೆಸ್), 299 ಮತಗಳು
20ನೇ ವಾರ್ಡ್: ಸವಿತಾ ಹನುಮಂತ ನಾಯ್ಕ (ಬಿಜೆಪಿ) 344 ಮತಗಳು


ನಿಮ್ಮ ಕಾಮೆಂಟ್ ಬರೆಯಿರಿ