
ಕಲಬುರಗಿ: ಜಿಲ್ಲೆಯ ಕಾಳಗಿ ಸಂಸ್ಥಾನ ಮಠದ ಪೀಠಕ್ಕೆ ಐದು ವರ್ಷದ ಬಾಲಕನನ್ನು ಉತ್ತರಾಧಿಕಾರಿಯಾಗಿ ನೇಮಿಸಲಾಗಿದೆ.
ಜಿಲ್ಲೆಯ ಕಾಳಗಿ ಸಂಸ್ಥಾನ ಹಿರೇಮಠಕ್ಕೆ ಐದು ವರ್ಷದ ಬಾಲಕನನ್ನು ಉತ್ತರಾಧಿಕಾರಿ ಪಟ್ಟ ನೀಡಿ ನೇಮಕ ಮಾಡಲಾಗಿದೆ.
ಕಾಳಗಿ ಮಠದ ಈ ಹಿಂದಿನ ಪೀಠಾಧಿಪತಿಗಳಾದ ಶಿವಬಸವ ಶಿವಾಚಾರ್ಯ ಸ್ವಾಮೀಜಿ ಮಂಗಳವಾರ ಹೃದಯಾಘಾತದಿಂದ ಲಿಂಗೈಕ್ಯರಾಗಿದ್ದರು. ಹೀಗಾಗಿ ಮಠದ ಪೀಠಾಧಿಪತಿಯಸ್ಥಾನ ಖಾಲಿ ಬಿಡುವಂತಿಲ್ಲ. ಈ ಕಾರಣಕ್ಕಾಗಿ ಲಿಂಗೈಕ್ಯರಾಗಿರುವ ಶಿವಬಸವ ಶಿವಾಚಾರ್ಯ ಸ್ವಾಮೀಜಿ ಅವರ ಪೂರ್ವಾಶ್ರಮದ ಸಹೋದರನ ಪುತ್ರನಾದ ಐದು ವರ್ಷದ ನೀಲಕಂಠಯ್ಯಸ್ವಾಮಿ ಹಿರೇಮಠರನ್ನು ಮಠದ ಪೀಠಾಧಿಪತಿಯಾಗಿ ನೇಮಕ ಮಾಡಲಾಗಿದೆ.
ಮಂಗಳವಾರ ಅನೇಕ ಮಠಾಧೀಶರ ಸಮ್ಮುಖದಲ್ಲಿ ಈ ಪ್ರಕ್ರಿಯೇ ನಡೆದಿದೆ. ಮಠದ ನಿಯಮದ ಹಾಗೂ ಸಂಪ್ರದಾಯದ ಪ್ರಕಾರ ಮಂಗಳವಾರ ಐದು ವರ್ಷದ ಬಾಲಕನಿಗೆ ಪಟ್ಟ ನೀಡಲಾಗಿದೆ ಎಂದು ಸ್ವಾಮೀಜಿಗಳು ತಿಳಿಸಿದ್ದಾರೆ.
ಅನೇಕ ಸ್ವಾಮೀಜಿಗಳ ಸಮ್ಮುಖದಲ್ಲಿ ಉತ್ತರಾಧಿಕಾರಿ ಪಟ್ಟದ ಪ್ರಕ್ರಿಯೆ ನಡೆಯಿತು. ಎಲ್ಲ ಕಾರ್ಯಕ್ರಮಗಳ ನಂತರ ಬಾಲಕನನ್ನು ಮಠದ ಉತ್ತರಾಧಿಕಾರಿ ಮಾಡಿರುವುದಾಗಿ ಸ್ವಾಮೀಜಿಗಳು ಅಧಿಕೃತವಾಗಿ ಪ್ರಕಟಿಸಿದರು.



ನಿಮ್ಮ ಕಾಮೆಂಟ್ ಬರೆಯಿರಿ