ಬೆಂಗಳೂರು: ಯಡಿಯೂರಪ್ಪನವರ ಪದತ್ಯಾಗದ ನಂತರ ಕರ್ನಾಟಕ ಬಿಜೆಪಿಯಲ್ಲಿ ಹೀಗೇ ನಡೆಯುತ್ತದೆ ಎಂದು ಹೇಳುವ ಮನಸ್ಥಿತಿಯಲ್ಲಿ ಪಕ್ಷದ ಹೈಕಮಾಂಡ್ ಇಲ್ಲವೇ ಎನ್ನ ಎಂದು ಹೇಳುವ ಈ ಒಂದು ವಿದ್ಯಮಾನ ಈಗ ಮತ್ತೆ ಸುದ್ದಿಯಾಗುತ್ತಿದೆ.
ಬಿಜೆಪಿಯ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿ.ಎಲ್. ಸಂತೋಷ ಮತ್ತು ಜೆಡಿಎಸ್ ನಾಯಕ ಹಾಗೂದೇವೇಗೌಡ ಅವರ ಹಿರಿಯ ಪುತ್ರ ಎಚ್.ಡಿ.ರೇವಣ್ಣ ದೆಹಲಿಯಲ್ಲಿ ರಹಸ್ಯೆ ಸಭೆ ನಡೆಸಿದ್ದಾರೆ ಎನ್ನುವ ವಿಷಯ ಈಗ ಮತ್ತೆ ಮುನ್ನೆಲೆಗೆ ಬಂದಿದೆ.
ನಾಲ್ಕು ದಿನಗಳ ಹಿಂದೆ ಈ ರಹಸ್ಯ ಸಭೆ ನಡೆದಿದೆ ಎಂದು ಹೇಳಲಾಗುತ್ತಿದ್ದು, ಯಡಿಯೂರಪ್ಪನವರ ರಾಜೀನಾಮೆಯ ನಂತರ ರಾಜಕೀಯ ಬಿಕ್ಕಟ್ಟ ಏನಾದರೂ ಎದುರಾದರೆ, ಅದನ್ನು ಸಂಭಾಳಿಸಲು ಪೂರ್ವಭಾವಿ ಮಾತುಕತೆ ನಡೆದಿದೆ ಎಂದು ಹೇಳಲಾಗುತ್ತಿದೆ. ಈ ಸಬೆಯಲ್ಲಿ ರೇವಣ್ಣ ಅವರ ಪುತ್ರ ಹಾಗೂ ಸಂಸದ ಪ್ರಜ್ವಲ್ ಅವರೂ ಇದ್ದರು ಎಂದು ಹೇಳಲಾಗುತ್ತಿದೆ.
ಯಡಿಯೂರಪ್ಪ ಅವರ ರಾಜೀನಾಮೆಯ ನಂತರ ಮುಖ್ಯಮಂತ್ರಿ ಆಗುವ ರೇಸಿನಲ್ಲಿ ಸಂತೋಷ್ ಅವರ ಹೆಸರು ಸಹ ಮುಂಚೂಣಿಯಲ್ಲಿದೆ. ದೆಹಲಿಯಿಂದ ಬೆಂಗಳೂರಿಗೆ ಆಗಮಿಸಿರುವ ಸಂತೋಷ ಅವರಿಗೆ ವರಿಷ್ಠರಿಂದ ಸಂದೇಶವಿದೆ ಎಂದೆಲ್ಲ ಹೇಳಲಾಗುತ್ತಿದೆ.
ಯಡಿಯೂರಪ್ಪನವರ ಅಧಿಕಾರದ ಅವಧಿಯಲ್ಲಿ ಅವರ ಮತ್ತು ಮಅಜಿ ಮುಖ್ಯಮಂತ್ರಿ ಎಚ್ಡಿ.ಕುಮಾರಸ್ವಮಿ ಅವರ ಸಂಬಂಧ ಚೆನ್ನಾಗಿಯೇ ಇತ್ತು. ಕುಮಾರಸ್ವಾಮಿಯವರು ಹಲವು ಬಾರಿ ಯಡಿಯೂರಪ್ಪ ಅವರನ್ನು ಭೇಟಿಯಾಗಿಯೂ ಇದ್ದರು. ಇದರ ಬೆನ್ನಲ್ಲೇ ಈಗ, ರೇವಣ್ಣ ಅವರು ಸಂತೋಷ್ ಅವರನ್ನು ಭೇಟಿಯಾಗಿರುವುದರ ಹಿಂದೆ ಯಡಿಯೂರಪ್ಪ ರಾಜೀನಾಮೆಯ ನಂತರದ ರಾಜಕೀಯ ಲೆಕ್ಕಾಚಾರ ಅಡಿಗಿದೆ ಎಂದು ಹೇಳಲಾಗುತ್ತಿದೆ.
ರಾಜೀನಾಮೆ ನೀಡಲು ಯಡಿಯೂರಪ್ಪನವರಿಂದ ಷರತ್ತು..?
ರಾಜೀನಾಮೆ ನೀಡಲು ಯಡಿಯೂರಪ್ಪನವರು ಷರತ್ತನ್ನು ವಿಧಿಸಿದ್ದಾರೆ ಎನ್ನುವ ಸುದ್ದಿಯೂ ಇದೆ. ಒಂದು ವೇಳೆ, ಅವರ ಬೇಡಿಕೆಯನ್ನು ವರಿಷ್ಠರು ಮುಂದೆ ಈಡೇರಿಸದಿದ್ದರೆ, ಯಡಿಯೂರಪ್ಪ ಅವರು ಯಾವ ನಿರ್ಧಾರ ತೆಗೆದುಕೊಳ್ಳುತ್ತಾರೆ ಎಂದು ಹೇಳಲು ಸಾಧ್ಯವಿಲ್ಲ. ಇದರಿಂದ ಸರ್ಕಾರ ನಡೆಸಲು ತೊಂದರೆಗಳು ಎದುರಾಗಬಹುದು ಎನ್ನುವುದು ವರಿಷ್ಠರ ಲೆಕ್ಕಾಚಾರ. ಹಾಗಾಗಿಯೇ ಮುಮದಿನ ವಿಚಾರ ಗಮನದಲ್ಲಿಟ್ಟು ರೇವಣ್ಣ ಅವರನ್ನು ಸಂತೋಷ್ ಭೇಟಿಯಾಗಿದ್ದಾರೆ ಎಂದು ಹೇಳಲಾಗುತ್ತಿದೆ.
ಯಡಿಯೂರಪ್ಪನವರು ನನಗೆ ಯಾವ ಹುದ್ದೆಯೂ (ಪ್ರಮುಖವಾಗಿ ರಾಜ್ಯಪಾಲ) ಬೇಡವೆಂದು ವಿದಾಯ ದಿನದಂದು ಸ್ಪಷ್ಟಪಡಿಸಿದ್ದಾರೆ.ಅಂದರೆ ಅವರು ಸಕ್ರಿಯ ರಾಜಕಾರಣದಲ್ಲಿರುವುದು ಸ್ಪಷ್ಟ. ಅವರು ಸಕ್ರಿಯ ರಾಜಕಾರಣದಲ್ಲಿದ್ದರೆ ಅವರನ್ನು ಎದುರು ಹಾಕಿಕೊಂಡು ಕರ್ನಾಟಕದ ರಾಜ್ಯಭಾರ ನಡೆಸುವುದು ಅಷ್ಟು ಸುಲಭವಲ್ಲ. ಹೀಗಾಗಿಯೇ ಸಂದರ್ಭ ಬಂದರೆ ಜೆಡಿಎಸ್ ಬೆಂಬಲ ಕೋರುವುದು ಈ ಮಾತುಕತೆ ಹಿಂದಿನ ಮರ್ಮ ಎಂದು ವ್ಯಾಖ್ಯಾನಿಸಲಾಗುತ್ತಿದೆ.
ಸಮ್ಮಿಶ್ರ ಸರ್ಕಾರದಲ್ಲಿ ಕೈಕೊಟ್ಟಿದ್ದಕ್ಕೆ ಅಪ್ಪ-ಮಗನ ದೂಷಿಸಿದ ಬಿಎಸ್ವೈ ಹಿಂದಿನ ಲೆಕ್ಕಾಚಾರ..
ಬಿ.ಎಲ್.ಸಂತೋಷ ಹಾಗೂ ಎಚ್.ಡಿ.ರೇವಣ್ಣ ಅವರ ಭೇಟಿಯ ಬಗ್ಗೆ ಮಾಹಿತಿಯಿದ್ದ ಯಡಿಯೂರಪ್ಪ ಅವರು ಎರಡು ವರ್ಷಗಳ ಸರ್ಕಾರದ ಸಾದನೆ ಸಮಾವೇಶದಲ್ಲಿ ತಮ್ಮ ರಾಜೀನಾಮೆ ವಿಷಯ ಪ್ರಕಟಿಸುವ ಮೊದಲು ಜೆಡಿಎಸ್ ಒಪ್ಪಂದದಂತೆ ತನಗೆ ಅಧಿಕಾರ ಹಸ್ತಾಂತರಿಸದೇ ಇರುವುದನ್ನು ಉದ್ದೇಶಪೂರ್ವಕವಾಗಿಯೇ ಪ್ರಸ್ತಾಪ ಮಾಡಿದ್ದಾರೆ ಎಂದು ಹೇಳಲಾಗುತ್ತಿದೆ. ಅವರು ತಮ್ಮ ಭಾಷಣದಲ್ಲಿ ಅಪ್ಪ(ದೇವೇಗೌಡ) ಹಾಗೂ ಮಗ (ಕುಮಾರಸ್ವಾಮಿ) ತನಗೆ ಕೈಕೊಟ್ಟಿದ್ದನ್ನು ಪ್ರಸ್ತಾಪಿಸಿದರು. ಅಂದರೆ ಯಡಿಯೂರಪ್ಪ ಈ ಬಗ್ಗೆ ಏನೆಲ್ಲ ನಡೆಯುತ್ತಿದೆ ಎಂಬುದು ತನಗೂ ಗೊತ್ತಿದೆ ಎಂಬುದನ್ನು ಹೇಳಿದ್ದಾರೆ. ಅದಕ್ಕೆ ಮುಂದಿನ ನಡೆಯ ಬಗ್ಗೆಯೂ ತಾವು ವಿಚಾರ ಮಾಡುವುದಾಗಿಯೂ ಅವರು ಸಂದೇಶ ರವಾನಿಸಿದ್ದಾರೆ ಎಂದು ವಿಶ್ಲೇಷಿಸಲಾಗುತ್ತಿದೆ.
ಒಟ್ಟಿನಲ್ಲಿ ಬಿಜೆಪಿಯ ಈ ನಡೆ ಯಾರನ್ನೇ ಮುಖ್ಯಮಂತ್ರಿಯಾಗಿ ಆಯ್ಕೆ ಮಾಡಿದರೂ ಯಡಿಯೂರಪ್ಪ ಸಹಕಾರವಿಲ್ಲದೆ ಬಿಜೆಪಿ ಹೈಕಮಾಂಡಿಗೆ ಸರ್ಕಾರ ನಡೆಸುವುದು ಅಷ್ಟುಸುಲಭವಿಲ್ಲ ಎಂಬುದು ಗೊತ್ತಿದ್ದಂತೆ ಕಾಣುತ್ತಿದೆ. ಯಡಿಯೂರಪ್ಪ ತಾವು ಸಕ್ರಿಯ ರಾಜಕಾಣದಲ್ಲಿ ಉಳಿಯುವುದಾಗಿ ಹೇಳಿರುವುದು ಮತ್ತು ಪಕ್ಷಕ್ಕೆ ವಲಸೆ ಬಂದ ಶಾಸಕರ ಮೇಲೆ ಯಡಿಯೂರಪ್ಪ ಪ್ರಭಾವವೇ ಹೆಚ್ಚಾಗಿರುವುದು ಈಗ ಹೈಕಮಾಂಡ್ ತೀರ ಎಚ್ಚರಿಕೆ ಹೆಜ್ಜೆ ಇಡುವಂತೆ ಮಾಡಿದೆ ಎಂದು ಕಾಣುತ್ತಿದೆ.


ನಿಮ್ಮ ಕಾಮೆಂಟ್ ಬರೆಯಿರಿ