ಧರ್ಮವು ಅನುಮತಿಸಿದರೂ ಸಹ….ಮೊದಲ ಪತ್ನಿ ಜೀವಂತ ಇದ್ದಾಗ ಸರ್ಕಾರಿ ನೌಕರರು 2ನೇ ಮದುವೆ ಆಗುವಂತಿಲ್ಲ : ಅಸ್ಸಾಂ ಸರ್ಕಾರ

ಗುವಾಹತಿ : ಅಸ್ಸಾಂ ಸರ್ಕಾರಿ ನೌಕರರು ತಮ್ಮ ಪತ್ನಿ ಜೀವಂತವಾಗಿದ್ದಾಗ ಸರ್ಕಾರದ ಅನುಮತಿಯಿಲ್ಲದೆ ಎರಡನೇ ಮದುವೆಯಾಗಲು ಅವಕಾಶ ಇಲ್ಲ ಎಂದು ಹೇಳಿದೆ. ಯಾವುದೇ ಧರ್ಮದ ವೈಯಕ್ತಿಕ ಕಾನೂನು ಎರಡನೇ ಮದುವೆಗೆ ಅನುಮತಿಸಿದ್ದರೂ ಸಹ ಎರಡನೇ ಬಾರಿಗೆ ಮದುವೆಯಾಗುವಂತಿಲ್ಲ ಎಂದು ಸರ್ಕಾರ ಹೇಳಿದೆ.
ಯಾವುದೇ ಸಮುದಾಯವನ್ನು ಉಲ್ಲೇಖಿಸದೆ, ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಅವರು ತಮ್ಮ ಧರ್ಮವು ದ್ವಿಪತ್ನಿತ್ವವನ್ನು ಅನುಮತಿಸಿದರೂ ಸಹ ಪತ್ನಿ ಜೀವಂತವಾಗಿದ್ದಾಗ ಅಸ್ಸಾಂ ಸರ್ಕಾರಿ ಉದ್ಯೋಗಿ ಎರಡನೇ ಮದುವೆಯಾಗುವಾಗ ರಾಜ್ಯ ಸರ್ಕಾರದ ಅನುಮತಿ ಪಡೆಯಬೇಕು ಎಂದು ಹೇಳಿದ್ದಾರೆ.
ಒಂದು ಧರ್ಮವು ನಿಮಗೆ ಎರಡನೇ ಮದುವೆಯಾಗಲು ಅವಕಾಶ ನೀಡಿದ್ದರೂ ಸಹ, ನೀವು ರಾಜ್ಯ ಸರ್ಕಾರದ ಅನುಮತಿಯನ್ನು ಪಡೆಯಬೇಕು ಎಂದು ಮುಖ್ಯಮಂತ್ರಿ ಹೇಳಿದರು.
ಉದ್ಯೋಗಿಯ ಮರಣದ ನಂತರ ಇಬ್ಬರೂ ಪತ್ನಿಯರು ಗಂಡನ ಪಿಂಚಣಿಗಾಗಿ ಹೋರಾಡುವ ಪ್ರಕರಣಗಳನ್ನು ನಾವು ನೋಡಿದ್ದೇವೆ ಎಂದು ಅವರು ಹೇಳಿದರು.

ಅಸ್ಸಾಂ ಸರ್ಕಾರವು ತನ್ನ ಉದ್ಯೋಗಿಗಳಿಗೆ ಈ ಸೂಚನೆಗಳನ್ನು ಅಕ್ಟೋಬರ್ 20 ರಂದು ಕಚೇರಿ ಮೆಮೊದಲ್ಲಿ ನೀಡಿದೆ. ಸರ್ಕಾರಿ ನೌಕರನು ತನ್ನ ಹೆಂಡತಿ ಜೀವಂತವಾಗಿರುವಾಗ ಸರ್ಕಾರದ ಅನುಮತಿಯಿಲ್ಲದೆ ಮರುಮದುವೆ ಆಗಬಾರದು ಎಂದು ಸಿಬ್ಬಂದಿ ಇಲಾಖೆಯ ಕಚೇರಿ ಜ್ಞಾಪಕ ಪತ್ರದಲ್ಲಿ ತಿಳಿಸಲಾಗಿದೆ. ಆದಾಗ್ಯೂ, ವಿಚ್ಛೇದನದ ಮಾನದಂಡಗಳ ಬಗ್ಗೆ ಯಾವುದೇ ಉಲ್ಲೇಖವಿಲ್ಲ. ಸಿಬ್ಬಂದಿ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ನೀರಜ್ ವರ್ಮ ಅವರು ಅಕ್ಟೋಬರ್ 20ರಂದು ಈ ಕುರಿತು ಅಧಿಸೂಚನೆಯನ್ನು ಹೊರಡಿಸಿದ್ದಾರೆ. ಅಸ್ಸಾಂ ನಾಗರಿಕ ಸೇವಾ ನಿಯಮಗಳು 1965ರ ನಿಯಮ 26ರ ನಿಬಂಧನೆಗಳ ಅಡಿಯಲ್ಲಿ ಮಾರ್ಗಸೂಚಿಗಳನ್ನು ಹೊರಡಿಸಲಾಗಿದೆ.
ಅದೇ ರೀತಿ ಯಾವುದೇ ಮಹಿಳಾ ಸರ್ಕಾರಿ ನೌಕರರು ತಮ್ಮ ಪತಿ ಜೀವಂತವಾಗಿದ್ದರೆ ಮೊದಲು ಸರ್ಕಾರದ ಅನುಮತಿಯನ್ನು ಪಡೆಯದೆ ಮದುವೆಯಾಗುವಂತಿಲ್ಲ ಎಂದು ತಕ್ಷಣದಿಂದಲೇ ಜಾರಿಗೆ ಬರುವಂತೆ ಆದೇಶದಲ್ಲಿ ತಿಳಿಸಲಾಗಿದೆ.

ಪ್ರಮುಖ ಸುದ್ದಿ :-   ಅಯೋಧ್ಯೆ ರಾಮ ಮಂದಿರಕ್ಕೆ ಭೇಟಿ ನೀಡಿದ್ದಕ್ಕೆ ವಿರೋಧ : ಕಾಂಗ್ರೆಸ್ಸಿಗೆ ರಾಜೀನಾಮೆ ನೀಡಿದ ಪಕ್ಷದ ರಾಷ್ಟ್ರೀಯ ವಕ್ತಾರೆ ರಾಧಿಕಾ ಖೇರಾ

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement