ನವದೆಹಲಿ: ದೆಹಲಿಯ ಛತ್ತರ್‌ಪುರ ಪ್ರದೇಶದಲ್ಲಿ ರಸ್ತೆಬದಿಯಲ್ಲಿ ನಿಂತಿದ್ದ ವ್ಯಕ್ತಿಯ ಮೇಲೆ ಬೀದಿ ಗೂಳಿಯೊಂದು ದಾಳಿ ಮಾಡಿದ್ದು, ಈ ಭೀಕರ ಘಟನೆ ಸಿಸಿಟಿವಿ ದೃಶ್ಯಾವಳಿಯಲ್ಲಿ ಸೆರೆಯಾಗಿದೆ.
ಸಾಮಾಜಿಕ ಮಾಧ್ಯಮ ವೇದಿಕೆ X ನಲ್ಲಿ ಪೋಸ್ಟ್ ಮಾಡಲಾದ ವೀಡಿಯೊದಲ್ಲಿ, ರಸ್ತೆಬದಿಯಲ್ಲಿ ಸ್ಕೂಟರ್ ಬಳಿ ಬರುತ್ತಿದ್ದ ವ್ಯಕ್ತಿಯೊಬ್ಬರ ಮೇಲೆ ಬೀದದಿ ಗೂಳಿ ದಿಢೀರನೆ ದಾಳಿ ಮಾಡಿದ್ದನ್ನು ತೋರಿಸಿದೆ. ಗೂಳಿ ವ್ಯಕ್ತಿಯನ್ನು ತನ್ನ ಕೊಂಬುಗಳಿಂದ ಎತ್ತಿ ಬಲವಾಗಿ ನೆಲಕ್ಕೆ ಅಪ್ಪಳಿಸಿದೆ. ನಂತರ ರಸ್ತೆಯ ಮಧ್ಯಕ್ಕೆ ಎಳೆದುಕೊಂಡು ಹೋಗಿ ತಿವಿಯಲು ಹಾಗೂ ತುಳಿಯಲು ಪ್ರಾರಂಭಿಸುತ್ತದೆ.
ನಂತರ ಸ್ಥಳೀಯರು ಆಗಮಿಸಿ ದೊಣ್ಣೆಗಳಿಂದ ಹೋರಿಯನ್ನು ಓಡಿಸಲು ಪ್ರಯತ್ನಿಸಿದರು. ಆ ಗೂಳಿಯು ಹೆದರಿಸಲು ಪ್ರಯತ್ನಿಸಿದ ಮಹಿಳೆಯರಲ್ಲಿ ಒಬ್ಬಳನ್ನು ಅದು ನೆಲಕ್ಕೆ ತಳ್ಳಿತು. ವ್ಯಕ್ತಿಯನ್ನು ರಕ್ಷಣೆ ಮಾಡಲಾಗಿದ್ದು, ನಂತರ ಆಸ್ಪತ್ರೆಗೆ ಸಾಗಿಸಲಾಯಿತು, ಅಲ್ಲಿ ಅವರು ವೈದ್ಯಕೀಯ ಚಿಕಿತ್ಸೆ ಪಡೆಯುತ್ತಿದ್ದಾರೆ.
ಇದಕ್ಕೂ ಮೊದಲು, ಇದೇ ರೀತಿಯ ಘಟನೆಯಲ್ಲಿ, ದೆಹಲಿಯ ಅಲಿಪುರ ಪ್ರದೇಶದಲ್ಲಿ ಬೀದಿ ಗೂಳಿಯೊಂದು ಇಬ್ಬರ ಮೇಲೆ ದಾಳಿ ಮಾಡಿ 67 ವರ್ಷದ ವ್ಯಕ್ತಿಯೊಬ್ಬರು ಮೃತಪಟ್ಟಿದ್ದರು ಮತ್ತು ಇನ್ನೊಬ್ಬರು ಗಾಯಗೊಂಡಿದ್ದರು.
ನಿಮ್ಮ ಕಾಮೆಂಟ್ ಬರೆಯಿರಿ