ಪಾಕ್‌ ಸರ್ಕಾರದ ಮಾತನ್ನೇ ಕೇಳುತ್ತಿಲ್ಲ ಸೇನೆ…! ಭಾರತದ ಜೊತೆ ಕದನ ವಿರಾಮ ಒಪ್ಪಂದ ತಿರಸ್ಕರಿಸಿದ ಪಾಕಿಸ್ತಾನಿ ಸೇನೆ ; ಮತ್ತೆ ದಾಳಿ…!

ನವದೆಹಲಿ: ಸೇನಾ ಕಾರ್ಯಾಚರಣೆಗಳನ್ನು ನಿಲ್ಲಿಸಲು ಭಾರತದ ಜೊತೆ ಒಪ್ಪಂದ ಮಾಡಿಕೊಂಡ ಕೆಲವೇ ಗಂಟೆಗಳ ನಂತರ, ಪಾಕಿಸ್ತಾನ ಸೇನೆಯು ನಿಯಂತ್ರಣ ರೇಖೆಯಾದ್ಯಂತ ಅಪ್ರಚೋದಿತ ಶೆಲ್ ದಾಳಿ ನಡೆಸಿದೆ ಮತ್ತು ಹಲವಾರು ಭಾರತೀಯ ಸ್ಥಳಗಳ ಮೇಲೆ ಡ್ರೋನ್‌ ಗಳಿಂದ ದಾಳಿ ನಡೆಸಿದೆ. ಕದನ ವಿರಾಮ ಒಪ್ಪಂದದ ನಂತರ ಶನಿವಾರ ಸಂಜೆ ಅದನ್ನು ಉಲ್ಲಂಘಿಸಿದ ಪಾಕಿಸ್ತಾನ ಜಮ್ಮುವಿನ ಅಂತಾರಾಷ್ಟ್ರೀಯ ಗಡಿಯಲ್ಲಿ ನಡೆಸಿದ ಗುಂಡಿನ ದಾಳಿಯಲ್ಲಿ ಬಿಎಸ್‌ಎಫ್ ಯೋಧ ಸಾವಿಗೀಡಾಗಿದ್ದಾರೆ ಮತ್ತು ಏಳು ಮಂದಿ ಗಾಯಗೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಭಾರತ ಮತ್ತು ಪಾಕಿಸ್ತಾನ ಕದನ ವಿರಾಮಕ್ಕೆ ಒಪ್ಪಿಕೊಂಡ ನಂತರ ಇದು ಸಂಭವಿಸಿದೆ, ವಿದೇಶಾಂಗ ಕಾರ್ಯದರ್ಶಿ ವಿಕ್ರಮ ಮಿಸ್ರಿ ಎರಡೂ ದೇಶಗಳ ಮಿಲಿಟರಿ ಕಾರ್ಯಾಚರಣೆಗಳ ಮಹಾನಿರ್ದೇಶಕರು ಶನಿವಾರ ಸಂಜೆ 5 ಗಂಟೆಯಿಂದ ಜಾರಿಗೆ ಬರುವಂತೆ ಭೂಮಿ, ವಾಯು ಮತ್ತು ಸಮುದ್ರದಲ್ಲಿನ ಎಲ್ಲಾ ದಾಳಿ ಮತ್ತು ಮಿಲಿಟರಿ ಕಾರ್ಯಾಚರಣೆಯನ್ನು ನಿಲ್ಲಿಸಲು ನಿರ್ಧರಿಸಿದ್ದಾರೆ ಎಂದು ಪ್ರಕಟಿಸಿದರು.

ಇತ್ತೀಚಿನ ಕದನ ವಿರಾಮ ಉಲ್ಲಂಘನೆಯು ಪಾಕಿಸ್ತಾನದ ರಾಜಕೀಯ ನಾಯಕತ್ವ ಮತ್ತು ಅದರ ಸೇನೆಯ ನಡುವಿನ ಸ್ಪಷ್ಟ ಒಡಕನ್ನು ಸೂಚಿಸುತ್ತದೆ. ಒಂದೆಡೆ, ಪಾಕಿಸ್ತಾನ ಪ್ರಧಾನಿ ಶೆಹಬಾಜ್ ಷರೀಫ್ ಪಾಕಿಸ್ತಾನದ ಸೇನೆಯು ಕದನ ವಿರಾಮವನ್ನು ಉಲ್ಲಂಘಿಸುತ್ತಿರುವಾಗ, ಅದರ ಪ್ರಧಾನಿ ಶೆಹಬಾಜ್ ಷರೀಫ್ ಅವರು X ನಲ್ಲಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರಿಗೆ ಧನ್ಯವಾದ ಸಂದೇಶವನ್ನು ಪೋಸ್ಟ್ ಮಾಡಿರುವುದು ಇನ್ನೂ ಆಶ್ಚರ್ಯಕರವಾಗಿದೆ. ಕದನ ವಿರಾಮ ಏರ್ಪಡಿಸಿದ್ದಕ್ಕಾಗಿ ಷರೀಫ್ ಅಮೆರಿಕ ನಾಯಕತ್ವಕ್ಕೆ ಧನ್ಯವಾದ ಅರ್ಪಿಸಿದರು ಮತ್ತು ಈ ಪ್ರದೇಶದಲ್ಲಿನ ಸಮಸ್ಯೆಗಳ ಪರಿಹಾರಕ್ಕೆ ಇದು ಹೊಸ ಆರಂಭವನ್ನು ನೀಡುತ್ತದೆ ಎಂದು ಆಶಿಸಿದರು. “ಈ ಪ್ರದೇಶದಲ್ಲಿ ಶಾಂತಿಗಾಗಿ ಅಧ್ಯಕ್ಷ ಟ್ರಂಪ್ ಅವರ ನಾಯಕತ್ವ ಮತ್ತು ಪೂರ್ವಭಾವಿ ಪಾತ್ರಕ್ಕಾಗಿ ನಾವು ಧನ್ಯವಾದಗಳನ್ನು ಅರ್ಪಿಸುತ್ತೇವೆ. ಪಾಕಿಸ್ತಾನವು ಅಮೆರಿಕವನ್ನು ಶ್ಲಾಘಿಸುತ್ತದೆ, ಇದನ್ನು ಪ್ರಾದೇಶಿಕ ಶಾಂತಿ ಮತ್ತು ಸ್ಥಿರತೆಯ ಹಿತದೃಷ್ಟಿಯಿಂದ ನಾವು ಸ್ವೀಕರಿಸಿದ್ದೇವೆ” ಎಂದು ಅವರು X ನಲ್ಲಿ ಪೋಸ್ಟ್‌ನಲ್ಲಿ ತಿಳಿಸಿದ್ದಾರೆ.

ಪಾಕಿಸ್ತಾನದ ಉಪ ಪ್ರಧಾನಿ ಇಶಾಕ್ ದಾರ್ ಅವರು ಭಾರತ ಮತ್ತು ಪಾಕಿಸ್ತಾನ ನಡುವಿನ ಕದನ ವಿರಾಮ ಒಪ್ಪಂದದ ಬಗ್ಗೆ ಪೋಸ್ಟ್ ಮಾಡಿ, “ಪಾಕಿಸ್ತಾನ ಮತ್ತು ಭಾರತ ತಕ್ಷಣದಿಂದ ಜಾರಿಗೆ ಬರುವಂತೆ ಕದನ ವಿರಾಮಕ್ಕೆ ಒಪ್ಪಿಕೊಂಡಿವೆ. ಪಾಕಿಸ್ತಾನವು ತನ್ನ ಸಾರ್ವಭೌಮತ್ವ ಮತ್ತು ಪ್ರಾದೇಶಿಕ ಸಮಗ್ರತೆಗೆ ಧಕ್ಕೆಯಾಗದಂತೆ ಈ ಪ್ರದೇಶದಲ್ಲಿ ಶಾಂತಿ ಮತ್ತು ಭದ್ರತೆಗಾಗಿ ಯಾವಾಗಲೂ ಶ್ರಮಿಸಿದೆ ಎಂದು ಹೇಳಿದ್ದಾರೆ.
ಆದರೆ ಇದೇವೇಳೆ ಪಾಕಿಸ್ತಾನ ಸೇನೆಯು ಜಮ್ಮು ಮತ್ತು ಕಾಶ್ಮೀರದ ಗಡಿ ಸಮೀಪದಲ್ಲಿ ಡ್ರೋನ್‌ ಮೂಲಕ ಹಾಗೂ ಶೆಲ್‌ ದಾಳಿ ನಡೆಸಿದ್ದು, ಶ್ರೀನಗರದಲ್ಲಿ 80 ಕ್ಕೂ ಹೆಚ್ಚು ಸ್ಫೋಟಗಳು ಸಂಭವಿಸಿವೆ ಎಂದು ವರದಿಯಾಗಿದೆ.
ಪಾಕಿಸ್ತಾನವು ಭಾರತದ ಗಡಿ ಪ್ರದೇಶಗಳಾದ ಅಖ್ನೂರ್, ಸುಂದರ್‌ಬಾನಿ, ನೌಶೇರಾ, ಕೆಜಿ ಸೆಕ್ಟರ್, ಮೆಂಧರ್, ರಾಜೌರಿ, ಪೂಂಚ್,ಅಂತಾರಾಷ್ಟ್ರೀಯ ಗಡಿ, ಸಾಂಬಾ, ಆರ್‌ಎಸ್ ಪುರ ಪ್ರದೇಶದಲ್ಲಿ ಪಕಿಸ್ತಾನವು ಶೆಲ್‌ ದಾಳಿ ನಡೆಸಿದೆ.
ಡ್ರೋನ್‌ಗಳನ್ನು ಪತ್ತೆಹಚ್ಚಿ ಹೊಡೆದುರುಳಿಸಿದ ಸ್ಥಳಗಳು: ಉಧಂಪುರ, ನೌಶೇರ್, ರಾಜೌರಿ, ಪೂಂಚ್, ಶ್ರೀನಗರ, ಅನಂತನಾಗ್, ಬುಡ್ಗಮ್ ಈ ಪ್ರದೇಶಗಳಲ್ಲಿ ಪಾಕಿಸ್ತಾನವು ಕದನ ವಿರಾಮ ಒಪ್ಪಂದ ಉಲ್ಲಂಘಿಸಿ ದ್ರೋಣ್‌ ದಾಳಿಗಳನ್ನು ನಡೆಸಿದ್ದು, ಪಾಕಿಸ್ತಾನದ ದ್ರೋಣ್‌ಗಳನ್ನು ಭಾರತದ ಸೇನೆ ಹೊಡೆದುರುಳಿಸಿದೆ.

ಕದನ ವಿರಾಮ ಉಲ್ಲಂಘನೆ ಪಾಕಿಸ್ತಾನದ ರಾಜಕೀಯ ಪರಿಸ್ಥಿತಿ ಹಾಗೂ ಸರ್ಕಾರ ಮತ್ತು ಸೇನೆಯ ನಡುವೆ ಇರುವ ಬಿರುಕನ್ನು ಬೀದಿಗೆ ತಂದಿದೆ. ಪಾಕಿಸ್ತಾನದ ಪ್ರಧಾನಿ ಷರೀಫ್ ಮತ್ತು ಪಾಕಿಸ್ತಾನ ಸೇನಾ ಮುಖ್ಯಸ್ಥ ಮುನೀರ್‌ ಒಟ್ಟಿಗೆ ಕೆಲಸ ಮಾಡುತ್ತಿಲ್ಲವೇ ಎಂದು ಹಲವರು ಆಶ್ಚರ್ಯ ಪಡುತ್ತಿದ್ದಾರೆ.
ನಿಜವಾದ ಅಧಿಕಾರ ಪಾಕಿಸ್ತಾನ ಸೇನಾ ಮುಖ್ಯಸ್ಥ ಅಸಿಮ್ ಮುನೀರ್ ಬಳಿ ಇದೆಯೇ ಎಂಬ ಪ್ರಶ್ನೆಗೂ ಕಾರಣವಾಗಿದೆ.
ಮೂಲಗಳು ಉಧಂಪುರದಲ್ಲಿ ಡ್ರೋನ್ ದಾಳಿಯನ್ನು ವರದಿ ಮಾಡಿವೆ, ಶ್ರೀನಗರದಲ್ಲಿ 7–8 ಸ್ಫೋಟಗಳ ಶಬ್ದಗಳು ಕೇಳಿಬಂದಿದ್ದು, ನಾಗರಿಕರಲ್ಲಿ ಭಯ ಹೆಚ್ಚಿದ್ದು, ಪಾಕಿಸ್ತಾನದಿಂದ ಕದನ ವಿರಾಮದ ಉಲ್ಲಂಘನೆಯು ಈ ಪ್ರದೇಶವನ್ನು ಮತ್ತೊಮ್ಮೆ ಅನಿಶ್ಚಿತತೆ ಮತ್ತು ಭಯದಲ್ಲಿ ಮುಳುಗಿಸಿದೆ.

ಪ್ರಮುಖ ಸುದ್ದಿ :-   ಭಾರತದ ಆಪರೇಷನ್ ಸಿಂಧೂರ ದಾಳಿಯಲ್ಲಿ ಈ ಐವರು ನೊಟೊರಿಯಸ್‌ ಭಯೋತ್ಪಾದಕರ ಹತ್ಯೆ ; ಆದ್ರೆ ಅಂತ್ಯಕ್ರಿಯೆ ವೇಳೆ ಸರ್ಕಾರಿ ಗೌರವ ನೀಡಿದ ಪಾಕ್‌..!

5 / 5. 2

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement