
ಮುಂಬೈ: ವ್ಯಕ್ತಿಯೊಬ್ಬ ಅಪ್ರಾಪ್ತ ಬಾಲಕಿಗೆ ಚಾಕು ತೋರಿಸಿ ತನ್ನನ್ನು ಪ್ರೀತಿಸುವಂತೆ ಬೆದರಿಕೆ ಹಾಕಿರುವ ಘಟನೆ ಮಹಾರಾಷ್ಟ್ರದ (Maharstra) ಸತಾರ ನಗರದಲ್ಲಿ ನಡೆದಿದೆ. ಬಾಲಕಿಯನ್ನು ಪ್ರೀತಿಸುವುದಾಗಿ ಹೇಳಿ ಆತ ಬಾಲಕಿಯ ಕುತ್ತಿಗೆಗೆ ಚಾಕು ಹಿಡಿದು ಬೆದರಿಕೆ ಹಾಕಿರುವುದು ವೀಡಿಯೊದಲ್ಲಿ ಕಂಡುಬಂದಿದೆ. ತಕ್ಷಣವೇ ಸೇರಿದ ಜನ ಸಮೂಹ ಯುವಕನ ಹೈಡ್ರಾಮಾ ನಂತರ ಆತನ ಕೈಯಿಂದ ಬಾಲಕಿಯನ್ನು ಬಿಡಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಈ ಘಟನೆಯ ಭಯಾನಕ ವೀಡಿಯೊ ಸಾಮಾಜಿಕ ಜಾಲತಾಣದಲ್ಲಿ ವೈರಲ್ (Viral) ಆಗಿದೆ. ಬಾಲಕಿಯನ್ನು ಪ್ರೀತಿಸುವುದಾಗಿ ಹೇಳಿದ ಆತ ಆಕೆಯ ಕುಟುಂಬವನ್ನು ಬೆದರಿಸಲು ಈ ರೀತಿ ಮಾಡಿದ್ದಾನೆ ಎಂದು ಹೇಳಲಾಗಿದೆ.

ಆಕೆಯ ಹಿಂದೆ ಬಿದ್ದಿದ್ದ ಈ ಯುವಕ ಪ್ರೀತಿಸುವಂತೆ ಆಕೆಯನ್ನು ಪೀಡಿಸುತ್ತಿದ್ದ. ಬಾಲಕಿ ಶಾಲೆಯಿಂದ ಮನೆಗೆ ಮರಳುತ್ತಿದ್ದಾಗ ಆಕೆಯನ್ನು ತಡೆದು ಪ್ರೀತಿಸುವಂತೆ ಹೇಳಿದ್ದಾನೆ. ಆಕೆ ನಿರಾಕರಿಸಿದ ನಂತರ ಚಾಕು ತೋರಿಸಿ ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ್ದಾನೆ. ಸತಾರದ ಬಿಎಸ್ಪಿಎ ಪಥ್ ಕರಂಜೆ ಪ್ರದೇಶದಲ್ಲಿ ಹತ್ತನೇ ತರಗತಿಯ ಅಪ್ರಾಪ್ತ ಬಾಲಕಿಯನ್ನು ಪ್ರೀತಿಸುವುದಾಗಿ ಹೇಳಿ ಪಾಗಲ್ ಪ್ರೇಮಿ ಬಾಲಕಿಯ ಕುತ್ತಿಗೆಗೆ ಚಾಕು ಹಿಡಿದು ಆಕೆಯ ಮನೆಯವರಿಗೆ ಬೆದರಿಕೆ ಹಾಕಲು ಯತ್ನಿಸಿದ್ದಾನೆ.ಏಕಾಏಕಿ ಆಕೆಯ ಎದುರು ಬಂದ ಆತ ಅವಳನ್ನು ತಡೆದು ಆಕೆಯ ಕುತ್ತಿಗೆಗೆ ಚಾಕು ಹಿಡಿದು ಯಾರಾದರೂ ಹತ್ತಿರ ಬಂದರೆ ಅವಳನ್ನು ಕೊಲ್ಲುವುದಾಗಿ ಬೆದರಿಕೆ ಹಾಕಿದ್ದಾನೆ. ಇದನ್ನು ನೋಡಿ ಜನ ಸೇರಿದ್ದಾರೆ. ಆಗ ಆ ವ್ಯಕ್ತಿ ಕೂಗಾಡಿ ಆಕೆಗೆ ಚಾಕುವಿನಿಂದ ಅಪಾಯ ಮಾಡುವುದಾಗಿ ಸುತ್ತಮುತ್ತಲಿನ ಜನರನ್ನು ಹೆದರಿಸಲು ಪ್ರಯತ್ನಿಸಿದ್ದಾನೆ.
ಬಾಲಕಿ ಬೇಡಿಕೊಂಡರೂ ಬಿಡದೆ, ಆಕೆಗೆ ಚಾಕು ತೋರಿಸಿ ಹೆದರಿಸಿದ್ದಾನೆ. ಬಾಲಕಿ ಪೋಷಕರು ಕೂಡ ಯುವಕನಿಗೆ ಬುದ್ಧಿ ಹೇಳಲು ಯತ್ನಿಸಿ ತಮ್ಮ ಮಗಳನ್ನು ಬಿಡು ಎಂದು ಬೇಡಿಕೊಂಡಿದ್ದಾರೆ. ಸೇರಿದ್ದ ಜನರೂ ಅವನಿಗೆ ಮನವಿ ಮಾಡಿದ್ದಾರೆ. ಆದರೂ ಯುವಕ ಚಾಕು ಕೈಯಲ್ಲಿ ಹಿಡಿದು ಕೊಲ್ಲುವ ಬೆದರಿಕೆ ಹಾಕಿದ್ದಾನೆ. ಕೊನೆಗೆ ಹಿಂದಿನಿಂದ ಬಂದ ಸ್ಥಳೀಯರೊಬ್ಬರೂ ಆ ಯುವಕನನ್ನು ಹಿಂದಿನಿಂದ ಹಿಡಿದುಕೊಂಡು ಚಾಕುವನ್ನು ಕಸಿದುಕೊಂಡಿದ್ದಾರೆ. ತಕ್ಷಣವೇ ಅಲ್ಲಿದ್ದವರು ಆತನಿಗೆ ಥಳಿಸಿ ಪೊಲೀಸರಿಗೆ ಒಪ್ಪಿಸಿದ್ದಾರೆ. ಈತ ಈ ಮೊದಲು ಕೆಲವು ಹುಡುಗಿಯರಿಗೆ ಇದೇ ಬೆದರಿಸಿದ್ದ ಎನ್ನಲಾಗಿದೆ.


ನಿಮ್ಮ ಕಾಮೆಂಟ್ ಬರೆಯಿರಿ