ವಿಡಿಯೋ | ಪುಟ್ಟ ಮಕ್ಕಳು ಮಲಗಿದ್ದಾಗಲೇ ಹಾಸಿಗೆಯೊಳಗೆ ಸೇರಿಕೊಂಡಿದ್ದ ಬೃಹತ್‌ ಬೃಹತ್‌ ನಾಗರಹಾವು….!

ಬೆಂಗಳೂರು : ರಾತ್ರಿ ವೇಳೆ ಮನೆಯಲ್ಲಿ ಮಕ್ಕಳು ಮಲಗಿದ್ದಾಗ ಯಾರಿಗೂ ಗೊತ್ತಾಗದಂತೆ ಅವರ ಹಾಸಿಗೆಯೊಳಗೆ ಸೇರಿಕೊಂಡಿದ್ದ 5 ಅಡಿ ಉದ್ದದ ಅಪಾಯಕಾರಿ ನಾಗರಹಾವನ್ನು ಉರಗ ತಜ್ಞರು ಸುರಕ್ಷಿತವಾಗಿ ಹಿಡಿದಿದ್ದು, ಈ ಘಟನೆ ಯಲಹಂಕ ತಾಲೂಕಿನ ಹೆಸರಘಟ್ಟದ ತೋಟಗೆರೆ ಗ್ರಾಮದಲ್ಲಿ ನಡೆದಿದೆ ಎಂದು ವರದಿಯಾಗಿದೆ.
ಯಲಹಂಕ ತಾಲೂಕಿನ ಹೆಸರಘಟ್ಟದ ತೋಟಗೆರೆ ಗ್ರಾಮದಲ್ಲಿ ಜುಲೈ 2 ರಾತ್ರಿ 10:50ರ ಸಮಯದಲ್ಲಿ ಮನೆಯೊಂದರಲ್ಲಿ ನಾಗರಹಾವು ಸೇರಿಕೊಂಡಿತ್ತು. ನಾಗರಹಾವು ನಂತರ ಹಾಸಿಗೆಯಲ್ಲಿ ಮಲಗಿದ್ದ ಪುಟ್ಟ ಮಕ್ಕಳಿಬ್ಬರು ಮಲಗಿದ್ದ ಚಾಪೆಯೊಳಗೆ ಸೇರಿಕೊಂಡಿತ್ತು.
ಮಕ್ಕಳು ಚಾಪೆ ಹಾಗೂ ಅವರು ಹೊದ್ದುಕೊಂಡಿದ್ದ ರಗ್ಗಿನೊಳಗೆ ಅಡಗಿ ಕುಳಿತಿದ್ದ 5 ಅಡಿ ಉದ್ದದ ಅಪಾಯಕಾರಿ ನಾಗರಹಾವನ್ನು ಕಂಡು ಹೆತ್ತವರು ಬೆಚ್ಚಿ ಬಿದ್ದಿದ್ದರು.
ಮಾಹಿತಿ ತಿಳಿದು ಸ್ಥಳಕ್ಕೆ ಬಂದ ಉರಗ ತಜ್ಞ ಪ್ರಶಾಂತ ಅವರು, ಹಾವನ್ನು ರಕ್ಷಣೆ ಮಾಡುವುದರ ಜೊತೆಗೆ ಮಕ್ಕಳ ಪ್ರಾಣವನ್ನು ಸಹ ಉಳಿಸಿದ್ದಾರೆ. ಪೋಷಕರಿಗೆ ಧೈರ್ಯ ತುಂಬಿದ ಅವರು, ಮೊದಲು ಮಲಗಿದ್ದ ಮಕ್ಕಳನ್ನು ಹಾಸಿಗೆಯಿಂದ ಪಾರು ಮಾಡಿದ್ದಾರೆ. ಬಳಿಕ ರಗ್ಗಿನೊಳಗೆ ಅಡಗಿಕೊಂಡಿದ್ದ ನಾಗರಹಾವನ್ನು ಸೆರೆ ಹಿಡಿದಿದ್ದಾರೆ. ಸುರಕ್ಷಿತವಾಗಿ ಸೆರೆ ಹಿಡಿದ ಬಳಿಕ ಮನೆಯವರು ನಿಟ್ಟುಸಿರು ಬಿಟ್ಟಿದ್ದಾರೆ. ನಂತರ ನಾಗರಹಾವನ್ನು ಕಾಡಿಗೆ ಬಿಡಲಾಗಿದೆ.
ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement