ಮೆದುಳು ನಿಷ್ಕ್ರಿಯ ಶಿರಸಿ ಮಹಿಳೆ ಅಂಗಾಂಗ ದಾನ: ಬೆಂಗಳೂರಿಗೆ ಒಯ್ಯಲು ಧಾರವಾಡದಿಂದ ಹುಬ್ಬಳ್ಳಿಗೆ ಝೀರೋ ಟ್ರಾಫಿಕ್

ಹುಬ್ಬಳ್ಳಿ:ಮೆದುಳು ನಿಷ್ಕ್ರಿಯವಾಗಿದ್ದ ಮಹಿಳೆಯೊಬ್ಬರು ಮಾಡಿದ ಅಂಗಾಂಗಗಳನ್ನು ಶನಿವಾರ ವಿಮಾನದ ಮೂಲಕಮಾಡುವ ಮೂಲಕ ಬೆಂಗಳೂರಿಗೆ ರವಾನಿಸಲಾಯಿತು.

ಕಣ್ಣು, ಕಿಡ್ನಿ, ಲಿವರ್ ಅಂಗಾಂಗಗಳನ್ನು ಸಾಗಿಸಲು ಝೀರೋ ಟ್ರಾಫಿಕ್ ವ್ಯವಸ್ಥೆ ಮಾಡುವ ಮೂಲಕ ಹುಬ್ಬಳ್ಳಿ ಪೊಲೀಸರು ಗಮನ ಸೆಳೆದಿದ್ದಾರೆ. ಪೊಲೀಸರ ಸಹಕಾರದೊಂದಿಗೆ 10 ನಿಮಿಷದಲ್ಲಿ 16 ಕಿಲೋ ಮೀಟರ್ ದೂರ ವೈದ್ಯರು ಅಂಗಾಂಗಗಳನ್ನು ಸಾಗಿಸಿದ್ದಾರೆ.

ಉತ್ತರ ಕನ್ನಡ ಜಿಲ್ಲೆ ಶಿರಸಿಯ ಸುನಂದಾ  ನಾಯ್ಕ (53) ಎಂಬುವರು ಜೂ. 23ರಂದು ಮನೆಯಲ್ಲಿ ಬಿದ್ದು ಅವರ ತಲೆಗೆ ಪೆಟ್ಟಾಗಿತ್ತು. ಚಿಕಿತ್ಸೆಗಾಗಿ ನಗರದ ಎಸ್‌ಡಿಎಂ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಎರಡು ದಿನಗಳ ಚಿಕಿತ್ಸೆಯ ನಂತರ ಚೇತರಿಸಿಕೊಳ್ಳದೆ ಮೆದುಳು ನಿಷ್ಕ್ರಿಯವಾಗಿತ್ತು. ಜೂ. 25ರಂದು ವೈದ್ಯರು ಅವರಿಗೆ ಮೆದುಳು ನಿಷ್ಕ್ರಿಯ (ಬ್ರೇನ್‌ ಡೆಡ್‌) ಆಗಿರುವುದನ್ನು ತಿಳಿಸಿದರು. ಸಂಜೆ ಕುಟುಂಬದವರು ಮಹಿಳೆಯ ಅಂಗಾಂಗಗಳನ್ನು ದಾನ ಮಾಡಲು ತೀರ್ಮಾನಿಸಿದರು.. ಅದರಂತೆ ಶನಿವಾರ ಮಹಿಳೆಯ ಎರಡು ಕಣ್ಣು, ಎರಡು ಕಿಡ್ನಿ ಹಾಗೂ ಲಿವರ್‌ ಅನ್ನು ಶ್ತ್ರಸಚಿಕಿತ್ಸೆಯ ಮೂಲಕ ಪಡೆಯಲಾಯಿತು. ಮಹಿಳೆಯ ಸಾವಿನಲ್ಲೂ ಅಮಗಾಂಗ ದಾನ ಮಾಡಿ ಮತ್ತೊಬ್ಬರ ಬಾಳಿಗೆ ಬೆಳಕಾಗುವ ಮೂಲಕ  ಕುಟುಂಬ ವರ್ಗ ಸಾರ್ಥಕತೆ ಮೆರೆಯಿತು.

ಪ್ರಮುಖ ಸುದ್ದಿ :-   ಬಸವನಗುಡಿಯ ರೇವಣ್ಣ ನಿವಾಸದಲ್ಲಿ ಸ್ಥಳ ಮಹಜರು ನಡೆಸಿದ ಎಸ್‌ಐಟಿ

ಕಣ್ಣು ಮತ್ತು ಕಿಡ್ನಿಯನ್ನು ಆಸ್ಪತ್ರೆಯಲ್ಲೇ ಬಳಸಲಾಯಿತು. ಲಿವರ್‌ ಅನ್ನು ಬೆಂಗಳೂರಿನ ಜೆ.ಪಿ. ನಗರದ ಆಸ್ಟರ್ ಆರ್.ವಿ. ಆಸ್ಪತ್ರೆಗೆ ರವಾನಿಸಲಾಯಿತು.
ಎಸ್‌ಡಿಎಂ ಆಸ್ಪತ್ರೆಯಿಂದ ಹುಬ್ಬಳ್ಳಿ ವಿಮಾನ ನಿಲ್ದಾಣದವರೆಗೆ ಅಂಗಾಂಗವನ್ನು ಆಂಬುಲೆನ್ಸಿನಲ್ಲಿ ಸಾಗಿಸಲು ಎಸ್‌ಡಿಎಂ ಆಸ್ಪತ್ರೆಯವರು ಶನಿವಾರ ಬೆಳಗ್ಗೆ ಝೀರೊ ಟ್ರಾಫಿಕ್ ವ್ಯವಸ್ಥೆ ಕಲ್ಪಿಸುವಂತೆ ಪೊಲೀಸ್ ಇಲಾಖೆಯನ್ನು ಕೋರಿದ್ದರು. ಬೆಳಗ್ಗೆ 10:45ರ ಸುಮಾರಿಗೆ ಎಸ್‌ಡಿಎಂ ಆಸ್ಪತ್ರೆಯಿಂದ ಹೊರಟ ಅಂಗಾಂಗ ಹೊತ್ತ ವಾಹನ ವಿಮಾನ ನಿಲ್ದಾಣದವರೆಗಿನ 16 ಕಿ.ಮೀ. ದೂರವನ್ನು ಕೇವಲ 10 ನಿಮಿಷಗಳಲ್ಲಿ ಕ್ರಮಿಸುವಲ್ಲಿ ಯಶಸ್ವಿಯಾಗಿದೆ.
ಇದನ್ನು ಬೆಂಗಳೂರಿಗೆ ವಿಮಾನದ ಮೂಲಕ ಒಯ್ಯಬೇಕಿತ್ತು. ಹೀಗಾಗಿ ಧಾರವಾಡ ಸತ್ತೂರಿನ ಎಸ್ಡಿಎಂ ಆಸ್ಪತ್ರೆಯಿಂದ ನವನಗರ, ಹುಬ್ಬಳ್ಳಿಯ ಹೊಸೂರು ವೃತದಿಂದ, ಗೋಕುಲ್ ರಸ್ತೆ ಮಾರ್ಗವಾಗಿ ಸಾಗಿ ಹುಬ್ಬಳ್ಳಿ ವಿಮಾನ ನಿಲ್ದಾಣ ತಲುಪಿದ್ದಾರೆ. ಧಾರವಾಡ ಎಸ್‌ಡಿಎಂ ಆಸ್ಪತ್ರೆಯ ವೈದ್ಯರ ಮನವಿ ಮೇರೆಗೆ ಅಂಗಾಂಗ ಬೇಗನೆ ಸಾಗಿಸುವ ಉದೇಶದಿಂದ 16 ಕಿಲೋಮೀಟರ್ ರಸ್ತೆಯಲ್ಲಿ ಝೀರೋ ಟ್ರಾಫಿಕ್‌ ವ್ಯವಸ್ಥೆ ಮಾಡಿ ಪೊಲೀಸರು ಅಂಗಾಂಗ ಸಾಗಿಸುವುದಕ್ಕೆ ನೆರವಾಗಿದ್ದಾರೆ.
ವೈದ್ಯರು ವಿಮಾನದ ಮೂಲಕ ಬೆಂಗಳೂರಿನ ಖಾಸಗಿ ಆಸ್ಪತ್ರೆಗೆ ತೆರಳಿದ್ದು, ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ವ್ಯಕ್ತಿಯೊಬ್ಬರಿಗೆ ಚಿಕಿತ್ಸೆ ಪಡೆಯುತ್ತಿದ್ದು, ಲಿವರ್ ಅವಶ್ಯಕತೆ ಮಾಹಿತಿ ಮೇರೆಗೆ ಎಸ್ ಡಿ‌ಎಮ್ ಆಸ್ಪತ್ರೆಯ ವೈದ್ಯರು ಬೆಂಗಳೂರಿಗೆ ವಿಮಾನ ಮೂಲಕ ಲಿವರ್ ತೆಗೆದುಕೊಂಡು ತೆರಳಿದರು.
ಹುಬ್ಬಳ್ಳಿ ಧಾರವಾಡ ಪೊಲೀಸ್ ಕಮಿಷನರೇಟ್ ವತಿಯಿಂದ ಅಗತ್ಯ ಪೊಲೀಸ್ ಬೆಂಗಾವಲು ಸೇವೆಯನ್ನು ಒದಗಿಸಲಾಯಿತು. (ಜೀರೋ ಟ್ರಾಫಿಕ್ ಗೆ ಸಹಕರಿಸಿದ ನಾಗರಿಕರಿಗೆ ಪೊಲೀಸ್ ಇಲಾಖೆ ಧನ್ಯವಾದ ತಿಳಿಸಿದೆ. ಪೊಲೀಸರ ಸ್ಪಂದನೆಗೆ ಜನರೂ ಪ್ರಶಂಸಿಸಿದ್ದಾರೆ.

ಪ್ರಮುಖ ಸುದ್ದಿ :-   ಬೆಂಗಳೂರು ಸೇರಿ ರಾಜ್ಯದ ಈ ಜಿಲ್ಲೆಗಳಲ್ಲಿ ಮೇ 10ರ ವರೆಗೆ ಮಳೆ ಮುನ್ಸೂಚನೆ

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement