ಕ್ಲಿನಿಕ್ ನಲ್ಲಿ ‘ಸ್ಮೈಲ್ ಡಿಸೈನಿಂಗ್’ ಸರ್ಜರಿ ವೇಳೆ 28 ವರ್ಷದ ಮದುವೆ ಗಂಡು ಸಾವು

ಹೈದರಾಬಾದ್‌ : ತನ್ನ ಮದುವೆಗೆ ತಯಾರಿ ನಡೆಸುತ್ತಿದ್ದ ಹೈದರಾಬಾದಿನ 28 ವರ್ಷದ ಯುವಕನೊಬ್ಬ ದಂತ ಚಿಕಿತ್ಸಾಲಯದಲ್ಲಿ ಮಿತಿಮೀರಿದ ಅನಸ್ತೇಷಿಯಾ ಡೋಸ್‌ ನೀಡಿದ್ದರಿಂದ ಮೃತಪಟ್ಟಿದ್ದಾನೆ ಎಂದು ಆರೋಪಿಸಲಾಗಿದೆ. ಫೆಬ್ರವರಿ 16 ರಂದು ಈ ಘಟನೆ ಸಂಭವಿಸಿದ್ದು, ಆ ವ್ಯಕ್ತಿ ತನ್ನ ಮದುವೆಗೆ ಮುಂಚಿತವಾಗಿ ತನ್ನ ಮುಖದ ನಗುವನ್ನು ಹೆಚ್ಚಿಸುವ ಶಸ್ತ್ರ ಚಿಕಿತ್ಸೆಗೆ ದಂತ ಚಿಕಿತ್ಸಾಲಯಕ್ಕೆ ದಾಖಲಾದ ನಂತರ ಈ ದುರ್ಘಟನೆ ಸಂಭವಿಸಿದೆ ಎಂದು ವರದಿಯಾಗಿದೆ.
ಹೇಳಿಕೆಯಲ್ಲಿ, ಲಕ್ಷ್ಮೀ ನಾರಾಯಣ ಎಂದು ಗುರುತಿಸಲಾದ ವ್ಯಕ್ತಿಯ ಕುಟುಂಬವು ಆತ ‘ಸ್ಮೈಲ್ ಡಿಸೈನಿಂಗ್’ ಚಿಕಿತ್ಸೆಗಾಗಿ ಕ್ಲಿನಿಕ್‌ಗೆ ಹೋಗಿದ್ದ ಎಂದು ಹೇಳಿದ್ದಾರೆ.

ಅದೇ ದಿನ ಸಂಜೆ, ಲಕ್ಷ್ಮೀನಾರಾಯಣ ಅವರ ತಂದೆ ವಿಂಜಂ ರಾಮುಲು ಅವರು ತಮ್ಮ ಮಗನ ಫೋನ್‌ಗೆ ಕರೆ ಮಾಡಿದ್ದಾರೆ, ಅದನ್ನು ಕ್ಲಿನಿಕ್ ಸಿಬ್ಬಂದಿ ಸ್ವೀಕರಿಸಿದರು. ಆಗ ಅವರು ನಿಮ್ಮ ಮಗ ಪ್ರಜ್ಞಾಹೀನನಾಗಿ ಬಿದ್ದಿದ್ದಾನೆ ಎಂದು ಲಕ್ಷ್ಮೀ ನಾರಾಯಣ ತಂದೆಗೆ ತಿಳಿಸಿದರು.
ತಕ್ಷಣವೇ ಲಕ್ಷೀ ನಾರಾಯಣ ಅವರನ್ನು ಹತ್ತಿರದ ಆಸ್ಪತ್ರೆಗೆ ಸಾಗಿಸಲಾಯಿತು, ಅಲ್ಲಿ ಅವರು ತಲುಪುವಷ್ಟರಲ್ಲಿ ಮೃತಪಟ್ಟಿದ್ದಾರೆ ಎಂದು ಘೋಷಿಸಲಾಯಿತು ಎಂದು ಅವರ ಕುಟುಂಬದವರು ಹೇಳಿದ್ದಾರೆ.
ಏತನ್ಮಧ್ಯೆ, ಕುಟುಂಬವು ದಂತ ಚಿಕಿತ್ಸಾಲಯದ ವಿರುದ್ಧ ಭಾರತೀಯ ದಂಡ ಸಂಹಿತೆಯ ಸೆಕ್ಷನ್ 304 ಎ ಅಡಿಯಲ್ಲಿ (ನಿರ್ಲಕ್ಷ್ಯದಿಂದ ಸಾವಿಗೆ ಕಾರಣ) ದೂರು ದಾಖಲಿಸಿದೆ. ಲಕ್ಷ್ಮೀ ನಾರಾಯಣ ಅವರಿಗೆ ಹೆಚ್ಚಿನ ಪ್ರಮಾಣದಲ್ಲಿ ಅರಿವಳಿಕೆ ನೀಡಲಾಗಿತ್ತು, ಇದು ಅವರ ಸಾವಿಗೆ ಕಾರಣವಾಯಿತು ಎಂದು ಕುಟುಂಬದವರು ಆರೋಪಿಸಿದ್ದಾರೆ. ಪೊಲೀಸರು ಕ್ಲಿನಿಕ್‌ನಿಂದ ಸಿಸಿಟಿವಿ ಪುರಾವೆಗಳನ್ನು ಸಂಗ್ರಹಿಸಿದ್ದು, ಪ್ರಕರಣದ ಮುಂದಿನ ತನಿಖೆ ನಡೆಸುತ್ತಿದ್ದಾರೆ.

ಪ್ರಮುಖ ಸುದ್ದಿ :-   ಮಧುಮೇಹ, ಹೃದಯ ಸಂಬಂಧಿ ಕಾಯಿಲೆ ಸೇರಿದಂತೆ 41 ಔಷಧಗಳ ಬೆಲೆ ಕಡಿಮೆ ಮಾಡಿದ ಸರ್ಕಾರ

5 / 5. 2

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement