ವೀಡಿಯೊ.: ತೆಲಂಗಾಣದಲ್ಲಿ ಪ್ರಧಾನಿ ರ‍್ಯಾಲಿಯಲ್ಲಿ ಲೈಟ್‌ ಟವರ್ ಏರಿದ ಮಹಿಳೆ ; ಭಾಷಣದ ಮಧ್ಯೆ ಗಮನಿಸಿ ʼಮಗಳೇ ಕೆಳಗೆ ಇಳಿʼ ಎಂದು ಪದೇ ಪದೇ ಮನವಿ ಮಾಡಿದ ಮೋದಿ | ವೀಕ್ಷಿಸಿ

ಹೈದರಾಬಾದ್‌ : ಶನಿವಾರ ತೆಲಂಗಾಣದಲ್ಲಿ ಪ್ರಧಾನಿ ನರೇಂದ್ರ ಮೋದಿಯವರ ರ್ಯಾಲಿಯಲ್ಲಿ, ಮಹಿಳೆಯೊಬ್ಬರು ಅವರ ಗಮನ ಸೆಳೆಯಲು ಮತ್ತು ತನ್ನ ಸಮಸ್ಯೆಗಳ ಬಗ್ಗೆ ಮಾತನಾಡಲು ಲೈಟ್ ಟವರ್ ಅನ್ನು ಏರಿದ್ದರು. ಭಾಷಣ ಮಾಡುತ್ತಿರುವಾಗ ಟವರ್‌ ಏರಿದ ಮಹಿಳೆಯನ್ನು ಗಮನಿಸಿದ ಪ್ರಧಾನಿ ನರೇಂದ್ರ ಮೋದಿ ಅವರು ಕೂಡಲೇ ಟವರ್‌ನಿಂದ ಕೆಳಗೆ ಬರುವಂತೆ ಮನವಿ ಮಾಡಿದರು.
ವೀಡಿಯೊದಲ್ಲಿ ಮಹಿಳೆ ಎತ್ತರದ ಟವರ್‌ ಏರುತ್ತಿರುವುದು ಕಂಡುಬರುತ್ತದೆ ಮತ್ತು ಇದನ್ನು ಗಮನಿಸಿದ ನಂತರ ತಕ್ಷಣವೇ ಕೆಳಗಿಳಿಯುವಂತೆ ಪ್ರಧಾನಿ ಮೋದಿ ಮಹಿಳೆಗೆ ಮನವಿ ಮಾಡಿದ್ದಾರೆ. ಹಾಗೂ ದೋಷಯುಕ್ತ ವೈರಿಂಗ್‌ನಿಂದಾಗಿ ಶಾರ್ಟ್ ಸರ್ಕ್ಯೂಟ್ ಸಂಭವಿಸಬಹುದು ಎಂದು ಹೇಳಿದರು.

“ಬೇಟಾ, ನೀಚೆ ಆವೋ (ಮಗಳೇ ಕೆಳಗೆ ಇಳಿದು  ಬಾ) ನಾವು ನಿಮ್ಮೊಂದಿಗಿದ್ದೇವೆ. ಈ ತಂತಿಯ ಸ್ಥಿತಿ ಚೆನ್ನಾಗಿಲ್ಲ. ಶಾರ್ಟ್ ಸರ್ಕ್ಯೂಟ್ ಆಗಬಹುದು. ಇದರಿಂದ ಯಾರಿಗೂ ಪ್ರಯೋಜನವಾಗುವುದಿಲ್ಲ. ನಾನು ನಿಮಗಾಗಿ ಬಂದಿದ್ದೇನೆ, ನಾನು ನಿಮ್ಮ ಮಾತನ್ನು ಕೇಳುತ್ತೇನೆ” ಎಂದು ವೇದಿಕೆಯಿಂದ ಮಹಿಳೆ ಪ್ರಧಾನಿ ಮೋದಿ ಹೇಳುವುದನ್ನು ಕೇಳಬಹುದು. ಪ್ರಧಾನಿ ಭಾಷಣವನ್ನು ಅನುವಾದಿಸುತ್ತಿದ್ದ ರಾಜ್ಯಸಭಾ ಸದಸ್ಯ ಕೆ ಲಕ್ಷ್ಮಣ್ ಅವರು ತೆಲುಗಿನಲ್ಲಿ ಮನವಿ ಮಾಡಿದರು. ಮಹಿಳೆ ನಂತರ ಒಪ್ಪಿಕೊಂಡರು ಮತ್ತು ಸಮಸ್ಯೆಗಳನ್ನು ಪರಿಹರಿಸುವುದಾಗಿ ಪ್ರಧಾನಿ ಭರವಸೆ ನೀಡಿದ ನಂತರ ಮಹಿಳೆ ಕೆಳಗಿಳಿದರು.

ಪ್ರಮುಖ ಸುದ್ದಿ :-   ಕರ್ನಾಟಕ ನೂತನ ಮುಖ್ಯಮಂತ್ರಿಯಾಗಿ ಡಿಕೆ ಶಿವಕುಮಾರ ಪ್ರಮಾಣ ವಚನ, 13 ಸಚಿವರಿಂದಲೂ ಪ್ರಮಾಣವಚನ ಸ್ವೀಕಾರ

ಸಿಕಂದರಾಬಾದ್‌ನಲ್ಲಿ ಮಾದಿಗ ಮೀಸಲಾತಿ ಹೋರಾಟ ಸಮಿತಿ ಆಯೋಜಿಸಿದ್ದ ರ್ಯಾಲಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಭಾಗವಹಿಸಿದ್ದರು. ಮಾದಿಗ ಸಮುದಾಯವು ತೆಲುಗು ರಾಜ್ಯಗಳಲ್ಲಿ ಪರಿಶಿಷ್ಟ ಜಾತಿಗಳ ಅತಿದೊಡ್ಡ ಸಮುದಾಯದಲ್ಲಿ ಒಂದಾಗಿದೆ.
ರ್ಯಾಲಿಯಲ್ಲಿ ಮಾತನಾಡಿದ ಅವರು, ಮಾದಿಗ ಸಮುದಾಯಕ್ಕೆ ತೆಲಂಗಾಣ ಸರ್ಕಾರವು ಕಳೆದ 10 ವರ್ಷಗಳಿಂದ ದ್ರೋಹ ಬಗೆದಿದ್ದು, ಇತರ ಪಕ್ಷಗಳು ಮಾಡಿರುವ ತಪ್ಪಿಗೆ ಕ್ಷಮೆ ಯಾಚಿಸುವುದಾಗಿ ಹೇಳಿದರು. ಇದಲ್ಲದೆ, ಮಾದಿಗರ ಸಬಲೀಕರಣಕ್ಕಾಗಿ ಸಮಿತಿಯನ್ನು ರಚಿಸುವುದಾಗಿ ಪ್ರಧಾನಿ ಮೋದಿ ಅವರು ಕಾರ್ಯಕ್ರಮದಲ್ಲಿ ಭರವಸೆ ನೀಡಿದರು.

ನವೆಂಬರ್ 3 ರಂದು ಚುನಾವಣೆಗೆ ಅಧಿಸೂಚನೆ ಪ್ರಕಟವಾದ ನಂತರ ನಗರದಲ್ಲಿ ಮೋದಿಯವರ ಸತತ ಎರಡನೇ ರ್ಯಾಲಿ ಇದಾಗಿದೆ. ನವೆಂಬರ್ 7 ರಂದು ಇಲ್ಲಿನ ಎಲ್ ಬಿ ಸ್ಟೇಡಿಯಂನಲ್ಲಿ “ಬಿಸಿ ಆತ್ಮ ಗೌರವ ಸಭೆ” (ಹಿಂದುಳಿದ ವರ್ಗಗಳ ಸ್ವಾಭಿಮಾನ ಸಭೆ) – ರ್ಯಾಲಿಯನ್ನು ಉದ್ದೇಶಿಸಿ ಮೋದಿ ಮಾತನಾಡಿದರು. ನವೆಂಬರ್ 30 ರಂದು ನಡೆಯಲಿರುವ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದರೆ ತೆಲಂಗಾಣದಲ್ಲಿ ಬಿ.ಸಿ ಸಮುದಾಯದ ವ್ಯಕ್ತಿಯನ್ನು ಮುಖ್ಯಮಂತ್ರಿಯನ್ನಾಗಿ ಮಾಡಲಿದೆ ಎಂದು ಭರವಸೆ ನೀಡಿದರು.

ಪ್ರಮುಖ ಸುದ್ದಿ :-   ದೆಹಲಿ ಹೋಟೆಲ್‌ನಲ್ಲಿ ಅಗ್ನಿ ಅವಘಡ : 21 ಮಂದಿ ಸಾವು ; ಜೀವ ಉಳಿಸಿಕೊಳ್ಳಲು ಕಟ್ಟಡದಿಂದ ಧುಮುಕಿದ ಇಬ್ಬರು ಮಹಿಳೆಯರು

5 / 5. 4

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement