ವೀಡಿಯೊ..| ಬಾಲಕರ ಹುಚ್ಚಾಟ : ರೀಲ್‌ ಸ್ಟಂಟ್‌ ಮಾಡಲು ವೇಗವಾಗಿ ಚಲಿಸುತ್ತಿದ್ದ ರೈಲಿನ ಕೆಳಗೆ ಮಲಗಿದ ಬಾಲಕ : ಮೂವರು ಅಪ್ರಾಪ್ತರ ಬಂಧನ

ಭುವನೇಶ್ವರ: ಸಾಮಾಜಿಕ ಮಾಧ್ಯಮದಲ್ಲಿ ಪ್ರಭಾವಿಗಳಾಗಲು ನಡೆಸುವ ರೀಲ್ ಉನ್ಮಾದವು ಅನೇಕ ಸಂದರ್ಭಗಳಲ್ಲಿ ಅವರ ಜೀವಕ್ಕೇ ಅಪಾಯವನ್ನುಂಟು ಮಾಡುತ್ತಿವೆ. ಇಂಥದ್ದೇ ಅಪಾಯಕಾರಿಯಾದ ರೀಲ್‌ ಮಾಡಲು ಹೋದ ಮೂವರು ಅಪ್ರಾಪ್ತ ಬಾಲಕರನ್ನು ಒಡಿಶಾದ ಬೌಧ್ ಜಿಲ್ಲೆಯಲ್ಲಿ ಬಂಧಿಸಲಾಗಿದೆ, ಈ ಸಾಹಸದಲ್ಲಿ ಒಬ್ಬ ಬಾಲಕ ರೈಲು ಹಳಿಗಳ ಮೇಲೆ ಮಲಗಿದ್ದಾಗ ರೈಲು ಅತಿ ವೇಗದಲ್ಲಿ ಆತನ ಮೇಲಿಂದಲೇ ಹಾದುಹೋಗಿದೆ.
ಪುರುನಪಾಣಿ ನಿಲ್ದಾಣದ ಬಳಿಯ ದಾಲುಪಲಿ ಬಳಿ ಈ ಘಟನೆ ನಡೆದಿದೆ. ಹಳಿಗಳ ಮೇಲೆ ಮಲಗಿದ್ದ ಹುಡುಗನನ್ನು ವೀಡಿಯೊದಲ್ಲಿ ತೋರಿಸಲಾಗಿದೆ. ಆತನ ಸ್ನೇಹಿತರಲ್ಲಿ ಒಬ್ಬ ಈ ಅಪಾಯಕಾರಿ ಸ್ಟಂಟ್‌ ಅನ್ನು ಚಿತ್ರೀಕರಿಸಿದ್ದಾನೆ ಮತ್ತು ಇನ್ನೊಬ್ಬ ಅದನ್ನು ನಿರ್ದೇಶಿಸಿದ್ದಾನೆ. ರೈಲು ಹಾದುಹೋಗುವಾಗ ಈ ಅಜಾಗರೂಕ ಸಾಹಸವನ್ನು ನೋಡುತ್ತಿರುವವರು ಸಂಭ್ರಮಿಸುವುದು ಮತ್ತು ಚಪ್ಪಾಳೆ ತಟ್ಟುವುದು ಕೇಳಿಸುತ್ತದೆ.

ಹುಡುಗ ಎದ್ದು ನಿಂತು ಛಾಯಾಚಿತ್ರಗಳಿಗೆ ಪೋಸ್ ನೀಡುತ್ತಿರುವಾಗ ಆತನ ಸ್ನೇಹಿತರು ಸಂತೋಷದಿಂದ ಕಿರುಚುತ್ತಾರೆ. ನಂತರ ವೀಡಿಯೊವನ್ನು ಸಾಮಾಜಿಕ ಮಾಧ್ಯಮದಲ್ಲಿ ಅಪ್‌ಲೋಡ್ ಮಾಡಲಾಯಿತು ಮತ್ತು ಇದು ಕಳವಳಕ್ಕೆ ಕಾರಣವಾಯಿತು. ವರ್ಷಗಳಿಂದ ಸಾರ್ವಜನಿಕರು ಒತ್ತಾಯಿಸುತ್ತ ಬಂದ ನಂತ ನಂತರ ಇತ್ತೀಚೆಗೆ ಬೌಧ್ ಜಿಲ್ಲೆಯ ಹಲವಾರು ಭಾಗಗಳಲ್ಲಿ ರೈಲ್ವೆ ಸೇವೆಗಳನ್ನು ಆರಂಭಿಸಲಾಗಿತ್ತು.
ಪೊಲೀಸರು ಈಗ ಮೂವರು ಬಾಲಕರನ್ನು ವಶಕ್ಕೆ ತೆಗೆದುಕೊಂಡು ವಿಚಾರಣೆ ನಡೆಸುತ್ತಿದ್ದಾರೆ. ಇಂತಹ ಅಜಾಗರೂಕ ಕೃತ್ಯಗಳು ಜೀವಗಳನ್ನು ಅಪಾಯಕ್ಕೆ ಸಿಲುಕಿಸುತ್ತವೆ ಮತ್ತು ಸುರಕ್ಷತಾ ಕಾನೂನುಗಳನ್ನು ಉಲ್ಲಂಘಿಸುತ್ತವೆ ಎಂದು ಅಧಿಕಾರಿಗಳು ಹೇಳಿದ್ದಾರೆ ಮತ್ತು ರೈಲು ಹಳಿಗಳಲ್ಲಿ ಇಂತಹ ಸಾಹಸಗಳ ವಿರುದ್ಧ ಯುವಕರಿಗೆ ಎಚ್ಚರಿಕೆ ನೀಡಿದ್ದಾರೆ. ಸಾಮಾಜಿಕ ಮಾಧ್ಯಮದಲ್ಲಿ ತಮ್ಮ ಮಕ್ಕಳ ಕ್ರಿಯೆಗಳನ್ನು ಮೇಲ್ವಿಚಾರಣೆ ಮಾಡಲು ಅವರು ಪೋಷಕರಿಗೆ ಸೂಚಿಸಿದ್ದಾರೆ.

ಪ್ರಮುಖ ಸುದ್ದಿ :-   ಜಗತ್ತಿನ ಅತ್ಯಂತ ಅಮೂಲ್ಯವಾದ ಕಣ್ಣೀರು ; ಒಂಟೆಯ ಕಣ್ಣೀರಿನ ಹನಿ 26 ಜಾತಿ ವಿಷದ ಹಾವುಗಳ ಕಡಿತಕ್ಕೆ ದಿವ್ಯ ಔಷಧ : ಹೊಸ ಅಧ್ಯಯನ

ಹಳಿಗಳ ಮೇಲೆ ಮಲಗಿದ್ದ ಹುಡುಗ ಹೇಳುವಂತೆ, ತನ್ನ ಸ್ನೇಹಿತರು ಈ ಐಡಿಯಾವನ್ನು ಕೊಟ್ಟರು ಮತ್ತು ರೀಲ್ ವೈರಲ್ ಆಗುತ್ತದೆ ಎಂದು ಆಶಿಸಿದ್ದರು. “ನಾನು ಹಳಿಗಳ ಮೇಲೆ ಮಲಗಿದೆ. ರೈಲು ಹಾದುಹೋದಾಗ, ನನ್ನ ಹೃದಯ ಬಡಿಯುತ್ತಿತ್ತು. ನಾನು ಬದುಕುಳಿಯುತ್ತೇನೆ ಎಂದು ನಿರೀಕ್ಷಿಸಿರಲಿಲ್ಲ” ಎಂದು ಆತ ಹೇಳಿದ್ದಾನೆ.
ಇಂಟರ್ನೆಟ್ ಸೆನ್ಸೇಷನ್ ಆಗುವ ಭರವಸೆಯಲ್ಲಿ ಪ್ರಭಾವಿ ವ್ಯಕ್ತಿಗಳು ತಮ್ಮ ಮತ್ತು ಇತರ ಜನರ ಜೀವಗಳನ್ನು ಪಣಕ್ಕಿಡುವ ಇತ್ತೀಚಿನ ಉದಾಹರಣೆ ಇದು. ಈ ಹಿಂದೆ, ಸೆಲ್ಫಿ ಮತ್ತು ರೀಲ್‌ಗಳನ್ನು ಕ್ಲಿಕ್ಕಿಸಲು ಚಲಿಸುವ ರೈಲುಗಳಿಂದ ಹೊರಗೆ ಕಾಣಿಸಿಕೊಳ್ಳುವಂತಹ, ವಿವಿಧ ಸಾಹಸಗಳನ್ನು ಮಾಡಿದ್ದು ಸಾವಿಗೆ ಕಾರಣವಾಗಿದ್ದವು. ಛಾಯಾಚಿತ್ರಗಳಿಗೆ ಪೋಸ್ ನೀಡಲು ಜನರು ರೈಲುಗಳನ್ನು ಹತ್ತಿ ಸ್ಟಂಟ್‌ ಮಾಡುವಾಗಲೂ ಸಾವುಗಳು ಸಂಭವಿಸಿವೆ.

ಪ್ರಮುಖ ಸುದ್ದಿ :-   ಬಿಹಾರದಲ್ಲಿ ಮತಪಟ್ಟಿ ಪರಿಷ್ಕರಣೆ ; ಸುಪ್ರೀಂ ಕೋರ್ಟ್‌ನಲ್ಲಿ ಪ್ರಶ್ನಿಸಿದ ಆರ್‌ಜೆಡಿ

5 / 5. 2

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement