ಅಮೆರಿಕದಲ್ಲಿ ಇಡಾ ಚಂಡಮಾರುತ ಅಬ್ಬರ; ನ್ಯೂಯಾರ್ಕ್ನಲ್ಲಿ 41 ಸಾವು
ನ್ಯೂಯಾರ್ಕ್: ಅಮೆರಿಕದ ನ್ಯೂಯಾರ್ಕ್ ನಗರದಲ್ಲಿ (New York City) ಅಪ್ಪಳಿಸಿದ ಇಡಾ ಚಂಡಮಾರುತದಿಂದ ಜನಜೀವನ ಸ್ತಬ್ದವಾಗಿದೆ. ಭಾರೀ ಮಳೆಯಿಂದಾಗಿ ಪ್ರವಾಹಗಳು ಉಕ್ಕೇರಿದ ಪರಿಣಾಮ 41 ಮಂದಿ ಮೃತಪಟ್ಟಿದ್ದಾರೆಂದು ವರದಿಯಾಗಿದೆ.
ನ್ಯೂಯಾರ್ಕ್ಗೆ ಚಂಡಮಾರುತ ಅಪ್ಪಳಿಸುವ ಮೊದಲು ಲೂಸಿಯಾನ ರಾಜ್ಯದಲ್ಲೂ ಇದು ಸಾಕಷ್ಟು ಹಾನಿ ಮಾಡಿದೆ. ಅಲ್ಲಿ ಸಾವಿರಾರು ಕಟ್ಟಡಗಳಿಗೆ ಹಾನಿಯಾಗಿದ್ದು, ನೂರಾರು ಮರಗಳು ಧರೆಗುರುಳಿವೆ. ವಿದ್ಯುತ್ ಸರಬರಾಜು ಸ್ಥಗಿತಗೊಂಡಿದೆ. ನ್ಯೂ ಜೆರ್ಸಿ (New Jersey) ರಾಜ್ಯದಲ್ಲಿ 23ಕ್ಕೂ ಹೆಚ್ಚು ಮಂದಿ ಮೃತಪಟ್ಟಿದ್ದಾರೆ. ಅ
ಇಡಾ ಚಂಡಮಾರುತದಿಂದ ನ್ಯೂಯಾರ್ಕ್ ನಗರದ ಬಹುತೇಕ ರಸ್ತೆಗಳು ನದಿಗಳಂತಾಗಿವೆ. ಇಷ್ಟು ಭಾರೀ ಮಳೆಯನ್ನ ನಾನು ನೋಡಿಯೇ ಇಲ್ಲ ಎಂದು ಅಲ್ಲಿನ ಅನೇಕ ನಿವಾಸಿಗಳು ಹೇಳಿದ್ದಾರೆ. . ನಗರದ ಮನ್ಹಟನ್ ಪ್ರದೇಶದಲ್ಲಿರುವ ಹೋಟೆಲ್ಗೆ ಮಳೆ ನೀರು ನುಗ್ಗು ಅವಾಂತರ ಸೃಷ್ಟಿಸಿದೆ. ನ್ಯೂಯಾರ್ಕ್ನ ಒಂದು ಪ್ರದೇಶದಲ್ಲಿ ಒಂದು ಗಂಟೆಯಲ್ಲಿ 80 ಮಿಮೀ ಮಳೆಯಾಗಿ ದಾಖಲೆ ಬರೆದಿದೆ.
ಇಡಾ ಚಂಡಮಾರುತ ಪರಿಣಾಮ ಭಾರೀ ಪ್ರಮಾಣದಲ್ಲಿ ಮಳೆಯಾಗಿದೆ. ಲೂಸಿಯಾನ, ನ್ಯೂಜೆರ್ಸಿ, ನ್ಯೂಯಾರ್ಕ್ ಮೊದಲಾದ ರಾಜ್ಯಗಳು ತತ್ತರಿಸಿವೆ. ಮಳೆಯಿಂದಾಗಿ ಬಹಳಷ್ಟು ಕಡೆ ಪ್ರವಾಹಗಳು ಉಂಟಾಗಿವೆ.
ನ್ಯೂ ಯಾರ್ಕ್ ನಗರದಲ್ಲಿ ರಸ್ತೆಗಳಲ್ಲಿ ನೀರು ನಿಂತು ನದಿಯಂತಹ ದೃಶ್ಯ ಇತ್ತು. ‘ನೀರು ಎಷ್ಟು ಆಳ ಇದೆ ಎಂದು ಗೊತ್ತೇ ಆಗುವುದಿಲ್ಲ. ಇದು ತುಂಬಾ ಅಪಾಯಕಾರಿ’ ಎಂದು ನ್ಯೂ ಯಾರ್ಕ್ನ ಹವಾಮಾನ ಸಂಸ್ಥೆ ನ್ಯಾಷನಲ್ ವೆದರ್ ಸರ್ವಿಸ್ ಟ್ವೀಟ್ ಮಾಡಿತ್ತು. ಈ ಒಂದು ಟ್ವೀಟ್ ನ್ಯೂ ಯಾರ್ಕ್ನಲ್ಲಿ ಪ್ರವಾಹ ಪರಿಸ್ಥಿತಿ ಎಷ್ಟು ತೀವ್ರವಾಗಿದೆ ಎಂಬುದದನ್ನು ಸೂಚಿಸುತ್ತದೆ.
ನಿಮ್ಮ ಕಾಮೆಂಟ್ ಬರೆಯಿರಿ