ಝೋರಾಮ್ಸ್ ಪೀಪಲ್ ಮೂವ್ಮೆಂಟ್ (ZPM) ಮಿಜೊರಾಂ ವಿಧಾನಸಭಾ ಚುನಾವಣೆಯಲ್ಲಿ ೪೦ರಲ್ಲಿ 27 ಸ್ಥಾನಗಳನ್ನು ಗೆಲ್ಲುವ ಮೂಲಕ ಅಧಿಕಾರದ ಚುಕ್ಕಾಣಿ ಹಿಡಿಯಲು ಸಜ್ಜಾಗಿದೆ. ಝೋರಾಮ್ಸ್ ಪೀಪಲ್ ಮೂವ್ಮೆಂಟ್ (ZPM ಪ್ರಸ್ತುತ ಅಧಿಕಾರದಲ್ಲಿದ್ದ ಮಿಜೋ ನ್ಯಾಷನಲ್ ಫ್ರಂಟ್ ಅನ್ನು ಸೋಲಿಸಿದೆ. ಅದು 10 ಸ್ಥಾನಗಳನ್ನು ಗೆಲ್ಲುವಲ್ಲಿ ಮಾತ್ರ ಯಶಸ್ವಿಯಾಗಿದೆ. ನಂತರ ಭಾರತೀಯ ಜನತಾ ಪಕ್ಷ (ಬಿಜೆಪಿ) ಎರಡು ಸ್ಥಾನಗಳನ್ನು ಗೆದ್ದಿತು ಮತ್ತು ಕಾಂಗ್ರೆಸ್ ಒಂದು ಸ್ಥಾನವನ್ನು ಗೆದ್ದಿದೆ.
ಹೊಸದಾಗಿ ಚುನಾಯಿತ ಶಾಸಕರು ಮತ್ತು ಪಕ್ಷದ ಹಿರಿಯ ನಾಯಕರ ಸಮಾಲೋಚನಾ ಸಭೆ ನಡೆಸಿದ ನಂತರ ಝೋರಾಮ್ಸ್ ಪೀಪಲ್ ಮೂವ್ಮೆಂಟ್ (ZPM) ರಾಜ್ಯದಲ್ಲಿ ಸರ್ಕಾರ ರಚಿಸಲು ಹಕ್ಕು ಸಾಧಿಸಲಿದೆ. ZPM ನ ಮುಖ್ಯಮಂತ್ರಿ ಅಭ್ಯರ್ಥಿ ಲಾಲ್ದುಹೋಮ ಅವರು ಹೊಸದಾಗಿ ಆಯ್ಕೆಯಾದ ಶಾಸಕರನ್ನು ಭೇಟಿ ಮಾಡಲು ಸೋಮವಾರ ಐಜ್ವಾಲ್‌ಗೆ ಪ್ರಯಾಣ ಬೆಳೆಸಿದ್ದಾರೆ.
23 ಸ್ಥಾನಗಳಲ್ಲಿ ಸ್ಪರ್ಧಿಸಿದ್ದ ಬಿಜೆಪಿ ಕೇವಲ ಎರಡು ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿದೆ ಹಾಗೂ ೪೦ ಸ್ಥಾನಗಳಲ್ಲಿ ಸ್ಪರ್ಧಿಸಿದ್ದ ಕಾಂಗ್ರೆಸ್ ಕೇವಲ ಒಂದು ಸ್ಥಾನವನ್ನು ಮಾತ್ರ ಗೆದ್ದುಕೊಂಡಿತು. ಮೊದಲ ಬಾರಿಗೆ ನಾಲ್ಕು ಸ್ಥಾನಗಳಲ್ಲಿ ಸ್ಪರ್ಧಿಸಿದ್ದ ಆಮ್ ಆದ್ಮಿ ಪಕ್ಷ (ಎಎಪಿ) ಒಂದೂ ಸ್ಥಾನಗಳಿಸಲಿಲ್ಲ. ಮಿಜೋ ನ್ಯಾಷನಲ್ ಫ್ರಂಟ್ (MNF) 2018 ರಲ್ಲಿ, 40 ಸದಸ್ಯರ ಸದನದಲ್ಲಿ ಪಕ್ಷವು 26 ಸ್ಥಾನಗಳನ್ನು ಗೆದ್ದಿತ್ತು ಆದರೆ ಈ ಬಾರಿ ಅದು ಕೇವಲ 10 ಸ್ಥಾನಗಳನ್ನು ಮಾತ್ರ ಗೆದ್ದಿದೆ.
ಈ ಹಿಂದೆ ಮಾಜಿ ಪ್ರಧಾನಿ ಇಂದಿರಾ ಗಾಂಧಿ ಅವರ ಭದ್ರತೆಯ ಉಸ್ತುವಾರಿಯಾಗಿ ಕಾರ್ಯನಿರ್ವಹಿಸಿದ್ದ ಮಾಜಿ ಐಪಿಎಸ್ ಅಧಿಕಾರಿ ಲಾಲ್ದುಹೋಮಾ ಅವರು ಜೋರಾಮ್ ಪೀಪಲ್ಸ್ ಮೂವ್ಮೆಂಟ್(ZPM)ನ ಮುಖ್ಯಮಂತ್ರಿ ಅಭ್ಯರ್ಥಿಯಾಗಿದ್ದು, ಭರ್ಜರಿ ಗೆಲುವಿನೊಂದಿಗೆ ಮುಖ್ಯಮಂತ್ರಿಯಾಗಲು ಸಜ್ಜಾಗಿದ್ದಾರೆ.
2019 ರಲ್ಲಿ ರಾಜಕೀಯ ಪಕ್ಷವಾಗಿ ನೋಂದಾಯಿಸಲ್ಪಟ್ಟ ಝೋರಾಮ್ಸ್ ಪೀಪಲ್ ಮೂವ್ಮೆಂಟ್ (ZPM) ಸೋಮವಾರ ಮಿಜೋರಾಂ ವಿಧಾನಸಭೆ ಚುನಾವಣೆಯಲ್ಲಿ ಸ್ಪಷ್ಟ ಬಹುಮತ ಪಡೆದುಕೊಂಡಿದೆ. 40 ಸ್ಥಾನಗಳ ಪೈಕಿ 27 ಸ್ಥಾನಗಳನ್ನು ಗೆದ್ದುಕೊಂಡಿದೆ ಎಂದು ಚುನಾವಣಾ ಆಯೋಗ(EC) ತಿಳಿಸಿದೆ.
73 ವರ್ಷದ ಝೋರಾಮ್ಸ್ ಪೀಪಲ್ ಮೂವ್ಮೆಂಟ್ (ZPM) ಮುಖ್ಯಸ್ಥ ಲಾಲ್ದುಹೋಮಾ ಅವರು 1984 ರಲ್ಲಿ ಕಾಂಗ್ರೆಸ್ ಟಿಕೆಟ್‌ನಲ್ಲಿ ಮಿಜೋರಾಂ ವಿಧಾನಸಭಾ ಚುನಾವಣೆಯಲ್ಲಿ ಮೊದಲು ಸ್ಪರ್ಧಿಸಿದರು ಆದರೆ ಪೀಪಲ್ಸ್ ಕಾನ್ಫರೆನ್ಸ್ ಪಕ್ಷದ ಅಭ್ಯರ್ಥಿ ಲಾಲ್ಮಿಂಗ್ತಂಗಾ ವಿರುದ್ಧ 846 ಮತಗಳ ಅಂತರದಿಂದ ಸೋತರು.
ಲಾಲ್ದುಹೋಮಾ ಅವರು ಎಮ್‌ಎನ್‌ಎಫ್ ಅಭ್ಯರ್ಥಿ ಜೆ ಮಲ್ಸಾವ್ಮ್‌ಜುವಾಲಾ ವಂಚೌಂಗ್ ಅವರ ವಿರುದ್ಧ 2,982 ಮತಗಳಿಂದ ಗೆಲುವು ಸಾಧಿಸಿದ್ದಾರೆ.
ಮೂರು ದಶಕಗಳಿಂದ, ಈಶಾನ್ಯ ರಾಜ್ಯದಲ್ಲಿ ಮುಖ್ಯಮಂತ್ರಿ ಹುದ್ದೆಯು ಇಬ್ಬರು ಹಿರಿಯ ರಾಜಕಾರಣಿಗಳಾದ ಕಾಂಗ್ರೆಸ್‌ನ ಲಾಲ್ ಥನ್ಹಾವ್ಲಾ ಮತ್ತು ಎಂಎನ್‌ಎಫ್‌ನ ಜೋರಮ್‌ತಂಗಾ ನಡುವೆ ಹಂಚಿಕೆಯಾಗಿದೆ. ಈಗ ಇವರು ರಾಜ್ಯ ರಾಜಕಾರಣದಲ್ಲಿ ಮತ್ತೊಂದು ಶಕ್ತಿಯಾಗಿ ಹೊರಹೊಮ್ಮಿದ್ದಾರೆ. ಕಾಂಗ್ರೆಸ್ ಬಹುತೇಕ ನೆಲಕಚ್ಚಿದೆ.
ಲಾಲ್ದುಹೋಮಾ ನಡೆದು ಬಂದ ದಾರಿ…
ಲಾಲ್ದುಹೋಮಾ ಅವರು 1984 ರಲ್ಲಿ ಕಾಂಗ್ರೆಸ್ ನಿಂದ ಮಿಜೋರಾಂ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಿ ಸೋಲು ಅನುಭವಿಸಿದ್ದರು. ನಂತರ ಅದೇ ವರ್ಷ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿ ಅವಿರೋಧವಾಗಿ ಆಯ್ಕೆಯಾಗಿದ್ದರು.
ಆದರೆ 1986ರಲ್ಲಿ ಆಗಿನ ಮುಖ್ಯಮಂತ್ರಿ ಲಾಲ್ ಥನ್ಹಾವ್ಲಾ ಮತ್ತು ಕೆಲವು ಕ್ಯಾಬಿನೆಟ್ ಮಂತ್ರಿಗಳ ವಿರುದ್ಧ ಪಿತೂರಿ ನಡೆಸಿದ ಆರೋಪದ ನಂತರ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ಹಾಗೂ ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡಬೇಕಾಯಿತು.
1988 ರಲ್ಲಿ ಕಾಂಗ್ರೆಸ್ ತೊರೆದ ಲಾಲ್ದುಹೋಮಾ ಅವರು ಪಕ್ಷಾಂತರ ವಿರೋಧಿ ಕಾನೂನಿನ ಅಡಿಯಲ್ಲಿ ಅನರ್ಹಗೊಂಡಿದ್ದರು. ಈ ಮೂಲಕ ಪಕ್ಷಾಂತರ-ವಿರೋಧಿ ಕಾನೂನಿನಡಿಯಲ್ಲಿ ಅನರ್ಹಗೊಂಡ ಮೊದಲ ಸಂಸದರಾದರು. ನಂತರ ಜೋರಾಮ್ ನ್ಯಾಶನಲಿಸ್ಟ್ ಪಾರ್ಟಿ ಸ್ಥಾಪಿಸಿದ 73 ವರ್ಷದ ಲಾಲ್ದುಹೋಮಾ ಅವರು ಈಗ ಮಿಜೋರಾಂ ಮುಖ್ಯಮಂತ್ರಿಯಾಗಲು ಸಜ್ಜಾಗಿದ್ದಾರೆ.
ಹಿಂದಿನ ಭೂಗತ ಎಂಎನ್ಎಫ್ ಮುಖ್ಯಸ್ಥ ಲಾಲ್ಡೆಂಗಾ ಅವರ ನಿಕಟ ಸಹಾಯಕರಾಗಿದ್ದರು. ಲಾಲ್ಡೆಂಗಾ ಅವರು 1998 ಮತ್ತು 2003 ರಲ್ಲಿ ಪಕ್ಷವನ್ನು ಗೆಲುವಿನತ್ತ ಮುನ್ನಡೆಸಿದರು ಮತ್ತು ರಾಜ್ಯದ ಮುಖ್ಯಮಂತ್ರಿಯಾಗಿದ್ದರು. 2008ರ ಚುನಾವಣೆಯಲ್ಲಿ ಚಂಫೈ ಉತ್ತರ ಮತ್ತು ಚಂಪೈ ದಕ್ಷಿಣದ ಎರಡು ಕ್ಷೇತ್ರಗಳಲ್ಲಿ ಸ್ಪರ್ಧಿಸಿದ್ದ ಝೋರಂತಂಗ ಕಾಂಗ್ರೆಸ್ ಅಭ್ಯರ್ಥಿಗಳಿಗೆ ಸೋತಿದ್ದರು.
ಮುಂದಿನ ಮಿಜೋರಾಂ ಸರ್ಕಾರವು ಕೇಂದ್ರದೊಂದಿಗೆ ಉತ್ತಮ ಸಂಬಂಧವನ್ನು ಉಳಿಸಿಕೊಳ್ಳುತ್ತದೆ ಆದರೆ ಅವರ ಪಕ್ಷವು ರಾಷ್ಟ್ರೀಯ ಮಟ್ಟದಲ್ಲಿ ಯಾವುದೇ ರಾಜಕೀಯ ಮೈತ್ರಿಕೂಟವನ್ನು ಸೇರುವುದಿಲ್ಲ ಎಂದು ZPM ನ ಲಾಲ್ದುಹೋಮ ಸೋಮವಾರ ಹೇಳಿದ್ದಾರೆ.
ನಿಮ್ಮ ಕಾಮೆಂಟ್ ಬರೆಯಿರಿ