ಹಾರುತ್ತಿದ್ದ ಡ್ರೋನ್ ಹಾರಿ ಹಿಡಿದ ಮೊಸಳೆ; ಜಗಿಯುವಾಗ ಡ್ರೋನ್‌ ಚೂರಾಗಿ ಹೊಗೆ…ಈ ವಿಡಿಯೋ ನೋಡಿ..!

ಪ್ರಾಣಿಗಳನ್ನು ಹತ್ತಿರದಿಂದ ಶೂಟ್ ಮಾಡಲು ಡ್ರೋನ್ ಅನ್ನು ಹೆಚ್ಚಾಗಿ ಬಳಸಲಾಗುತ್ತದೆ. ಕೆಲವೊಮ್ಮೆ ಪ್ರಾಣಿ ಎಷ್ಟು ಅಪಾಯಕಾರಿ ಎಂಬುದನ್ನು ತೋರಿಸುವ ವಿಡಿಯೋ ವೈರಲ್ ಆಗಿದೆ.

ಅಲಿಗೇಟರ್ ಮೊಸಳೆಯ ಸೆರೆ ಹಿಡಿಯಲು ಡ್ರೋನ್ ಮೂಲಕ ಪ್ಲೇ ಮಾಡುತ್ತಿರುವಾಗ, ಮೊಸಳೆ ಗಾಳಿಯಲ್ಲಿ ಹಾರಿ ಡ್ರೋನ್ ಅನ್ನೇ ಹಿಡಿಯುತ್ತದೆ. ಯಾವುದೇ ಕೀಟ ಎಂದು ಭಾವಿಸಿದ ಮೊಸಳೆ ಡ್ರೋನ್‌ ಅನ್ನು ಜಗಿಯುತ್ತಿತ್ತು. ಪರಿಣಾಮ, ಡ್ರೋನ್ ಸಿಡಿದು ಹೊಗೆ ಬರಲಾರಂಭಿಸಿತ್ತು.ಈ ವಿಡಿಯೋ ವೈರಲ್ ಆಗಿದೆ.
ಫ್ಲೋರಿಡಾದಲ್ಲಿ ಈ ಘಟನೆ ನಡೆದಿದೆ. ಡ್ರೋನ್ ಹಿಡಿದ ಮೊಸಳೆ ಅದನ್ನು ಬಾಯಿಯಲ್ಲಿ ಜಗಿಯುತ್ತಿದ್ದಂತೆ ಹೊಗೆ ಬರಲಾರಂಭಿಸಿತು. ಈ ದೃಶ್ಯಗಳನ್ನು ಕ್ಯಾಮರಾದಲ್ಲಿ ಸೆರೆಹಿಡಿಯಲಾಗಿದ್ದು, ವಿಡಿಯೋವನ್ನು ಟ್ವಿಟರ್‌ನಲ್ಲಿ ಹಂಚಿಕೊಳ್ಳಲಾಗಿದೆ. ಮೊಸಳೆ ಗಾಳಿಯಲ್ಲಿ ಹಾರಿ ಡ್ರೋನ್ ಹಿಡಿಯುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹದಾಡಿದೆ.
ಕ್ರಿಸ್ ಆಂಡರ್ಸನ್, ಕ್ಯಾಲಿಫೋರ್ನಿಯಾದ ಡ್ರೋನ್ ಕಂಪನಿ 3RD ಯ ಸ್ಥಾಪಕ ಮತ್ತು ಮಾಜಿ ಸಿಇಒ, ಈ ವಿಡಿಯೋವನ್ನು ಟ್ವಿಟರ್ ನಲ್ಲಿ ಹಂಚಿಕೊಂಡಿದ್ದಾರೆ. ಈ ವಿಡಿಯೋ ಹಲವು ರೀಟ್ವೀಟ್‌ಗಳನ್ನು ಸ್ವೀಕರಿಸಿದೆ. ಹಲವರು ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದ್ದಾರೆ.

5 / 5. 4

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement