ಕಾರವಾರ : ಬಾರೆ ರಸ್ತೆಯಲ್ಲಿ ವಾಹನದ ಪಕ್ಕವೇ ಕಾಣಿಸಿಕೊಂಡ ಹುಲಿ : ಜನರತ್ತ ನೋಡಿ ಘರ್ಜನೆ | ವೀಕ್ಷಿಸಿ

ಕಾರವಾರ: ಉತ್ತರ ಕನ್ನಡ ಜಿಲ್ಲೆಯ ಕಾರವಾರ ತಾಲೂಕಿನ ಮಲ್ಲಾಪುರ-ಕೈಗಾ-ಬಾರೆ-ಯಲ್ಲಾಪುರ ರಸ್ತೆಯಲ್ಲಿ ಹುಲಿಯೊಂದು ಕಾರಿನ ಪಕ್ಕದಲ್ಲಿಯೇ ಕಾಣಿಸಿಕೊಂಡಿದ್ದು, ಇದರ ದೃಶ್ಯ ಕ್ಯಾಮರಾದಲ್ಲಿ ಸೆರೆಯಾಗಿದೆ.
ಕೈಗಾ ಎನ್‌ಪಿಸಿಐಎಲ್‌ ಉದ್ಯೋಗಿ ಚೇತನ ತೇಲ್ಕರ ಎಂಬವರು ಹುಲಿ ಕಾಣಿಸಿಕೊಂಡಿದ್ದನ್ನು ವೀಡಿಯೊ ಚಿತ್ರೀಕರಣ ಮಾಡಿದ್ದಾರೆ. ಬೃಹತ್‌ ಗಾತ್ರದ ಹುಲಿ ರಸ್ತೆ ಬದಿಯಲ್ಲೇ ನಿಂತು ಕಾರಿನಲ್ಲಿದ್ದವರನ್ನು ನೋಡಿ ಘರ್ಜಿಸುವುದನ್ನು ವೀಡಿಯೊದಲ್ಲಿ ನೋಡಬಹುದಾಗಿದೆ. ಕಾರನ್ನು ಹಿಂಬಾಲಿಸಿದಂತೆ ಮಾಡಿದ ಹುಲಿ ನಂತರ ಕೆಲವೇ ಕ್ಷಣದಲ್ಲಿ ಕಾಡಿನಲ್ಲಿ ಮಾಯವಾಗಿದೆ.

ಕಾಳಿ ಹುಲಿ ಸಂರಕ್ಷಿತ ಅಭಯಾರಣ್ಯದ ಬಫರ್‌ ವಲಯ ಇದಾಗಿದೆ. ಇಲ್ಲಿ ಸಾಕಷ್ಟು ಸಂಖ್ಯೆಯಲ್ಲಿ ಹುಲಿಗಳಿವೆ ಎಂದು ಹೇಳಲಾಗಿದೆ. ಈ ಹಿಂದೆಯೂ ಇದೇ ರಸ್ತೆಯಲ್ಲಿ ಹುಲಿಯೊಂದು ಕಾಣಿಸಿಕೊಂಡಿತ್ತು. ಈ ಮಾರ್ಗವು ಕೈಗಾ ಅಣು ವಿದ್ಯುತ್‌ ಸ್ಥಾವರದಿಂದ ಯಲ್ಲಾಪುರಕ್ಕೆ ತಲುಪಬಹುದಾದ ದಟ್ಟ ಕಾಡಿನ ಮಧ್ಯದ ರಸ್ತೆಯಾಗಿದೆ.

ಕೊಡಸಳ್ಳಿ ಅಣೆಕಟ್ಟಿನ ಹಿನ್ನೀರಿನ ಪ್ರದೇಶದಲ್ಲಿ ಓಡಾಡುವ ಹುಲಿಗಳು ವರ್ಷಕ್ಕೆ ಒಂದೆರಡು ಸಲ ಈ ಭಾಗದಲ್ಲಿ ಕಾಣಿಸಿಕೊಳ್ಳುತ್ತವೆ ಎಂದು ಸ್ಥಳೀಯರು ಮಾಹಿತಿ ನೀಡಿದ್ದಾರೆ.ಕೈಗಾ ಅಣು ವಿದ್ಯುತ್‌ ಸ್ಥಾವರಕ್ಕೆ ತೆರಳುವ ಉದ್ಯೋಗಿಗಳು ಹಾಗೂ ಈ ಭಾಗದಿಂದ ಯಲ್ಲಾಪರಕ್ಕೆ ಹೋಗುವವರು ಇದೇ ಮಾರ್ಗದಲ್ಲಿ ಸಾಗುತ್ತಾರೆ. ಅವರಿಗೆ ಆಗಾಗ್ಗೆ ಹುಲಿ- ಚಿರತೆಗಳು ವಾಹನ ಸವಾರರಿಗೆ ಕಾಣಿಸಕೊಳ್ಳುತ್ತವೆ.

ಪ್ರಮುಖ ಸುದ್ದಿ :-   ಹುಬ್ಬಳ್ಳಿ : ಅಂಜಲಿ ಹತ್ಯೆ ಆರೋಪಿ ಬಂಧನ ; ಈತನ ಬಂಧನವಾಗಿದ್ದೇ ರೋಚಕ

5 / 5. 4

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement