ಶಿರಸಿ, ಕುಮಟಾ ತಾಲೂಕಿನ ಪಶ್ಚಿಮ ಘಟ್ಟದ ಭಾಗದಲ್ಲಿ ಭೂಕಂಪನದ ಅನುಭವ

ಕಾರವಾರ : ಉತ್ತರ ಕನ್ನಡ (Uttar Kannada) ಜಿಲ್ಲೆಯಲ್ಲಿ ಕೆಲವಡೆ ಭೂ ಕಂಪನದ ಅನುಭವವಾಗಿದೆ ಎಂದು ವರದಿಯಾಗಿದೆ. ಜಿಲ್ಲೆಯ ಶಿರಸಿ ಹಾಗೂ ಕುಮಟಾ ತಾಲೂಕಿನ ದೇವಿಮನೆ ಘಟ್ಟ ಪ್ರದೇಶದ ಸುತ್ತಮುತ್ತ ಭೂಕಂಪನದ ಅನುಭವವಾಗಿದೆ ಎಂದು ಹೇಳಲಾಗಿದೆ.
ಮೂರ್ನಾಲ್ಕು ಸೆಕೆಂಡುಗಳ ಕಾಲ​ ಭೂಮಿ ಕಂಪಿಸಿದ ಅನುಭವಾಗಿದೆ ಎಂದು ಹೇಳಲಾಗಿದೆ.
ಶಿರಸಿ (Sirasi) ತಾಲೂಕಿನ ರಾಗಿಹೊಸಳ್ಳಿ, ಕಸಗೆ, ಬಂಡಲದಲ್ಲಿ ಹಾಗೂ ಕುಮಟಾ (Kumta) ಭಾಗದ ಘಟ್ಟ ಪ್ರದೇಶದಲ್ಲಿ ಮೂರು ಸೆಕೆಂಡ್‌ಗೂ ಭೂಕಂಪನದ (Earthquakes) ಅನುಭವವಾಗಿದೆ. ಇದರಿಂದ ಆ ಪ್ರದೇಶದ ಜನ ಕಂಗಾಲಾಗಿದ್ದಾರೆ.
ಈ ಭಾಗದಲ್ಲಿ ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ಸಹ ನಡೆಯುತ್ತಿದ್ದು, ಗುಡ್ಡ ಕೊರೆಯುವಾಗ ಕಲ್ಲುಗಳನ್ನು ಸಿಡಿಸಿರಬಹುದು ಎಂದು ಆರಂಭದಲ್ಲಿ ಭಾವಿಸಲಾಗಿತ್ತು. ಆದರೆ ಹಿಂದೂ ಮಹಾಸಾಗರದಲ್ಲಿ ಸುಮಾರು 10 ಕಿ.ಮೀ ಆಳದ ರಿಡ್ಜ್ ಮಧ್ಯದಲ್ಲಿ ಸಣ್ಣ ಮಟ್ಟದ ಭೂಕಂಪನವಾಗಿದ್ದು, ಇದರಿಂದಾಗಿ ಪಶ್ಚಿಮ ಘಟ್ಟ ಭಾಗದಲ್ಲೂ ಭೂಮಿ ಕಂಪಿಸಿರುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ. ಆದರೆ ಈ ಬಗ್ಗೆ ಅಧಿಕಾರಿಗಳ ವಲಯದಿಂದ ಯಾವುದೇ ಅಧಿಕೃತ ದೃಢೀಕರಣ ಇಲ್ಲ.

ಪ್ರಮುಖ ಸುದ್ದಿ :-   ಕಳಪೆ ರಸ್ತೆಗಳಿಂದ 'ಯಾತನೆʼ ; ಬಿಬಿಎಂಪಿಗೆ ಬೆಂಗಳೂರು ವ್ಯಕ್ತಿಯಿಂದ ನೋಟಿಸ್ : 50 ಲಕ್ಷ ರೂ. ಪರಿಹಾರಕ್ಕೆ ಆಗ್ರಹ

5 / 5. 2

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement