ಬ್ರಹ್ಮಾವರ: ದೋಣಿ ಅವಘಡ – ಮೂವರು ಸಾವು, ಮತ್ತೋರ್ವ ನಾಪತ್ತೆ

ಬ್ರಹ್ಮಾವರ :  ಇಲ್ಲಿನ ಕುಕ್ಕುಡೆಕುದ್ರು ಎಂಬಲ್ಲಿ ಸ್ವರ್ಣಾ ನದಿಯಲ್ಲಿ ನಾಲ್ವರು ಯುವಕರು ನೀರು ಪಾಲಾದ ದುರ್ಘಟನೆ ಭಾನುವಾರ ಸಂಜೆ ಸಂಭವಿಸಿದೆ ಎಂದು ವರದಿಯಾಗಿದೆ.
ಹೂಡೆ ಗ್ರಾಮದ ಇಬ್ಬರು ಯುವಕರು ಮತ್ತು ಅವರ ಸಂಬಂಧಿಕರಾದ ಶೃಂಗೇರಿಯ ಇಬ್ಬರು ಯುವಕರು ನೀರು ಪಾಲಾದವರು ಎನ್ನಲಾಗಿದೆ. ಶನಿವಾರ ರಂಜಾನ್ ಹಬ್ಬಕ್ಕೆ ಆಗಮಿಸಿದವರು ಚಿಪ್ಪು ಮೀನು, ಮರುವಾಯಿ ಹಿಡಿಯಲು ಒಟ್ಟಾಗಿ ನದಿಗೆ ತೆರಳಿದ್ದರು ಎಂದು ಹೇಳಲಾಗಿದೆ.
ಹೂಡೆಯಿಂದ ದೋಣಿಯಲ್ಲಿ 7 ಮಂದಿ ತೆರಳಿ ಕುಕ್ಕುಡೆ ಕುದ್ರು ಬಳಿ ಆಗಮಿಸಿದ್ದರು. ಆದರೆ ಅಲ್ಲಿ ದೋಣಿ ಮಗುಚಿದೆ. ದರಲ್ಲಿ ಮೂವರು ಈಜಿ ದಡ ಸೇರಿದ್ದಾರೆ. ಉಳಿದವರು ನೀರಿನ ಆಳ ತಿಳಿಯದೆ ಮುಳುಗಿದ್ದಾರೆ. ಒಬ್ಬರನ್ನು ರಕ್ಷಿಸಲು ಇನ್ನೊಬ್ಬರು ತೆರಳಿ ಒಟ್ಟಿಗೆ ನಾಲ್ವರು ನೀರು ಪಾಲಾಗಿದ್ದಾರೆ ಎನ್ನಲಾಗಿದೆ. ಮೂವರ ಮೃತದೇಹ ಪತ್ತೆಯಾಗಿದ್ದು, ಇನ್ನೋರ್ವನಿಗಾಗಿ ಹುಡುಕಾಟ ನಡೆಸಲಾಗುತ್ತಿದೆ.
ರಂಜಾನ್ ರಜೆಯ ಹಿನ್ನೆಲೆಯಲ್ಲಿ ಹೂಡೆಯಲ್ಲಿರುವ ತಮ್ಮ ಸಂಬಂಧಿಕರ ಮನೆಗೆ ತೀರ್ಥಳ್ಳಿಯ ಯುವಕರು ಆಗಮಿಸಿದ್ದರು. ಸಂಬಂಧಿಕರ ಮನೆಯಿಂದ ಒಟ್ಟು ಏಳು ಮಂದಿ ವಾಯು ವಿಹಾರಕ್ಕೆಂದು ಹೂಡೆಯ ಗುಡ್ಡೇರಿ ಕಂಬಳದಿಂದ ಕುಕ್ಕುಡೆ ಕುದ್ರುವಿಗೆ ದೋಣಿಯಲ್ಲಿ ತೆರಳುತ್ತಿದ್ದರು ಎನ್ನಲಾಗಿದೆ. ಈ ವೇಳೆ ದೋಣಿ ಮಗುಚಿ ಬಿದ್ದ ಪರಿಣಾಮ ಏಳು ಮಂದಿ ನೀರಿಗೆ ಬಿದ್ದರು. ಇದರಲ್ಲಿ ಮೂವರು ಈಜಿ ಕೊಂಡು ಕುದ್ರುವಿಗೆ ಸೇರಿಕೊಂಡಿದ್ದಾರೆನ್ನಲಾಗಿದೆ. ಉಳಿದ ನಾಲ್ವರು ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾರೆ ಎನ್ನಲಾಗಿದೆ. ಮೂರು ಮಂದಿಯ ಮೃತ ದೇಹಗಳು ಪತ್ತೆಯಾಗಿದ್ದು, ಇನ್ನೋರ್ವನಿಗಾಗಿ ಹುಡುಕಾಟ ಮುಂದುವರೆದಿದೆ.
ಭಾನುವಾರ ಸಂಜೆ ನದಿಯಲ್ಲಿ ನೀರಿನ ಹರಿವೂ ಹೆಚ್ಚಿತ್ತು, ಜೋರಾದ ಗಾಳಿ ಬೀಸಿದ್ದು ಅವಘಡಕ್ಕೆ ಕಾರಣವಾಗಿದೆ ಎಂದು ಹೇಳಲಾಗಿದೆ. ಯುವಕರ ಬೊಬ್ಬೆ ಕೇಳಿ ಸ್ಥಳೀಯರು ದೌಡಾಯಿಸಿದ್ದಾರೆ. ಬ್ರಹ್ಮಾವರ ಪೊಲೀಸರು ಘಟನಾ ಸ್ಥಳಕ್ಕೆ ಭೇಟಿ ನೀಡಿ ತನಿಖೆ ನಡೆಸುತ್ತಿದ್ದಾರೆ.

ಪ್ರಮುಖ ಸುದ್ದಿ :-   ಪ್ರಜ್ವಲ್ ರೇವಣ್ಣ ಪೆನ್‌ ಡ್ರೈವ್ ಪ್ರಕರಣದ ಹಿಂದೆ ಡಿಕೆ ಶಿವಕುಮಾರ ಕೈವಾಡ : ವಕೀಲ ದೇವರಾಜೇಗೌಡ ಗಂಭೀರ ಆರೋಪ

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement