ಕೊರೋನಾ: ಭಾರತ, ಅಮೆರಿಕ ಸೇರಿ ೨೦ ದೇಶಗಳ ನಾಗರಿಕರಿಗೆ ಸೌದಿ ನಿರ್ಭಂಧ

ಕೊರೋನಾ ಸಾಂಕ್ರಾಮಿಕ ರೋಗವನ್ನು ತಡೆಗಟ್ಟುವ ನಿಟ್ಟಿನಲ್ಲಿ ಸೌದಿ ಅರೆಬಿಯಾ ಭಾರತ ಹಾಗೂ ಅಮೆರಿಕ ಸೇರಿದಂತೆ 20 ದೇಶಗಳ ನಾಗರಿಕರು ತನ್ನ ದೇಶಕ್ಕೆ ಆಗಮಿಸುವುದನ್ನು  ಮಂಗಳವಾರದಿಂದ ನಿಷೇಧಿಸಿದೆ.

advertisement
ಐಸಿಎಸ್ ಮಹೇಶ ಪಿಯು ಸೈನ್ಸ್ ಕಾಲೇಜು, ಧಾರವಾಡ
ಅಡ್ಮಿಶನ್ ಗಾಗಿ ಇಂದೇ ಕರೆ ಮಾಡಿ
9535127775 / 9901837775 / 6364528715 / 08362775155 / https://icsmpucollege.com/

ಈ “ತಾತ್ಕಾಲಿಕ ನಿಷೇಧ” ರಾಜತಾಂತ್ರಿಕರು, ಸೌದಿ ನಾಗರಿಕರು,  ವೈದ್ಯರು ಹಾಗೂ ವೈದ್ಯಕೀಯ ಸಿಬ್ಬಂದಿ ಮತ್ತು ಅವರ ಕುಟುಂಬಗಳಿಗೆ ಅನ್ವಯಿಸುವುದಿಲ್ಲ ಎಂದು ಎಎಫ್‌ಪಿ ವರದಿ ಮಾಡಿದೆ. ಆದರೆ ಇದು ಸೌದಿ ಅರೇಬಿಯಾದ ನೆರೆಯ ರಾಷ್ಟ್ರಗಳಾದ ಈಜಿಪ್ಟ್ ಮತ್ತು ಯುನೈಟೆಡ್ ಅರಬ್ ಎಮಿರೇಟ್ಸ್ ಅನ್ನು ಸಹ ಒಳಗೊಂಡಿದೆ. ಯುಎಸ್ ಮತ್ತು ಭಾರತದ ಹೊರತಾಗಿ ಈ ತಾತ್ಕಾಲಿಕ ನಿಷೇಧವು ಲೆಬನಾನ್, ಟರ್ಕಿ, ಐರ್ಲೆಂಡ್, ಇಟಲಿ, ಪೋರ್ಚುಗಲ್, ಸ್ವೀಡನ್ ಮತ್ತು ಸ್ವಿಟ್ಜರ್ಲೆಂಡ್ ಅನ್ನು ಸಹ ಒಳಗೊಂಡಿದೆ.  ಅರ್ಜೆಂಟೀನಾ, ಬ್ರೆಜಿಲ್, ಇಂಡೋನೇಷ್ಯಾ, ಪಾಕಿಸ್ತಾನ ಮತ್ತು ದಕ್ಷಿಣ ಆಫ್ರಿಕಾದ ಪ್ರಯಾಣಿಕರಿಗೆ ಅನ್ವಯಿಸುತ್ತದೆ.

ಇದು  ಹಿಂದಿನ 14 ದಿನಗಳಲ್ಲಿ ಈ 20 ನಿಷೇಧಿತ ದೇಶಗಳ ಮೂಲಕ ಹಾದುಹೋದ ಪ್ರಯಾಣಿಕರಿಗೂ  ಅನ್ವಯಿಸುತ್ತದೆ ಎಂದು ಸೌದಿ ಅರೇಬಿಯಾದ ಆಂತರಿಕ ಸಚಿವಾಲಯ ತಿಳಿಸಿದೆ.

ಯುಕೆಯಲ್ಲಿ ಹೊಸ ಮತ್ತು ಹೆಚ್ಚು ಹರಡುವ ಕರೋನಾ ವೈರಸ್ ಪತ್ತೆಯಾದ ನಂತರ ಡಿಸೆಂಬರ್‌ನಲ್ಲಿ ಇದೇ ರೀತಿಯ  ತಾತ್ಕಾಲಿಕ ನಿಷೇಧ ವಿಧಿಸಲಾಗಿತ್ತು. ನಂತರ ಈ ದೇಶ   ವಿಮಾನಯಾನಗಳನ್ನು ಪುನರಾರಂಭಿಸಿತ್ತು ಹಾಗೂ   ಜನವರಿ 3 ರಂದು ತನ್ನ ಬಂದರುಗಳನ್ನು ಮತ್ತೆ ತೆರೆಯಿತು.

ಓದಿರಿ :-   ಅಮೆರಿಕದಲ್ಲಿ ಕಾರಿನಲ್ಲಿ ಕುಳಿತಿದ್ದ ಭಾರತ ಮೂಲದ ವ್ಯಕ್ತಿಯ ಕೊಲೆ

ಪ್ರಸ್ತುತ, ಸೌದಿ ಅರೇಬಿಯಾದಲ್ಲಿ 3.68 ಲಕ್ಷ ಕೋವಿಡ್ -19 ಪ್ರಕರಣಗಳಿದ್ದು  6,383 ಸಾವುಗಗಳಾಗಿವೆ.

advertisement

ಕ್ಷಣ ಕ್ಷಣದ ಸುದ್ದಿಗಳು ಮತ್ತು ಮಾಹಿತಿಗಾಗಿ
ವಾಟ್ಸಾಪ್ ಗ್ರೂಪ್ ಸೇರಿ
ಫೇಸ್ ಬುಕ್ ಫಾಲೋ ಮಾಡಿ
ಗೂಗಲ್ ನ್ಯೂಸ್ ನಲ್ಲಿ ಸೇರಿ
ಟ್ವಿಟರ್ ನಲ್ಲಿ ಫಾಲೋ ಮಾಡಿ

ಮೇಲಿನ ಸುದ್ದಿಗೆ ರೇಟಿಂಗ್ ನೀಡಿ

/ 5. ಒಟ್ಟು ವೋಟುಗಳು

advertisement

ನಿಮ್ಮ ಕಾಮೆಂಟ್ ಬರೆಯಿರಿ