ಭಾರತದಲ್ಲಿ ೩ ಯುದ್ಧ ವಿಮಾನಗಳ ತಯಾರಿಕೆಗೆ ಅಮೆರಿಕ ಉತ್ಸುಕ

ದೆಹಲಿ: “ಮೇಕ್‌ ಇನ್‌ ಇಂಡಿಯಾʼ ಪ್ರಕ್ರಿಯೆಗೆ ಸಹಕರಿಸುವ ದಿಸೆಯಲ್ಲಿ ಅಮೆರಿಕನ್ನರು ಮೂರು ಯುಎಸ್‌ ಯುದ್ಧ ವಿಮಾನ (ಫೈಟರ್ ಪ್ಲೇನ್‌‌) ಭಾರತದಲ್ಲಿ ತಯಾರಿಸುವ ಸಾಧ್ಯತೆಯಿದೆ.

ಏರೋ ಇಂಡಿಯಾ ೨೦೨೧ ಮುನ್ನಾದಿನ ಅಮೆರಿಕ ಪ್ರಮುಖ ಎಫ್‌-೧೬ ನ ನೂತನ ಅವತರಣಿಕೆ  ಫೈಟರ್‌ ವಿಮಾನಗಳಾದ ಎಫ್-‌೧೮, ಎಫ್-‌೧೫ ಹಾಗೂ ಎಫ್-‌೨೧ ಫೈಟರ್ ವಿಮಾನಗಳನ್ನು ಭಾರತದಲ್ಲಿಯೇ ತಯಾರಿಸುವ ಕುರಿತು ಭಾರತೀಯ ವಾಯು ಸೇನೆಗೆ ಆಹ್ವಾನ ನೀಡಿದೆ.

ಅಮೆರಿಕದ ರಕ್ಷಣಾ ಉಸ್ತುವಾರಿ ಡಾನ್‌ ಹೆಫ್ಲಿನ್‌, ವಾಯುಸೇನೆಯ ಉಪಕಾರ್ಯದರ್ಶಿ ಕೆಲ್ಲಿ ಸೇಬೋಲ್ಟ್‌ ಹಾಗೂ ಯುಎಸ್ ವಾಯುಯಾನದ ಲೆಫ್ಟಿನೆಂಟ್‌ ಜನರಲ್‌ ಡೇವಿಡ್‌ ಕ್ರುಮ್‌ ಜಂಟಿ ಪತ್ರಿಕಾ ಗೋಷ್ಠಿಯಲ್ಲಿ ಈ ಕುರಿತು ಸಂದೇಶ ರವಾನಿಸಿದ್ದಾರೆ. ಭಾರತವು ಅಮೆರಿಕದ ಪ್ರಮುಖ ರಕ್ಷಣಾ ಪಾಲುದಾರ ರಾಷ್ಟ್ರವಾಗಿದ್ದು, ಉಭಯ ದೇಶಗಳಲ್ಲಿ ಯಾವುದೇ ಪಕ್ಷ ಅಧಿಕಾರದಲ್ಲಿದ್ದರೂ ಏಷಿಯಾ ಪೆಸಿಫಿಕ್‌ ಅನ್ನು ಬಲಿಷ್ಠಗೊಳಿಸುವ ದಿಸೆಯಲ್ಲಿ ಜಂಟಿ ಕಾರ್ಯನಿರ್ವಹಣೆ ಮುಂದುವರೆಯಲಿದೆ ಎಂಬ ಅಭಿಪ್ರಾಯ ಪತ್ರಿಕಾಗೋಷ್ಠಿಯಲ್ಲಿ ವ್ಯಕ್ತವಾಗಿದೆ.

 

 

 

 

 

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement