ಅಯೋಧ್ಯ ರಾಮಂದಿರ ಕಾಮಗಾರಿ ವೀಕ್ಷಣೆಗೆ ಅವಕಾಶವಿಲ್ಲ

ಅಯೋಧ್ಯ: ಸುರಕ್ಷತಾ ಕಾರಣಗಳಿಗಾಗಿ ಅಯೋಧ್ಯೆಯಲ್ಲಿ ನಿರ್ಮಾಣವಾಗುತ್ತಿರುವ ಶ್ರೀರಾಮ ಮಂದಿರದ ನಿರ್ಮಾಣ ಕಾರ್ಯವನ್ನು ವೀಕ್ಷಿಸಲು ರಾಮ ಭಕ್ತರಿಗೆ ಅವಕಾಶ ನೀಡುವುದಿಲ್ಲ ಎಂದು ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್‌ ಪ್ರಧಾನ ಕಾರ್ಯದರ್ಶಿ ಚಂಪತ್‌ ರಾಯ್‌ ಹೇಳಿದ್ದಾರೆ.

ರಾಮ ಮಂದಿರ ನಿರ್ಮಾಣ ಕಾರ್ಯದಲ್ಲಿ ದೊಡ್ಡ ಕ್ರೇನ್‌ಗಳು ಹಾಗೂ ದೊಡ್ಡ ಕಲ್ಲು ಪುಡಿ ಮಾಡುವ ಯಂತ್ರಗಳನ್ನು ಬಳಕೆ ಮಾಡಲಾಗುತ್ತಿದೆ. ಇದರಿಂದ ಮಂದಿರ ನಿರ್ಮಾಣ ಸ್ಥಳದಲ್ಲಿ ಅನಾಹುತಗಳು ಸಂಭವಿಸುವ ಸಾಧ್ಯತೆ ಹೆಚ್ಚಾಗಿರುವುದರಿಂದ ಯಾರಿಗೂ ಕಾಮಗಾರಿ ವೀಕ್ಷಿಸಲು ಅವಕಾಶ ನೀಡುವುದಿಲ್ಲ. ಕಾಲಕಾಲಕ್ಕೆ ಟ್ರಸ್ಟ್‌‌ ಕಾಮಗಾರಿ ಪ್ರಗತಿ ಕುರಿತು ಭಕ್ತರಿಗೆ ಮಾಹಿತಿ  ನೀಡಲಿದೆ.ಪ್ರಸ್ತುತ ಮಂದಿರದ ಅಡಿಪಾಯ ತೆಗೆಯುವ ಕಾರ್ಯ ಚಾಲ್ತಿಯಲ್ಲಿದ್ದು, ಎಪ್ರಿಲ್‌ ತಿಂಗಳಿನಿಂದ ಪಾಯ ತುಂಬುವ ಕಾರ್ಯ ಆರಂಭಗೊಳ್ಳಲಿದೆ. ಒಂದೂವರೆ ವರ್ಷದಲ್ಲಿ ಮಂದಿರದ ಮೊದಲ ಮಹಡಿ ಪೂರ್ಣಗೊಳ್ಳುವ ನಿರೀಕ್ಷೆಯಿದೆ ಎಂದು ಅವರು ತಿಳಿಸಿದ್ದಾರೆ.

0 / 5. 0

ನಿಮ್ಮ ಕಾಮೆಂಟ್ ಬರೆಯಿರಿ

advertisement