ಟೂಲ್‌ಕಿಟ್‌ ತನಿಖೆ: ಭಾರತದಿಂದ ಕೆನಡಾ ನೆರವು ಕೇಳುವ ಸಾಧ್ಯತೆ

ಕೃಷಿ ಕಾನೂನುಗಳ ವಿರುದ್ಧದ ಆಂದೋಲನವನ್ನು ಬೆಂಬಲಿಸುವವರಿಗೆ ಟೂಲ್‌ಕಿಟ್‌ ರೂಪಿಸಿದ ವ್ಯಕ್ತಿಗಳು ಮತ್ತು ಗುಂಪುಗಳ ತನಿಖೆಯಲ್ಲಿ ಭಾರತವು ಕೆನಡಾದ ನೆರವನ್ನು ಕೇಳುವ ಸಾಧ್ಯತೆಯಿದೆ.
ನವದೆಹಲಿಯಲ್ಲಿ ಗಣರಾಜ್ಯೋತ್ಸವದಂದು ಹಿಂಸಾಚಾರಕ್ಕೆ ಸಂಬಂಧಿಸಿದ ಕುರಿತು ಕೆನಡಾದಲ್ಲಿ ಕಾನೂನು ಜಾರಿ ಸಂಸ್ಥೆಗಳ ಸಹಕಾರ ನಮಗೆ ಬೇಕಾದಾಗ ನಾವು ಅದನ್ನು ಕೆನಡಾದ ಸರ್ಕಾರದಿಂದ ಪಡೆದುಕೊಳ್ಳುತ್ತೇವೆ ಎಂದು ಹೆಸರು ಹೇಳಲಿಚ್ಛಿಸದ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಟೂಲ್‌ಕಿಟ್ ಅನ್ನು ಸ್ವೀಡಿಷ್ ಸಾಮಾಜಿಕ ಕಾರ್ಯಕರ್ತೆ ಗ್ರೆಟಾ ಥನ್ಬರ್ಗ್ ಟ್ವೀಟ್ ಮಾಡಿದ್ದಾರೆ ಮತ್ತು ನಂತರ ಅದನ್ನು ಅಳಿಸಲಾಗಿದೆ. ಟೂಲ್‌ಕಿಟ್ ರೈತರ ಆಂದೋಲನವನ್ನು ಬೆಂಬಲಿಸುತ್ತದೆ ಮತ್ತು ಅಂತರರಾಷ್ಟ್ರೀಯ ಮಟ್ಟದಲ್ಲಿ ತನ್ನ ಪ್ರೊಫೈಲ್ ಹೆಚ್ಚಿಸುತ್ತದೆ. ಪೊಯೆಟಿಕ್ ಜಸ್ಟಿಸ್‌ ಫೌಂಡೇಶನ್‌ (ಪಿಜೆಎಫ್)‌ ಸಂಸ್ಥಾಪಕ ಮೋ ಧಾಲಿವಾಲ್‌ ಟೂಲ್‌ ಕಿಟ್‌ ರೂಪಿಸಿದ್ದಾರೆಂದು ಹೇಳಲಾಗುತ್ತಿದೆ.

ಪಿಜೆಎಫ್, ವಿಶ್ವ ಸಿಖ್ ಸಂಸ್ಥೆ ಅಥವಾ ಡಬ್ಲ್ಯುಎಸ್ಒ ಜೊತೆ ಸಮನ್ವಯದಿಂದ ಕೆಲಸ ಮಾಡಿದೆ, ಇದು ಹಲವಾರು ವರ್ಷಗಳಿಂದ ಭಾರತವನ್ನು ಟೀಕಿಸುತ್ತಿದೆ ಮತ್ತು ಕೆನಡಾದ ಎನ್ಸೈಕ್ಲೋಪೀಡಿಯಾದ ಪ್ರಕಾರ, ಪಿಜೆಎಫ್‌ “ಪ್ರತ್ಯೇಕ ಖಲಿಸ್ತಾನ್‌” ಗಾಗಿ ಆಗ್ರಹಿಸುತ್ತಿದೆ. ಟೂಲ್‌ಕಿಟ್‌ ಮೂಲಕ ದೇಶದ ಅಖಂಡತೆಗೆ ಭಂಗ ಉಂಟಾಗುತ್ತಿದೆ ಹಾಗೂ ರೈತರನ್ನು ಪ್ರಚೋದಿಸುತ್ತಿರುವುದನ್ನು ಮನಗಂಡ ಭಾರತ ಟೂಲ್‌ಕಿಟ್‌ ರಚನೆ ಮಾಡಿದ ವ್ಯಕ್ತಿಗಳ ತನಿಖೆಯಲ್ಲಿ ಕೆನಡಾದ ನೆರವು ಕೇಳಲು ಮುಂದಾಗಿದೆ.

ಮೇಲಿನ ಸುದ್ದಿಗೆ ರೇಟಿಂಗ್ ನೀಡಿ.

(1. ಚೆನ್ನಾಗಿಲ್ಲ. 2. ಸಾಧಾರಣ. 3. ಪರವಾಗಿಲ್ಲ. 4. ಉತ್ತಮ . 5. ಅತ್ಯುತ್ತಮ)

0 / 5. ಒಟ್ಟು ವೋಟುಗಳು 0

ನಿಮ್ಮ ಕಾಮೆಂಟ್ ಬರೆಯಿರಿ

ಕನ್ನಡಿ ನ್ಯೂಸ್ ನ ದಿನದ ಪ್ರಮುಖ ಸುದ್ದಿಗಳು ಮತ್ತು ಮಾಹಿತಿಗಾಗಿ
ವಾಟ್ಸಾಪ್ ಗ್ರೂಪ್ ಸೇರಿ
ಟೆಲಿಗ್ರಾಮ್ ಚಾನೆಲ್ ಸೇರಿ
ಫೇಸ್ ಬುಕ್ ಫಾಲೋ ಮಾಡಿ
ಗೂಗಲ್ ನ್ಯೂಸ್ ನಲ್ಲಿ ಸೇರಿ
ಟ್ವಿಟರ್ ನಲ್ಲಿ ಫಾಲೋ ಮಾಡಿ
advertisement