ಬಾರ್ಬಡಿಯನ್ ಪಾಪ್ ಗಾಯಕಿ ರಾಬಿನ್ ರಿಹಾನ್ನಾ ಫೆಂಟಿ ಅವರು ಭಾರತದಲ್ಲಿ ರೈತರ ಪ್ರತಿಭಟನೆಯ ಬಗ್ಗೆ ಮಾಡಿದ ಟ್ವೀಟ್ ಈಗ ಭಾರತದಲ್ಲಿ ಕೋಲಾಹಲಕ್ಕೆ ಕಾರಣವಾಗಿದ್ದರೂ ಭಾರತದ ಬಾರ್ಬ್‌ಡೋಸಿಗೆ ೧ ಲಕ್ಷ ಕೊವಿಡ್ ಡೋಸ್ ಪೂರೈಸಿದೆ.
ಬಾರ್ಬಡೋಸ್ ಪ್ರಧಾನಿ ಮಿಯಾ ಅಮೋರ್ ಮೊಟ್ಲಿ ಅವರು 1, 00,000 ಡೋಸ್ ಆಕ್ಸ್‌ಫರ್ಡ್-ಅಸ್ಟ್ರಾಜೆನೆಕಾ ಕೊರೊನಾ ವೈರಸ್ ಲಸಿಕೆಕೆ ಪೂರೈಕೆಗಾಗಿ ಪ್ರಧಾನಿ ನರೇಂದ್ರ ಮೋದಿಯವರಿಗೆ ಧನ್ಯವಾದ ಅರ್ಪಿಸಿದ್ದಾರೆ.
ಫೆಬ್ರವರಿ 4 ರಂದು ಪ್ರಧಾನಿ ಮೋದಿ ಅವರಿಗೆ ಪತ್ರ ಬರೆದಿರುವ ಮೊಟ್ಲಿ ಅವರು, ಕೋವಿಶೀಲ್ಡ್ ಲಸಿಕೆ ನೀಡಿದ್ದಕ್ಕಾಗಿ ನನ್ನ ಸರ್ಕಾರ ಮತ್ತು ಜನರ ಪರವಾಗಿ, ನಿಮಗೆ, ನಿಮ್ಮ ಸರ್ಕಾರ ಮತ್ತು ಭಾರತದ ಗಣರಾಜ್ಯದ ಜನರಿಗೆ ಕೃತಜ್ಞತೆ ಅರ್ಪಿಸುತ್ತೇನೆ ಎಂದು ಹೇಳಿದ್ದಾರೆ.
ಕೆರಿಬಿಯನ್ ರಾಷ್ಟ್ರಕ್ಕಾಗಿ ಭಾರತೀಯ ಲಸಿಕೆ ನೀಡುವಂತೆ ಬಾರ್ಬಡೋಸ್ ಪ್ರಧಾನಿ ಈ ಹಿಂದೆ ಪ್ರಧಾನಿ ಮೋದಿಗೆ ಪತ್ರ ಬರೆದಿದ್ದರು.
ಭಾರತವು ಕರೋನವೈರಸ್ ಲಸಿಕೆ ಕೇಳುವ ಸುಮಾರು 152 ದೇಶಗಳ ಪಟ್ಟಿ ಹೊಂದಿದೆ ಮತ್ತು ಮಾರ್ಚ್ ವೇಳೆಗೆ ಕನಿಷ್ಠ 60 ದೇಶಗಳಿಗೆ 16 ಮಿಲಿಯನ್ ಡೋಸ್‌ಗಳನ್ನು ಪೂರೈಸುವ ನಿರೀಕ್ಷೆಯಿದೆ.
ನಿಮ್ಮ ಕಾಮೆಂಟ್ ಬರೆಯಿರಿ