ಸೆನೆಟ್ ದೋಷಾರೋಪಣೆ ವಿಚಾರಣೆಗೆ ಟ್ರಂಪ್‌ ಹಾಜರಾಗಲ್ಲ

ವಾಷಿಂಗ್ಟನ್‌: ಅಮೆರಿಕದ ರಾಜಧಾನಿಯಲ್ಲಿ ನಡೆದ ಗಲಭೆಗೆ ಪ್ರಚೋದನೆ ನೀಡಿದ ಕುರಿತು ಅಮೆರಿಕದ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್‌ರನ್ನು ಸೆನೆಟ್ ದೋಷಾರೋಪಣೆ ವಿಚಾರಣೆಗೆ ಸಾಕ್ಷ್ಯ ನುಡಿಯುವಂತೆ ಕೋರಿದ್ದು, ಮಾಜಿ ಅಧ್ಯಕ್ಷರು ಯಾವುದೇ ಸಾಕ್ಷ್ಯ ಹೇಳುವುದಿಲ್ಲ ಎಂದು ಟ್ರಂಪ್‌ ಸಲಹೆಗಾರರು ತಿಳಿಸಿದ್ದಾರೆ.
ಟ್ರಂಪ್‌ರ ಸಾಕ್ಷ್ಯವನ್ನು ಒತ್ತಾಯಿಸಲು ಡೆಮೋಕ್ರಾಟ್‌ಗಳಿಗೆ ಅಧಿಕಾರವಿಲ್ಲದಿದ್ದರೂ, ಜನವರಿ 6 ರಂದು ನಡೆದ ಹಿಂಸಾತ್ಮಕ ಘಟನೆಗಳಿಗೆ ಟ್ರಂಪ್‌ರನ್ನು ಹೊಣೆಗಾರರನ್ನಾಗಿ ಮಾಡುವ ಒಟ್ಟಾರೆ ಪ್ರಯತ್ನದ ಒಂದು ಭಾಗವಾಗಿದೆ.
ಡೆಮೋಕ್ರಾಟ್‌ಗಳು ವಿನಂತಿ ಮಾಡಿದ ಕೆಲವೇ ಗಂಟೆಗಳ ನಂತರ, ಟ್ರಂಪ್‌ರ ಸಲಹೆಗಾರ ಜೇಸನ್ ಮಿಲ್ಲರ್ ಈ ವಿಚಾರಣೆಯನ್ನು “ಅಸಂವಿಧಾನಿಕ ಕ್ರಮ” ಎಂದು ತಳ್ಳಿಹಾಕಿದರು ಮತ್ತು ಮಾಜಿ ಅಧ್ಯಕ್ಷರು ಸಾಕ್ಷ್ಯ ನೀಡುವುದಿಲ್ಲ ಎಂದು ಹೇಳಿದರು.
ದೋಷಾರೋಪಣೆ ವಿಚಾರಣೆ ಫೆಬ್ರವರಿ 9 ರಿಂದ ಪ್ರಾರಂಭವಾಗುತ್ತದೆ. ಎರಡು ಬಾರಿ ದೋಷಾರೋಪಣೆ ಮಾಡಿದ ಮೊದಲ ಅಧ್ಯಕ್ಷ ಟ್ರಂಪ್ ಮೇಲೆ ಜನವರಿ 6 ರಂದು ಬಂಡಾಯ ಪ್ರಚೋದಿಸಿದ ಆರೋಪವಿದೆ, ಅವರ ಬೆಂಬಲಿಗರು ಗಲಭೆ ನಡೆಸಿದ್ದು, ಘಟನೆಯಲ್ಲಿ ಐದು ಜನರು ಮೃತಪಟ್ಟರು. ಗಲಭೆಯ ಮೊದಲು, ಟ್ರಂಪ್ ತಮ್ಮ ಬೆಂಬಲಿಗರಿಗೆ ತಮ್ಮ ಚುನಾವಣಾ ಸೋಲನ್ನು ಹಿಮ್ಮೆಟ್ಟಿಸಲು ಹೋರಾಡಿ ಎಂದು ಹೇಳಿದ್ದರು.
ಟ್ರಂಪ್ ವಕೀಲರಾದ ಬ್ರೂಸ್ ಕ್ಯಾಸ್ಟರ್ ಮತ್ತು ಡೇವಿಡ್ ಸ್ಕೋಯೆನ್, ಡೆಮೋಕ್ರಾಟ್‌ಗಳ ಆರೋಪಗಳನ್ನು ಸಾಬೀತುಪಡಿಸಲು ಸಾಧ್ಯವಿಲ್ಲ ಮತ್ತು ದೋಷಾರೋಪಣೆ ವಿಚಾರಣೆಗಾಗಿ ಇಂಥ ಕ್ಷುಲ್ಲಕ ಪ್ರಕ್ರಿಯೆ ನಡೆಸುವುದುತುಂಬಾ ಗಂಭೀರವಾಗಿದೆ ಎಂದು ತಿಳಿಸಿದ್ದಾರೆ.
ಟ್ರಂಪ್ ಅವರು ಅಧ್ಯಕ್ಷರಾಗಿದ್ದಾಗ ದೋಷಾರೋಪಣೆ ಮಾಡಿದ್ದರೂ ಸಹ ಅವರು ಅಧಿಕಾರದಲ್ಲಿಲ್ಲದ ಕಾರಣ ವಿಚಾರಣೆ ಅಸಂವಿಧಾನಿಕ ಎಂದು ರಕ್ಷಣಾ ವಕೀಲರು ಮತ್ತು ಅನೇಕ ಸೆನೆಟ್ ರಿಪಬ್ಲಿಕನ್ ವಾದಿಸಿದ್ದಾರೆ.

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement