ಮುಂಬೈ: ಉದ್ಯಮಿ ರತನ್ ಟಾಟಾ ಅವರಿಗೆ ಭಾರತ ರತ್ನ ನೀಡಬೇಕೆಂದು ಸಾಮಾಜಿಕ ಜಾಲತಾಣಗಳಲ್ಲಿ ನಡೆಯುತ್ತಿದ್ದ ಅಭಿಯಾನವನ್ನುನಿಲ್ಲಿಸುವಂತೆ ಕೋರಿರುವ ರತನ್ ಟಾಟಾ, ಯಾವುದೇ ಪ್ರಶಸ್ತಿಯ ಹಂಬಲ ತಮಗಿಲ್ಲ ಎಂದು ತಿಳಿಸಿದ್ದಾರೆ.
ಹಲವು ತಿಂಗಳುಗಳಿಂದ ಸೋಶಿಯಲ್ ಮೀಡಿಯಾದಲ್ಲಿ ಉದ್ಯಮಿ ರತನ್ ಟಾಟಾ ಅವರಿಗೆ ಭಾರತದ ಅತ್ಯುನ್ನತ ಗೌರವ ಭಾರತ ರತ್ನ ಪ್ರಶಸ್ತಿ ನೀಡಬೇಕೆಂದು ಅಭಿಯಾನ ನಡೆಯುತ್ತಿದೆ. ಇದಕ್ಕೆ ರತನ್ ಟಾಟಾ “ಸಾಮಾಜಿಕ ಜಾಲತಾಣದಲ್ಲಿ ಅಭಿವ್ಯಕ್ತವಾದ ಜನರ ಭಾವನೆಗಳಿಗೆ ನಾನು ಗೌರವ ನೀಡುತ್ತೇನೆ. ನನಗೆ ಯಾವುದೇ ಪ್ರಶಸ್ತಿ ಪಡೆಯುವ ಆಸೆಯಿಲ್ಲ. ಭಾರತದಲ್ಲಿ ಜನ್ಮ ತಳೆದಿರುವುದೇ ನನ್ನ ಅದೃಷ್ಟ. ಭಾರತದ ಪ್ರಗತಿಗೆ ನಾನು ನನ್ನ ಕೈಲಾದ ಕೊಡುಗೆ ನೀಡುತ್ತೇನೆ ಎಂದು ಟ್ವೀಟರ್‌ನಲ್ಲಿ ತಿಳಿಸಿದ್ದಾರೆ.
ಈವರೆಗೆ ಮಾಜಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿ, ನಾನಾಜಿ ದೇಶಮುಖ, ಭೂಪೆನ್ ಹಜಾರಿಕಾ, ಜೆಆರ್‌ಡಿ ಟಾಟಾ ಸೇರಿದಂತೆ ಹಲವರಿಗೆ ಭಾರತ ರತ್ನ ಗೌರವ ನೀಡಲಾಗಿದೆ. ರತನ್ ಟಾಟಾಗೆ 2000ರಲ್ಲಿ ಪದ್ಮಭೂಷಣ ಮತ್ತು 2008 ರಲ್ಲಿ ಪದ್ಮವಿಭೂಷಣ ಗೌರವ ಪ್ರದಾನ ಮಾಡಲಾಗಿದೆ.
ನಿಮ್ಮ ಕಾಮೆಂಟ್ ಬರೆಯಿರಿ