ಒಬಾಮಾಗೆ ನೀಡಿದಂತೆ ಪ್ರಧಾನಿ ಮೋದಿ ರೈತರಿಗೂ ಆತಿಥ್ಯ ನೀಡಲಿ

ಭರೂಚ್: ಅಮೆರಿಕದ ಹಿಂದಿನ ಅಧ್ಯಕ್ಷ ಬರಾಕ್ ಒಬಾಮಾಗೆ ೨೦೧೫ರಲ್ಲಿ ಆತಿಥ್ಯ ನೀಡಿದಂತೆ ಪ್ರಧಾನಿ ನರೇಂದ್ರ ಮೋದಿಯವರು ಪ್ರತಿಭಟನಾ ನಿರತ ರೈತರನ್ನು ತಮ್ಮ ನಿವಾಸಕ್ಕೆ ಆಹ್ವಾನಿಸಬೇಕು ಹಾಗೂ ನೂತನ ಕೃಷಿ ಕಾನೂನುಗಳನ್ನು ರದ್ದುಗೊಳಿಸಬೇಕು ಎಂದು ಎಐಎಂಐಎಂ ಮುಖ್ಯಸ್ಥ ಅಸದುದ್ದೀನ್ ಒವೈಸಿ ಹೇಳಿದ್ದಾರೆ.
ಭಾನುವಾರ ಗುಜರಾತ್‌ನ ಸ್ಥಳೀಯ ಸಂಸ್ಥೆಗಳಿಗೆ ಮುಂಬರುವ ಚುನಾವಣೆಗಾಗಿ ಸಭೆ ಉದ್ದೇಶಿಸಿ ಮಾತನಾಡಿದ ಅವರು, ಎರಡು ತಿಂಗಳಿನಿಂದ ದೆಹಲಿಯ ಗಡಿಯಲ್ಲಿ ಪ್ರತಿಭಟನೆ ನಡೆಸುತ್ತಿರುವ ರೈತರ “ ನೋವುಗಳನ್ನು ಅರ್ಥಮಾಡಿಕೊಳ್ಳಿ” ಎಂದು ಪ್ರಧಾನಿಗೆ ಮನವಿ ಮಾಡಿದರು.
. ಬರಾಕ್ ಒಬಾಮಾಗೆ ತಮ್ಮ ಕೈಯಿಂದ (2015 ರಲ್ಲಿ) ಚಹಾ ನೀಡಿದಂತೆ ಪ್ರಧಾನಿ ಮೋದಿಯವರು ರೈತರನ್ನು ತಮ್ಮ ನಿವಾಸಕ್ಕೆ ಆಹ್ವಾನಿಸಬೇಕು, ಅವರಿಗೆ ಚಹಾ ಮತ್ತು ಬಿಸ್ಕತ್ತುಗಳನ್ನು ನೀಡಿ ಕೃಷಿ ಮಾರುಕಟ್ಟೆ ಕಾನೂನುಗಳನ್ನು ರದ್ದುಪಡಿಸಲಾಗುತ್ತಿದೆ ತಿಳಿಸಬೇಕು ಎಂದು ಓವೈಸಿಒತ್ತಾಯಿಸಿದರು.

 

0 / 5. 0

ನಿಮ್ಮ ಕಾಮೆಂಟ್ ಬರೆಯಿರಿ

advertisement