12 ಭಾರತೀಯ ಯುವಕರನ್ನು ವಂಚಿಸಿ ರಷ್ಯಾದ ಪರ ಯುದ್ಧದಲ್ಲಿ ಹೋರಾಡಲು ಕಳುಹಿಸಿದ ಏಜೆಂಟರು : ಸರ್ಕಾರದ ಸಹಾಯ ಕೋರಿದ ಓವೈಸಿ

ನವದೆಹಲಿ: ರಷ್ಯಾದಲ್ಲಿ ಸಿಕ್ಕಿಬಿದ್ದಿರುವ ಯುವಕರನ್ನು ಸುರಕ್ಷಿತವಾಗಿ ಭಾರತಕ್ಕೆ ಸುರಕ್ಷಿತವಾಗಿ ಕರೆತರಲು ರಷ್ಯಾ ಸರ್ಕಾರದೊಂದಿಗೆ ಮಾತುಕತೆ ನಡೆಸುವಂತೆ ಹೈದರಾಬಾದ್ ಸಂಸದ ಅಸಾದುದ್ದೀನ್‌ ಓವೈಸಿ ಅವರು, ಪ್ರಧಾನಿ ಮೋದಿ ಮತ್ತು ವಿದೇಶಾಂಗ ಸಚಿವ ಎಸ್ ಜೈಶಂಕರ ಅವರನ್ನು ವಿನಂತಿಸಿದ್ದಾರೆ. ಹೈದರಾಬಾದ್‌ನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಒವೈಸಿ, ಕರ್ನಾಟಕ, ತೆಲಂಗಾಣ, ಗುಜರಾತ್, ಜಮ್ಮು ಮತ್ತು ಕಾಶ್ಮೀರ ಮತ್ತು ಉತ್ತರ ಪ್ರದೇಶಕ್ಕೆ ಸೇರಿದ … Continued

ಭಾರತದ ವಿಭಜನೆ ʼಐತಿಹಾಸಿಕ ಪ್ರಮಾದʼ, ಇದಕ್ಕೆ ದೇಶ ವಿಭಜನೆ ಸಮಯದ ಎಲ್ಲ ನಾಯಕರೂ ಹೊಣೆ: ಎಐಎಂಐಎಂ ಮುಖ್ಯಸ್ಥ ಅಸಾದುದ್ದೀನ್ ಓವೈಸಿ

ಹೈದರಾಬಾದ್‌ : ಭಾರತದ ವಿಭಜನೆ “ಐತಿಹಾಸಿಕ ಪ್ರಮಾದ” ಎಂದು ಬಣ್ಣಿಸಿದ ಎಐಎಂಐಎಂ ಮುಖ್ಯಸ್ಥ ಅಸಾದುದ್ದೀನ್ ಓವೈಸಿ ಸೋಮವಾರ (ಅಕ್ಟೋಬರ್ 16) ದೇಶವನ್ನು ಎಂದಿಗೂ ವಿಭಜಿಸಬಾರದಿತ್ತು ಎಂದು ಹೇಳಿದ್ದಾರೆ. ಭಾರತವು ಐತಿಹಾಸಿಕವಾಗಿ ಒಂದು ರಾಷ್ಟ್ರವಾಗಿದೆ ಮತ್ತು ದೇಶದ ವಿಭಜನೆ ನಡೆಯಬಾರದಿತ್ತು ಎಂದು ಓವೈಸಿ ಹೇಳಿದರು. ಅವರು 1947 ರಲ್ಲಿ ವಿಭಜನೆಯ ಸಮಯದಲ್ಲಿ ಲಭ್ಯವಿರುವ ಎಲ್ಲಾ ನಾಯಕರು ದೇಶದ … Continued

ವಯನಾಡಿನಿಂದಲ್ಲ, ನನ್ನ ವಿರುದ್ಧ ಹೈದರಾಬಾದ್‌ನಿಂದ ಚುನಾವಣೆಗೆ ಸ್ಪರ್ಧಿಸಿ: ರಾಹುಲ್ ಗಾಂಧಿಗೆ ಸವಾಲು ಹಾಕಿದ ಓವೈಸಿ

ಹೈದರಾಬಾದ್‌ : ಎಐಎಂಐಎಂ ಮುಖ್ಯಸ್ಥ ಅಸಾದುದ್ದೀನ್ ಓವೈಸಿ ಅವರು ರಾಹುಲ್ ಗಾಂಧಿಗೆ ಹೈದರಾಬಾದ್‌ನಿಂದ ಚುನಾವಣೆಗೆ ಸ್ಪರ್ಧಿಸುವಂತೆ ಸವಾಲು ಹಾಕಿದ್ದಾರೆ. ಭಾನುವಾರ (ಸೆಪ್ಟೆಂಬರ್ 24) ಹೈದರಾಬಾದಿನಲ್ಲಿ ಸಾರ್ವಜನಿಕ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಓವೈಸಿ, ಹೈದರಾಬಾದ್‌ನಿಂದ ಸ್ಪರ್ಧಿಸಿ ವಯನಾಡಿನಿಂದ ಅಲ್ಲ ಎಂದು ಅವರು ರಾಹುಲ್ ಗಾಂಧಿಯವರ ಕೇರಳದ ಲೋಕಸಭಾ ಕ್ಷೇತ್ರವನ್ನು ಉಲ್ಲೇಖಿಸಿ ಹೇಳಿದ್ದಾರೆ. ರಾಹುಲ್‌ ಗಾಂಧಿಗೆ ಬಹಿರಂಗ ಸವಾಲು … Continued

ಉತ್ತರ ಪ್ರದೇಶ ಚುನಾವಣೆ: ಮಾಯಾವತಿ-ಕಾಂಗ್ರೆಸ್‌-ಓವೈಸಿ ಪ(ಒ)ಡೆಯುವ ಮತಗಳು ಅಖಿಲೇಶ್ ಯಾದವ್ ಅಧಿಕಾರದ ಕನಸು ನನಸಿಗೆ ಅಡ್ಡಿಯಾಗಬಹುದೇ…?

ಬಹುಜನ ಸಮಾಜ ಪಕ್ಷ (ಬಿಎಸ್‌ಪಿ) ಮುಖ್ಯಸ್ಥೆ ಮಾಯಾವತಿ ಅವರು ಮೌನವಾಗಿರುವುದು ಚುನಾವಣೆ ನಡೆಯುತ್ತಿರುವ ಉತ್ತರ ಪ್ರದೇಶದ ರಾಜಕೀಯದಲ್ಲಿ ಕುತೂಹಲಕ್ಕೆ ಕಾರಣವಾಗಿದೆ. ಆಡಳಿತಾರೂಢ ಭಾರತೀಯ ಜನತಾ ಪಕ್ಷಕ್ಕೆ (ಬಿಜೆಪಿ) ಸಮಾಜವಾದಿ ಪಕ್ಷ (ಎಸ್‌ಪಿ) ಬಹು ಹಂತದ ವಿಧಾನಸಭೆ ಚುನಾವಣೆಯಲ್ಲಿ ಅಧಿಕಾರ ಹಿಡಿಯಲು ಶತಾಯ-ಗತಾಯ ಪ್ರಯತ್ನ ನಡೆಸುತ್ತಿದ್ದು, ಕಾಂಗ್ರೆಸ್ ಅಸ್ತಿತ್ವಕ್ಕಾಗಿ ಹೋರಾಡುತ್ತಿದೆ. ಈ ಮಧ್ಯೆ ಉತ್ತರ ಪ್ರದೇಶದಲ್ಲಿ ಪ್ರಮುಖ … Continued

ಟಿಎಂಸಿಯದು ಇಬ್ಬಗೆಯ ನಿಲುವು: ಅಸಾದುದ್ದಿನ್‌ ಓವೈಸಿ ಆರೋಪ

ಹೈದರಾಬಾದ್:‌ ಚುನಾವಣಾ ರ್ಯಾಲಿ ಆಯೋಜಿಸಲು ಅನುಮತಿ ನೀಡದ ಪಶ್ಚಿಮ ಬಂಗಾಳದ ಸರಕಾರವನ್ನು ತರಾಟೆಗೆ ತೆಗೆದುಕೊಂಡಿರುವ ಎಐಐಎಂ ಮುಖ್ಯಸ್ಥ ಅಸಾದುದ್ದಿನ್‌ ಓವೈಸಿ, ತೃಣಮೂಲ ಕಾಂಗ್ರೆಸ್‌ನದು ಇಬ್ಬಗೆಯ ನಿಲುವು ಎಂದು ಜರಿದಿದ್ದಾರೆ. ಅಭಿವ್ಯಕ್ತಿ ಸ್ವಾತಂತ್ರ್ಯದ ಬಗ್ಗೆ ಮಾತನಾಡಿದ್ದ ಟಿಎಂಸಿ ಮುಖಂಡರು ಈಗ ನಮ್ಮ ಪಕ್ಷಕ್ಕೆ ರ್ಯಾಲಿ ನಡೆಸಲು ಅನುಮತಿ ನೀಡದೇ ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ವಿರೋಧ ಮಾಡುತ್ತಿದ್ದಾರೆ. ಇದು ಅವರ … Continued

ಸಮಾವೇಶಕ್ಕೆ ಅನುಮತಿ ನಿರಾಕರಣೆ ಅಧಿಕಾರದ ದುರುಪಯೋಗ

ಕೊಲ್ಕತ್ತಾ:ಚುನಾವಣೆ ಸಮೀಪಿಸುತರುವ ಪಶ್ಚಿಮ ಬಗಾಳದಲ್ಲಿ ಅಸದುದ್ದೀನ್ ಒವೈಸಿ ಅವರ ಮೊದಲ ಸಮಾವೇಶಕ್ಕೆ ಅನುಮತಿ ನಿರಾಕರಿಸಿದ್ದಕ್ಕಾಗಿ ಕೋಲ್ಕತಾ ಆಡಳಿತವು “ಅಧಿಕಾರವನ್ನು ದುರುಪಯೋಗಪಡಿಸಿಕೊಂಡಿದೆ” ಎಂದು ಅಖಿಲ ಭಾರತ ಮಜ್ಲಿಸ್-ಎ-ಇಟ್ಟೇಹದುಲ್ ಮುಸ್ಲಿಮೀನ್ (ಎಐಐಎಂ) ಕೋಲ್ಕತಾ ವಿಭಾಗ ಗುರುವಾರ ಆರೋಪಿಸಿದೆ. ಎಐಎಂಐಎಂ ನಾಯಕ ಜಮೀರುಲ್ ಹಸನ್ ಆಡಳಿತವು ನಮಗೆ ಅಗತ್ಯವಾದ ಅನುಮತಿ ನೀಡದ ಕಾರಣ ನಾವು ಸಮಾವೇಶ ರದ್ದುಗೊಳಿಸಬೇಕಾಯಿತು. ಹತ್ತು ದಿನಗಳ … Continued

ಒಬಾಮಾಗೆ ನೀಡಿದಂತೆ ಪ್ರಧಾನಿ ಮೋದಿ ರೈತರಿಗೂ ಆತಿಥ್ಯ ನೀಡಲಿ

ಭರೂಚ್: ಅಮೆರಿಕದ ಹಿಂದಿನ ಅಧ್ಯಕ್ಷ ಬರಾಕ್ ಒಬಾಮಾಗೆ ೨೦೧೫ರಲ್ಲಿ ಆತಿಥ್ಯ ನೀಡಿದಂತೆ ಪ್ರಧಾನಿ ನರೇಂದ್ರ ಮೋದಿಯವರು ಪ್ರತಿಭಟನಾ ನಿರತ ರೈತರನ್ನು ತಮ್ಮ ನಿವಾಸಕ್ಕೆ ಆಹ್ವಾನಿಸಬೇಕು ಹಾಗೂ ನೂತನ ಕೃಷಿ ಕಾನೂನುಗಳನ್ನು ರದ್ದುಗೊಳಿಸಬೇಕು ಎಂದು ಎಐಎಂಐಎಂ ಮುಖ್ಯಸ್ಥ ಅಸದುದ್ದೀನ್ ಒವೈಸಿ ಹೇಳಿದ್ದಾರೆ. ಭಾನುವಾರ ಗುಜರಾತ್‌ನ ಸ್ಥಳೀಯ ಸಂಸ್ಥೆಗಳಿಗೆ ಮುಂಬರುವ ಚುನಾವಣೆಗಾಗಿ ಸಭೆ ಉದ್ದೇಶಿಸಿ ಮಾತನಾಡಿದ ಅವರು, ಎರಡು … Continued