ಚೀನಾದ ಮಾನವ ಹಕ್ಕುಗಳ ಹೋರಾಟಗಾರ ನಾಪತ್ತೆ

ಬೀಜಿಂಗ್‌: ದೇಶದಿಂದ ಹೊರಹೋಗದಂತೆ ನಿರ್ಬಂಧಿಸಿದ ನಂತರ ಚೀನಾದ ಮಾನವ ಹಕ್ಕುಗಳ ಹೋರಾಟಗಾರ ಗುವೊ ಫಿಕ್ಸಿಯಾಂಗ್ ಅವರಿಗೆ ತಮ್ಮ ಕುಟುಂಬವನ್ನು ಸೇರಲು ನಿರ್ಬಂಧಿಸಲಾಗಿದೆ ಎಂದು ಅವರ ಸಹೋದರಿ ಹೇಳಿದ್ದಾರೆ.
ಅಮೆರಿಕಕ್ಕೆ ತೆರಳಲು ವಿಮಾನ ಹತ್ತಲು ಪ್ರಯತ್ನಿಸುವಾಗ ಶಾಂಘೈನ ಪುಡಾಂಗ್ ವಿಮಾನ ನಿಲ್ದಾಣದಲ್ಲಿ ಅವರು ಬಂಧನಕ್ಕೊಳಗಾದ ನಂತರ ಗುವೊ ಅವರಿಂದಾಗಲೀ ಅಥವಾ ಪೊಲೀಸರಿಂದಅಗಲೀ ಯಾವುದೇ ಮಾಹಿತಿ ಇಲ್ಲ ಎಂದು ಯಾಂಗ್ ಮಾಪಿಂಗ್ ಹೇಳಿದ್ದಾರೆ.
ಕ್ಯಾನ್ಸರ್ ಚಿಕಿತ್ಸೆ ಪಡೆಯುತ್ತಿರುವ ತನ್ನ ಹೆಂಡತಿಯೊಂದಿಗೆ ಇರಲು ದೇಶವನ್ನು ಬಿಡಲು ಅವಕಾಶ ನೀಡದಿದ್ದರೆ ಉಪವಾಸ ಸತ್ಯಾಗ್ರಹ ಮಾಡುವುದಾಗಿ ಗುಯೋ ಸ್ನೇಹಿತರಿಗೆ ಸಂದೇಶ ಕಳುಹಿಸಿದ್ದ.
ನಾನು ರಾಜ್ಯವನ್ನು ತೊರೆಯಲು ಸಾಧ್ಯವಿಲ್ಲ ಎಂದು ನನಗೆ ತಿಳಿಸಲಾಗಿದೆ. ಏಕೆಂದರೆ ನಾನು ರಾಜ್ಯ ಭದ್ರತೆಗೆ ಅಪಾಯವನ್ನುಂಟುಮಾಡುತ್ತಿದ್ದೇನೆ ಎಂಬ ಅಉಮಾನವಿದೆ. ನಾನು ಈಗ ಅನಿರ್ದಿಷ್ಟ ಉಪವಾಸ ಸತ್ಯಾಗ್ರಹಕ್ಕೆ ಹೋಗುತ್ತೇನೆ ಎಂದು ಗುವೊ ಸ್ನೇಹಿತರಿಗೆ ಹಾಗೂ ಪತ್ರಕರ್ತರಿಗೆ ಸಂದೇಶ ಕಳುಹಿಸಿದ್ದಾರೆ. ಗುವೊ ಚೀನಾದ ರಾಜ್ಯ ಭದ್ರತಾ ಕಾನೂನುಗಳ ಅಡಿಯಲ್ಲಿ 10 ವರ್ಷಗಳಿಗಿಂತ ಹೆಚ್ಚು ಕಾಲ ಜೈಲಿನಲ್ಲಿದ್ದರು.

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement