ಪಾಕಿಸ್ಥಾನ ಸೇನೆಗೆ ಚೀನಾದಿಂದ ೫ ಲಕ್ಷ ಕೊವಿಡ್‌ ಲಸಿಕೆ

ಇಸ್ಲಾಮಾಬಾದ್: ಚೀನಾದಿಂದ 5,00,000 ಡೋಸ್ ಕೊರೋನಾ ಲಸಿಕೆಯನ್ನು ಪಾಕಿಸ್ಥಾನ ಸೈನಿಕರಿಗೆ ನೀಡಲಾಗಿದೆ.
ಚೀನಾ ಸೈನ್ಯದಿಂದ ಕೋವಿಡ್ -19 ಲಸಿಕೆ ನೆರವು ಪಡೆದ ಮೊದಲ ವಿದೇಶಿ ಸೈನ್ಯ ಎಂಬ ಹೆಗ್ಗಳಿಕೆಗೆ ಪಾಕಿಸ್ತಾನ ಸೇನೆಯು ಪಾತ್ರವಾಗಿದೆ ಎಂದು ಪೀಪಲ್ಸ್ ಲಿಬರೇಶನ್ ಆರ್ಮಿ (ಪಿಎಲ್‌ಎ) ಹೇಳಿಕೆಯಲ್ಲಿ ತಿಳಿಸಿದೆ.
ಆದಾಗ್ಯೂ, ಪಾಕಿಸ್ತಾನ ಸೇನೆಗೆ ಎಷ್ಟು ಲಸಿಕೆಗಳನ್ನು ಸರಬರಾಜು ಮಾಡಲಾಗಿದೆ ಎಂದು ಹೇಳಿಕೆಯಲ್ಲಿ ಉಲ್ಲೇಖಿಸಿಲ್ಲ. ಚೀನಾದ ಸೈನ್ಯದಿಂದ ಕೋವಿಡ್ -19 ಲಸಿಕೆ ನೆರವು ಪಡೆದ ವಿದೇಶಿ ಮಿಲಿಟರಿಯ ಮೊದಲ ಬ್ಯಾಚ್‌ನಲ್ಲಿ ಕಾಂಬೋಡಿಯನ್ ಸೈನ್ಯವೂ ಸೇರಿದೆ ಎಂದು ಸರ್ಕಾರಿ ಸಿನ್ಹುವಾ ಸುದ್ದಿ ಸಂಸ್ಥೆ ವರದಿ ಮಾಡಿದೆ.
ಪಾಕಿಸ್ತಾನಕ್ಕೆ ಚೀನಾ ಒದಗಿಸಿದ ಐದು ಲಕ್ಷ ಲಸಿಕೆಗೆ ಹೆಚ್ಚುವರಿಯಾಗಿ ಪಾಕಿಸ್ತಾನ ಸೈನ್ಯಕ್ಕೆ ಲಸಿಕೆಗಳನ್ನು ನೀಡಲಾಗುತ್ತದೆ ಎಂದು ವರದಿಯಾಗಿದೆ.

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement