ಬಾಡಿಗೆ ಟ್ರೋಲ್ ಸೈನ್ಯವನ್ನು ಸೆದೆಬಡಿಯುವುದಕ್ಕಾಗಿ ಸಾಮಾಜಿಕ ಜಾಲತಾಣಗಳ ಯೋಧರಾಗಲು ಕಾಂಗ್ರೆಸ್ ಸೇರುವಂತೆ ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಯುವಕರಿಗೆ ಕರೆ ನೀಡಿದ್ದಾರೆ.
ರಾಹುಲ್ ಗಾಂಧಿ ಟ್ವಿಟರ್‌ನಲ್ಲಿ, ಉದಾರ ಮೌಲ್ಯಗಳನ್ನು ಕಾಪಾಡುವುದಕ್ಕಾಗಿ ಹಳೆಯ ಪಕ್ಷವಾದ ಕಾಂಗ್ರೆಸ್‌ಗೆ ಸೇರುವಂತೆ ಕೋರಿದ್ದಾರೆ. ದೇಶಾದ್ಯಂತ ದಬ್ಬಾಳಿಕೆಯ ಆಡಳಿತ ನಡೆದಿದೆ. ದ್ವೇಷ ಹರಡಲು ಹಣ ಹಂಚಲಾಗುತ್ತಿದೆ. ಬಾಡಿಗೆ ಟ್ರೋಲ್ ಸೈನ್ಯ ಇದರ ವ್ಯಾಪಕವಾಗಿ ಅಪಪ್ರಚಾರ ನಡೆಸುತ್ತಿದೆ. ಶಾಂತಿ, ಸಾಮರಸ್ಯ ರಕ್ಷಣೆಗೆ ನಮಗೆ ಯೋಧರು ಬೇಕು. ಇದು ದ್ವೇಷದ ಸೇನೆಯಲ್ಲ, ಹಿಂಸಾಚಾರದ ಸೇನೆಯಲ್ಲ, ಸತ್ಯದ ವಿಚಾರಗಳನ್ನು ರಕ್ಷಿಸಲು ಹೊರಟಿರುವ ಸೇನೆ ನಮ್ಮದಾಗಿದೆ. ಯುವಕರು ಇಂಥ ಪಡೆಗೆ ಸೇರ್ಪಡೆಗೊಳ್ಳಬೇಕು. ಅಸತ್ಯದ ವಿರುದ್ಧದ ಹೋರಾಟದಲ್ಲಿ ಕಾಂಗ್ರೆಸ್ ಸೂಕ್ತ ವೇದಿಕೆ ಒದಗಿಸುತ್ತಿದೆ ಎಂದು ತಿಳಿಸಿದರು.
ವಿಶೇಷವೆಂದರೆ, ರಾಹುಲ್ ಗಾಂಧಿ ಇತ್ತೀಚೆಗೆ ಸಾಮಾಜಿಕ ಮಾಧ್ಯಮದಲ್ಲಿ ಸಾಕಷ್ಟು ಸಕ್ರಿಯರಾಗಿದ್ದಾರೆ, ಅದರಲ್ಲೂ ವಿಶೇಷವಾಗಿ ಮೂರು ವಿವಾದಾತ್ಮಕ ಕೃಷಿ ಕಾನೂನುಗಳ ಬಗ್ಗೆ ನಡೆಯುತ್ತಿರುವ ರೈತರ ಪ್ರತಿಭಟನೆಯ ಬಗ್ಗೆ ಕೇಂದ್ರ ಸರ್ಕಾರವನ್ನು ಎದುರಿಸುವಲ್ಲಿ ನಿರಂತರ ಟೀಕೆಗಳ ಟ್ವೀಟ್ ಮಾಡುತ್ತಿದ್ದಾರೆ.
ನಿಮ್ಮ ಕಾಮೆಂಟ್ ಬರೆಯಿರಿ